ನೀರೆಂಬೋ ಜೀವನ
ಪ್ರಜ್ಞಾ ಮತ್ತೀಹಳ್ಳಿ
ಅಮ್ಮನ ಮನೆಯಲ್ಲಿ
ಗುಡ್ಡದ ತುದಿಯ
ಕಾಡ ಝರಿ ಹರಣಿಯಲಿ
ಹರಿಹರಿದು ಸದಾ
ಸುರಿಯುತ್ತ ಬೇಕಾದಷ್ಟು
ತುಂಬಿ ತುಳುಕಿ ಕಾಲುವೆ
ಹಿತ್ತಿಲ ಹಸಿರು ಹಚ್ಚಗೆ
ಜುಳುಜುಳು ಹಾಡು
ಅಮ್ಮನಿಗೆ ನೀರು ಸಸಾರ
ಅರೆಬರದ ನಮ್ಮೂರಲಿ
ನಾಕು ದಿನಕ್ಕೊಮ್ಮೆ
ಸೊರಗುಡುವ ನಳದ
ಸಡಗರಕ್ಕಾಗಿ ಸದಾ
ಕಾಯುತ್ತಲೇ ತುಂಬಿದ್ದು
ಬರಿದಾಗದಂತೆ ಕಾಯುತ್ತ
ಉಳಿಸುತ್ತಲೇ ಬಳಸುವ
ಬಳಸುವಾಗೂ ಉಳಿಸುವ
ನನಗೆ ನೀರೆಂದರೆ ತತ್ವಾರ
ಸುರಿಯುವಾಗ ತುಂಬಲು
ಬೇಸರಿಸಿಕೊಳ್ಳುತ್ತ
ಬೇಕಾದಾಗ ಕಾಯಲೂ
ಅವಸರಿಸಿಕೊಳ್ಳುತ್ತ
ಸರಕ್ಕನೆ ಕೊಡ ಹಿಡಿದು
ಅಲ್ಲಿ ಇಲ್ಲಿ ಹೊಂಚಿ-ಗಿಂಜಿ
ಹೊಂದಿಸಿ ಸಂಪಾದಿಸುವ
ಮಗಳಿಗೆ ನೀರು ಹುನ್ನಾರ






chennagide kavana …
ardakke ninta hAge kANuttade