ನಾನು ಇಡಿಯಾಗಿ ನೆಂದ
ಜೋರು ಮಳೆಯ ರಾತ್ರಿ
ಮನೆಯೊಳಗೆ ಕಾಲಿಡುತ್ತಲೆ
ಕೇಳಿದ ಅಣ್ಣ “ಒಯ್ಯಬಾರದಿತ್ತೇ ಛತ್ರಿ”
ದಾವಣಿ ಸರಿಪಡಿಸುತ್ತಾ ಬಂದು
ಪಿಸುಗುಟ್ಟಿದಳು ತಂಗಿ
” ಮಳೆ ನಿಲ್ಲುವವರೆಗೆ ತಡೆದು
ಬರಬಾರದಿತ್ತೇ ಕಮಂಗಿ”
ಅಷ್ಟರಲ್ಲಿ ಗುಡುಗುಟ್ಟಿತು
ಅಪ್ಪನ ಗಡಸು ಧ್ವನಿ
” ಶೀತಜ್ವರ ಬಂದರೆ ದುಡ್ದಿಡಬೇಕು
ಹುಡುಗಾಟ ಬಿಡೋ ಶನಿ”
ಮೃದು ಕೈಯಲಿ ತಲಿ ಒರೆಸುತ್ತಾ
ಅಮ್ಮ ದೂರಿದಳು ಮಮತೆಯಲಿ
“ಹಾಳು ಮಳೆಯೇ ತಡಿಯಬಾರದಿತ್ತೇ
ಮಗ ಕಾಲಿಡುವ ತನಕ ಮನೆಯಲಿ”]]>
ಹೌದು ಇದು ಅಪ್ಪಟ ಸತ್ಯ . ಆದರೆ ಆ ಪೊರೆದ ತಾಯಿ ಇಳಿವಯಸಿನಲ್ಲಿದ್ದಾಗ ನೋಡಲಾಗದ ಸ್ತಿತಿ ಆ ಸ್ತಿತಿಯನ್ನು ನಿರ್ಮಾಣ ಮಡಿದ ಮತ್ತೊಬ್ಬ ತಾಯಿ ಇದು ಕೂಡ ವಾತ್ಸವವಲ್ಲವೆ, ಹಾಗಿದ್ದರೆ ಹೆನ್ನೇಕೆ ಹೀಗೆ .
ಹೌದು ಇದು ಅಪ್ಪಟ ಸತ್ಯ . ಆದರೆ ಆ ಪೊರೆದ ತಾಯಿ ಇಳಿವಯಸಿನಲ್ಲಿದ್ದಾಗ ನೋಡಲಾಗದ ಸ್ತಿತಿ ಆ ಸ್ತಿತಿಯನ್ನು ನಿರ್ಮಾಣ ಮಡಿದ ಮತ್ತೊಬ್ಬ ತಾಯಿ ಇದು ಕೂಡ ವಾತ್ಸವವಲ್ಲವೆ, ಹಾಗಿದ್ದರೆ ಹೆನ್ನೇಕೆ ಹೀಗೆ .