ಸಮ್ಮೇಳನಕ್ಕೆ ಹೋಗಿದ್ದ ಅವಧಿ ತಂಡ ಅಲ್ಲಿನ ಪುಸ್ತಕ ಮಳಿಗೆಗಳಿಗೂ ಭೇಟಿ ಕೊಟ್ಟಿತ್ತು.
ಕೈಲಿದ್ದಿದ್ದು, ಮೂರು ಪ್ರಶ್ನೆ, ಭೇಟಿ ಮಾಡಿದ್ದು ಮೂರು ಪುಸ್ತಕ ಮಳಿಗೆಗಳನ್ನು.
ಪ್ರಶ್ನೆ ಮತ್ತು ಉತ್ತರ ನಿಮಗಾಗಿ :
ಮೂರು ಮಳಿಗೆಗಳು ಮೂರು ಸಹಜ ಒಂದೇ ನಮೂನೆಯ ಪ್ರಶ್ನೆಗಳಿಗೆ ಇಲ್ಲಿದೆ ವಿಭಿನ್ನ ಉತ್ತರ :
ಅಭಿನವ
ಈ ಬಾರಿಯ ವ್ಯಾಪಾರ ಹೇಗಿದೆ ?
ವ್ಯಾಪಾರ ನಿಧಾನಗತಿಯಲ್ಲಿದೆ
ಬಿಜಾಪುರ ಸಮ್ಮೇಳನಕ್ಕೂ ಇಲ್ಲಿಗೂ ವ್ಯಾಪಾರದ ವ್ಯತ್ಯಾಸವೇನು ?
ಬಿಜಾಪುರ ಸಮ್ಮೇಳನದಲ್ಲಿ ಹೆಚ್ಚು ಪುಸ್ತಕಗಳು ಖರೀದಿಯಾಗಿದ್ದವು
ಯಾವ ಪುಸ್ತಕಗಳು ಹೆಚ್ಚಾಗಿ ಖರೀದಿಯಾಗಿವೆ ?
ದೇವನೂರ ಮಹದೇವರ ಎದೆಗೆ ಬಿದ್ದ ಅಕ್ಷರ

ಪಲ್ಲವ
ಈಬಾರಿಯ ವ್ಯಾಪಾರ ಹೇಗಿದೆ ?
ವ್ಯಾಪಾರ ಪರ್ವಾಗಿಲ್ಲ
ಬಿಜಾಪುರ ಸಮ್ಮೇಳನಕ್ಕೂ ಇಲ್ಲಿಗೂ ವ್ಯಾಪಾರದ ವ್ಯತ್ಯಾಸವೇನು ?
ಬಿಜಾಪುರದ ಸಮ್ಮೇಳನದಲ್ಲಿ ವ್ಯಾಪಾರ ಜೋರಾಗಿತ್ತು
ಯಾವ ಪುಸ್ತಕಗಳು ಹೆಚ್ಚಾಗಿ ಖರೀದಿಯಾಗಿವೆ ?
ಅಮರೇಶ ನುಗಡೋಣಿ, ನಟರಾಜ್ ಹುಳಿಯಾರ್, ಆರಿಫ್ ರಾಜ್ ರ ಕೃತಿಗಳು ಜಾಸ್ತಿ ಮಾರಾಟವಾಗಿವೆ.
ಆಕೃತಿ

ಈಬಾರಿಯ ವ್ಯಾಪಾರ ಹೇಗಿದೆ ?
ವ್ಯಾಪಾರ ಸಮಾಧಾನ ತಂದಿದೆ
ಬಿಜಾಪುರ ಸಮ್ಮೇಳನಕ್ಕೂ ಇಲ್ಲಿಗೂ ವ್ಯಾಪಾರದ ವ್ಯತ್ಯಾಸವೇನು ?
ಬಿಜಾಪುರದ ಸಮ್ಮೇಳನದಲ್ಲಿ ಇದಕ್ಕಿಂತ ಕೊಂಚ ಜಾಸ್ತಿ ವ್ಯಾಪಾರವಾಗಿತ್ತು
ಯಾವ ಪುಸ್ತಕಗಳು ಹೆಚ್ಚಾಗಿ ಖರೀದಿಯಾಗಿವೆ ?
ಮಂಕು ತಿಮ್ಮನ ಕಗ್ಗ ಮಹಾಭಾರತ, ರಾಮಾಯಣ, ಸಮಗ್ರ ಸಾಹಿತ್ಯ, ಶಿವರುದ್ರಪ್ಪ, ನಾ.ಡಿಸೋಜ,ಡಿ.ವಿಜಿ ಕೃತಿಗಳು ಹೆಚ್ಚು ಮಾರಾಟವಾಗಿವೆ



Excellent coverage of the total event Avadhi! Thank you so much.