ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಮೃತ ಸಿಗದವರು' – ಒ ಎನ್ ವಿ ಕುರುಪ್ ಕವಿತೆ

ನಾ.ದಾಮೋದರ ಶೆಟ್ಟಿ

(ಮಲಯಾಳಮೂಲ: ಒ.ಎನ್.ವಿ.ಕುರುಪ್ )

ಮಳೆ ಬರುತ್ತಲಿದೆ ಮಗೂ,
ಹಿತ್ತಿಲಲಿ ಕಾಲುವೆಯೆದ್ದಿದೆ, ಮತ್ತು-
ನಿನ್ನ ಖುಷಿಗೆ ಕಾಗದದ ದೋಣಿಗಳು..
 
ಒಂದೊಂದಾಗಿ ನೀನವನ್ನು ನೀರಿಗಿಳಿಸು,
ನೋಡುತ್ತ ನೋಡುತ್ತ ಆಹ್ಲಾದಿಸು.
ನೀನೋರ್ವ ದಂತಕತೆಯ ದೇವರಂತೆ
ಕುಳಿತು, ಹಡಗುಗಳನ್ನು
ದೂರದೂರುಗಳಿಗೆ ಕಳುಹಿಸು.
ನಿನ್ನ ಹಿಂದೆಯೆ ಕುಳಿತ ನಾನು
ಸಕಲ ದೃಶ್ಯಗಳನ್ನು ನೋಡಿ ಖುಷಿಪಡುವೆ.
 
ನಿನ್ನ ಪೂರ್ವಜರು-ನಿನಗವರ ಗೊತ್ತಿಲ್ಲ-
ದೂರದಿಂದಿದನು ನೋಡುವರು. ಅವರ
ಆನಂದ ಭಾಷ್ಪಗಳಂತೆ ಮಳೆಹನಿಗಳಲ್ಲಲ್ಲಿ
ಉದುರುವುವು. ಹೊಸಮಳೆಯ ಪುಟ್ಟಹನಿ
ನೆಲದ ನೀರಿಗೆ ಬಿದ್ದು ಹೂವಿನಾ ತೆರದ ವೃತ್ತಗಳ
ಸೃಜಿಸುವುವು.
 
ಮತ್ತೊಂದು ಗಳಿಗೆಯಲಿ ನಿನ್ನ ಮುಖ
ಕಪ್ಪಿಡುವುದು ಮಗೂ: ‘ಮಳೆ ಮತ್ತೂ ಸುರಿದೀತೆ?
ದೋಣಿಗಳು ಮುಳುಗಿಯಾವೆ?’
 
ಅಮೃತದ ಪರಿಶದ್ಧ ಸವಿಯನನುಭವಿಸಲಾಗದ
ನತದೃಷ್ಟರು ನಾವು. ನಮಗೊದಗಲೂ ಒದಗದಿರಲೂ
ಬಹುದಾದ ವಸ್ತುಗಳಿಗೆ ಹಪಹಪಿಸುವೆವು.
 

‍ಲೇಖಕರು avadhi

15 July, 2013

3 Comments

  1. pravara kottur

    tumba chennagide sir, ista aytu

  2. mmshaik

    nice..thanks sir.

  3. Damodara shetty n

    Dhanyavaadagalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading