ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಕ ಗುಕ್ಕನೆ ನಿಂತಂತೆ..

ದಿನೇಶ್ ಕುಕ್ಕುಜಡ್ಕ

 

ಅಪ್ಪನ ಮೊಬೈಲು
ಮೂರನೇ ಬಾರಿ
ಬಡಕೊಂಡಿತು.

ಜಗದ ಗೊಡವೆಯ ತೊರೆದ
ಮಹಾ ತಾಪಸಿಯಂತೆ,
ಅಮ್ಮನೆದೆಗೆ ಜೋತು
ತೊಟ್ಟು ಚೀಪುತ್ತಿತ್ತು
ಮಗು.

ಹೊತ್ತು ಜಾರಿತು……

ಒಮ್ಮೆಲೆ,
ದೂರ ಕಪಾಟಲ್ಲಿದ್ದ
ಅಮ್ಮನ ಮೊಬೈಲ ಮೊರೆತ
“ಚಿಣುಕು ಚಿಣ ಚಿಣ ಚಿಣ…..”

ಲೋಕ ಗುಕ್ಕನೆ ನಿಂತಂತೆ………

ಕತ್ತು ಹೊರಳಿಸಿ ತುಸುವೇ,
ಜಿನುಗಿ ಸುರಿವ
ಹಾಲ್ದೊಟ್ಟ ಮೆತ್ತನೆ ಕಚ್ಚಿ
“ಊಂ ಊಂ ಊಂ….”
ಕನಲಿತು ಮಗು.

ಬೆತ್ತಲ ಋಷಿ…!

ಹಾ!
ತಾಯಿಗೇ ವರವೀಯುವ

ಸ್ವರ್ಗ ಸಂಭ್ರಮಕೆ
ಕಿಚ್ಚು ಬೀಳುವೆಡೆಯೆಲ್ಲ…..

ಮುಲುಮುಲು ಮುನಿದು
ಮೊಲೆಗೈಯೆತ್ತಿ ಮಿಡುಕುವ
ಅದರ
ದೇವಮುನಿಸಿಗೆ
ಶರಣು!

 

‍ಲೇಖಕರು admin

11 April, 2017

1 Comment

  1. Harish kera

    ದೇವಮುನಿಸಿಗೆ ಶರಣು- ಆಹಾ ಈ ಲೈನು ನನ್ನನ್ನು ಕ್ಯಾಚ್ ಹಾಕ್ಕೊಂಡಿದೆ. ಒಳ್ಳೆ ಪದ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading