ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮೇರಿಕಾಕ್ಕೆ ಒಂದು ಪ್ರಶ್ನೆ..

ಎಲ್ಲಿಯ ತನಕ ನಿನ್ನ ಅಧಿಕಾರ?
(ಜಗತ್ತಿನ ದೊಡ್ಡಣ್ಣ ಅನಿಸಿಕೊಂಡ ಅಮೇರಿಕಾಕ್ಕೆ ಒಂದು ಪ್ರಶ್ನೆ..)

ಕು.ಸ. ಮಧುಸೂದನ

ಸಕಲವನೂ ಗೆದ್ದು
ಸಾಮ್ರಾಜ್ಯ ಸ್ಥಾಪಿಸಿಕೊಂಡು
ಏನು ಮಾಡುತ್ತೀಯಾ?
ಎಲ್ಲಿಯವರೆಗು ಆಳುತ್ತೀಯಾ?

ಭೂಮಿಯ ಸಣ್ಣದೊಂದು ಕಂಪನ
ಚಕ್ರಾಧಿಪತ್ಯದ ನಿನ್ನ
ಕಿರೀಟವನ್ನ
ಧರೆಗುರುಳಿಸಬಲ್ಲದು!

ಮುನಿಸಿಕೊಂಡು ಮುರಿದು ಬೀಳುವ ಮಳೆ
ಗೆಲುವಿನ ನಿನ್ನೆಲ್ಲ
ಸ್ಮಾರಕ- ಸ್ಥಾವರಗಳನ್ನು
ಕ್ಷಣಾರ್ದದಲ್ಲಿ
ನೆಲಸಮ ಮಾಡಬಲ್ಲದು!

ಸಿಡುಕ ಸೂರ್ಯನ ಕೋಪದ ಕಿರಣವೊಂದು
ನಿನ್ನ ನೆಲದ ಹಸಿರೆಲ್ಲವನು
ಸುಟ್ಟು ಬೂದಿ ಮಾಡಬಲ್ಲದು!

ಇಷ್ಟೆಲ್ಲ ಗೊತ್ತಿದ್ದೂ
ನಿನ್ನ ಅಧಿಕಾರದ ಅಮಲು
ಇಳಿಯಲಿಲ್ಲವೆಂದರೆ
ನೀನು ನಿನ್ನನ್ನು ಮಾತ್ರವಲ್ಲ
ಸಕಲ ಜೀವರಾಶಿಗಳ ಸರ್ವನಾಶಕ್ಕೆ
ಸಿದ್ದತೆ
ಮಾಡಿಕೊಳ್ಳುತ್ತಿದ್ದೀಯಾ
ಎಂದರ್ಥ
ಬಿಡು ಜಗವನೆಲ್ಲ ಆಠಳುವ ಪ್ರಯತ್ನ
ಎಲ್ಲ
ವ್ಯರ್ಥ!

‍ಲೇಖಕರು avadhi

24 February, 2020

4 Comments

  1. T S SHRAVANA KUMARI

    ಚೆನ್ನಾಗಿದೆ. ಇಷ್ಟವಾಯಿತು.

    • ಕು.ಸ.ಮಧುಸೂದನ್ ರಂಗೇನಹಳ್ಳಿ

      ದನ್ಯವಾದಗಳು ಮೇಡಂ

  2. nagraj harapanahalli

    ಪ್ರಶ್ನಿಸುವುದು ಕವಿತೆ…ಕಾವ್ಯ ಮಾಡಬೇಕಾದುದು ಇದನ್ನೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading