'ಅಭಿನವ'ಕ್ಕೀಗ ಸಂಭ್ರಮದ ಸಮಯ

ಅಭಿನವ ಪ್ರಕಟಿಸಿರುವ ಕೆ ವಿ ತಿರುಮಲೇಶ್ ಅವರ ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಇಲ್ಲಿವರೆಗೆ ತಿರುಮಲೇಶ್ ಅವರ ಹತ್ತೊಂಬತ್ತು ಪುಸ್ತಕಗಳನ್ನ ಅಭಿನವ ಪ್ರಕಟಿಸಿದೆ.

feather

ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ..

Y34

ಶ್ರೀ ರವಿಕುಮಾರ್ ಮತ್ತು ಚಂದ್ರಿಕಾ ಕೇವಲ ೨೦ ವರ್ಷಗಳ ಅವಧಿಯಲ್ಲಿ ಅಗಾಧವಾದ ಕನ್ನಡದ ಕೆಲಸವನ್ನು ಮಾಡಿದ್ದಾರೆ. ಉತ್ತಮ ಗುಣಮಟ್ಟದ ಕೃತಿಗಳನ್ನು ಆಕರ್ಶಕವಾಗಿ ಹೊರತರುತ್ತಿದ್ದಾರೆಯಷ್ಟೇ ಅಲ್ಲದೆ ಇಂಗ್ಲೀಷ್ ಪುಸ್ತಕಗಳ ಪ್ರಕಾಶನವನ್ನೂ ಪ್ರಾರಂಭಿಸಿದ್ದಾರೆ.

ಆರ್ಥಿಕವಾಗಿ ಶ್ರೀಮಂತರಲ್ಲದಿದ್ದರೂ ತಮ್ಮ ಪ್ರಕಟಣೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರಿಗೆ ಹಾರ್ದಿಕ ಅಭಿನಂದನೆಗಳು. ಇತೋಪ್ಯತಿಶಯವಾಗಿ ಅವರ ಕಾರ್ಯ ಮುಂದುವರೆಯಲಿ ಎಂದು ನಾನು ಹಾರೈಸುತ್ತೇನೆ.

ಅವರ ಪ್ರಕಟಣೆಯ ಮೊದಲ ಕೃತಿ “ಆಶಯ-ಆಕೃತಿ” ಎಂಬ ನನ್ನ ವಿಮರ್ಶನ ಕೃತಿಯಾಗಿತ್ತು ಎಂಬುದು ನನಗೆ ತುಂಬಾ ಅಭಿಮಾನದ ಸಂಗತಿ

-ಸಿ. ಎನ್. ರಾಮಚಂದ್ರನ್

feather

ನಾವಿನ್ನೂ ಮಾಡಬೇಕಿರುವ ಕೆಲಸ ಅಗಾಧವಾಗಿದೆ..

abhinava ravikumar1
ಪ್ರೀತಿಯ ರಾಮಚಂದ್ರನ್ ಅವರ ಅಭಿಪ್ರಾಯ ಓದಿದೆ. ಕನ್ನಡವನ್ನು ಕಟ್ಟಿದ ದೊಡ್ಡ ಪರಂಪರೆಯೇ ನಮ್ಮ ಬೆನ್ನಿಗಿದೆ. ನಾವಿನ್ನೂ ಮಾಡಬೇಕಿರುವ ಕೆಲಸ ಅಗಾಧವಾಗಿದೆ.

ಅಭಿನವವನ್ನು ಬೆಳೆಸಿದ ಕೀರ್ತಿ ಕನ್ನಡ ಓದುಗರು ಮತ್ತು ವಿದ್ವತ್ ವಯಲಕ್ಕೆ ಸೇರಬೇಕು. ಅದೆಷ್ಟು ಜನ ಲೇಖಕರು, ಓದುಗರು, ಅಭಿಮಾನಿಗಳು ನಮ್ಮ ಕೆಲಸದಲ್ಲಿ ಕೈ ಜೋಡಿಸಿದ್ದಾರೆ.. ಚಿ. ಶ್ರೀನಿವಾಸ ರಾಜು, ಎಚ್. ಎಸ್. ರಾಘವೇಂದ್ರರಾವ್, ಕೆ. ವಿ ನಾರಾಯಣ, ಪ್ರಭುಶಂಕರ್, ಅನಂತಮೂರ್ತಿ, ದೇವನೂರ ಮಹಾದೇವ, ವಿಜಯಮ್ಮ, ಕೆ. ಸತನಾರಾಯಣ, ಎಸ್. ಜಿ. ಸಿದ್ಧರಾಮಯ್ಯ, ಕೆ. ವಿ ಸುಬ್ಬಣ್ಣ, ಷ. ಶೆಟ್ಟರ್, ಶಿವಪ್ರಕಾಶ್, ನಾಗ ಐತಾಳ್, ಜಿ. ರಾಜಶೇಖರ, ಫಣಿರಾಜ್, ರವಿ ಬೆಳಗೆರೆ, ಜಿ. ಎನ್. ಮೋಹನ್, ವಿವೇಕ ರೈ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ..

ತಿರುಮಲೇಶ್ ಅಭಿನವದ ಮೇಲಿಟ್ಟಿರುವ ವಿಶ್ವಾಸದಿಂದ ಅವರ ಬಹುಪಾಲು ಕೃತಿಗಳು ನಮ್ಮಲ್ಲಿ ಪ್ರಕಟವಾಗುತ್ತಿವೆ. ಒಬ್ಬ ಲೇಖಕರು ಪ್ರಕಾಶನದ ಮೇಲಿಟ್ಟಿರುವ ಅಭಿಮಾನ, ವಿಶ್ವಾಸ ದೊಡ್ಡದು. ಅವರ ಅರಬ್ಬಿ ಕವನ ಸಂಕಲನ ಅಚ್ಚಿನಲ್ಲಿದೆ. ಮುಂದಿನ ವಾರ ಹೊರಬರಲಿದೆ..

ಸದ್ದುಗದ್ದಲವಿಲ್ಲದೆ ತಮ್ಮ ಕನ್ನಡದ ಕೆಲಸವನ್ನು ಯಾರ ಹಂಗೂ ಇಲ್ಲದೆ ತಮ್ಮ ಪಾಡಿಗೆ ತಾವು ಮಾಡುತ್ತಿರುವ ತಿರುಮಲೇಶರಿಗೆ ಸಂದ ಪ್ರಶಸ್ತಿ ನಿಜವಾಗಿಯೂ ನಮ್ಮ ವ್ಯವಸ್ಥೆಯ ಬಗೆಗೆ, ಸಮಾಜದ ಬಗೆಗೆ , ಪ್ರಜಾಪ್ರಭುತ್ವದ ಬಗೆಗೆ ವಿಶ್ವಾಸವನ್ನು, ನಂಬಿಕೆಯನ್ನು ಹೆಚ್ಚಿಸಿದೆ.. ಅದು ಪ್ರಾಮಾಣಿಕ ಕೆಲಸಕ್ಕೆ ಸಂದ ಮತ್ತೊಂದು ಗೌರವ. ಎಂದಿನಂತೆ ಅವಧಿಗೂ ಧನ್ಯವಾದಗಳು

ರವಿ

feather

ಪ್ರಶಸ್ತಿಯನ್ನು ಅಭಿನವ ಪ್ರಕಾಶನಕ್ಕೆ ಅರ್ಪಿಸಲು ಬಯಸುತ್ತೇನೆ..

k v tirumalesh2
ಒಂದು ಕಾಲದಲ್ಲಿ ನನಗೆ ಪ್ರಕಾಶಕರೇ ಸಿಗುತ್ತಿರಲಿಲ್ಲ. ನನ್ನ ಬರಹಗಳು ಬಹುಶಃ ಯಾರಿಗೂ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆಗ ನನ್ನ ಸಹಾಯಕ್ಕೆ ಬಂದವರು ರವಿಕುಮಾರ್.

ನಂತರ ನನ್ನ ಪುಸ್ತಕಗಳೆಲ್ಲವೂ ಅವರ ಅಭಿನವ ಪ್ರಕಾಶನದ ಮೂಲಕವೇ ಪ್ರಕಟವಾಗುತ್ತಿವೆ. ರವಿಕುಮಾರ್ ಕೇವಲ ಪ್ರಕಾಶಕರಲ್ಲ, ಸಾಹಿತ್ಯ ಪ್ರವರ್ತಕರು ಕೂಡ. ಇಲ್ಲದಿದ್ದರೆ “ಅಕ್ಷಯ ಕಾವ್ಯ’’ದಂಥ ಕೃತಿಗಳನ್ನು ಅವರು ಪ್ರಕಟಿಸುತ್ತಿರಲಿಲ್ಲ. ಅವರ ಋಣವನ್ನು ಎಂದೂ ತೀರಿಸುವುದು ನನ್ನಿಂದ ಅಸಾಧ್ಯ.

ಈ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಾಂಕೇತಿಕವಾಗಿ ನಾನು ಈ ಮೂಲಕ ಅಭಿನವ ಪ್ರಕಾಶನಕ್ಕೆ ಅರ್ಪಿಸಲು ಬಯಸುತ್ತೇನೆ.

ಕೆ.ವಿ.ತಿರುಮಲೇಶ್

feather

‍ಲೇಖಕರು admin

December 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Gubbachchi Sathish

    ರವಿಕುಮಾರ್ ಸರ್ ಕಂಗ್ರಾಟ್ಸ್.

    ಪ್ರತಿಕ್ರಿಯೆ
  2. ಸಿ. ಎನ್. ರಾಮಚಂದ್ರನ್

    ಶ್ರೀ ರವಿಕುಮಾರ್ ಮತ್ತು ಚಂದ್ರಿಕಾ ಕೇವಲ ೨೦ ವರ್ಷಗಳ ಅವಧಿಯಲ್ಲಿ ಅಗಾಧವಾದ ಕನ್ನಡದ ಕೆಲಸವನ್ನು ಮಾಡಿದ್ದಾರೆ. ಉತ್ತಮ ಗುಣಮಟ್ಟದ ಕೃತಿಗಳನ್ನು ಆಕರ್ಶಕವಾಗಿ ಹೊರತರುತ್ತಿದ್ದಾರೆಯಷ್ಟೇ ಅಲ್ಲದೆ ಇಂಗ್ಲೀಷ್ ಪುಸ್ತಕಗಳ ಪ್ರಕಾಶನವನ್ನೂ ಪ್ರಾರಂಭಿಸಿದ್ದಾರೆ. ಆರ್ಥಿಕವಾಗಿ ಶ್ರೀಮಂತರಲ್ಲದಿದ್ದರೂ ತಮ್ಮ ಪ್ರಕಟಣೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರಿಗೆ ಹಾರ್ದಿಕ ಅಭಿನಂದನೆಗಳು. ಇತೋಪ್ಯತಿಶಯವಾಗಿ ಅವರ ಕಾರ್ಯ ಮುಂದುವರೆಯಲಿ ಎಂದು ನಾನು ಹಾರೈಸುತ್ತೇನೆ.
    ಅವರ ಪ್ರಕಟಣೆಯ ಮೊದಲ ಕೃತಿ “ಆಶಯ-ಆಕೃತಿ” ಎಂಬ ನನ್ನ ವಿಮರ್ಶನ ಕೃತಿಯಾಗಿತ್ತು ಎಂಬುದು ನನಗೆ ತುಂಬಾ ಅಭಿಮಾನದ ಸಂಗತಿ.

    ಪ್ರತಿಕ್ರಿಯೆ
  3. kvtirumalesh

    ಒಂದು ಕಾಲದಲ್ಲಿ ನನಗೆ ಪ್ರಕಾಶಕರೇ ಸಿಗುತ್ತಿರಲಿಲ್ಲ. ನನ್ನ ಬರಹಗಳು ಬಹುಶಃ ಯಾರಿಗೂ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆಗ ನನ್ನ ಸಹಾಯಕ್ಕೆ ಬಂದವರು ರವಿಕುಮಾರ್. ನಂತರ ನನ್ನ ಪುಸ್ತಕಗಳೆಲ್ಲವೂ ಅವರ ಅಭಿನವ ಪ್ರಕಾಶನದ ಮೂಲಕವೇ ಪ್ರಕಟವಾಗುತ್ತಿವೆ. ರವಿಕುಮಾರ್ ಕೇವಲ ಪ್ರಕಾಶಕರಲ್ಲ, ಸಾಹಿತ್ಯ ಪ್ರವರ್ತಕರು ಕೂಡ. ಇಲ್ಲದಿದ್ದರೆ “ಅಕ್ಷಯ ಕಾವ್ಯ’’ದಂಥ ಕೃತಿಗಳನ್ನು ಅವರು ಪ್ರಕಟಿಸುತ್ತಿರಲಿಲ್ಲ. ಅವರ ಋಣವನ್ನು ಎಂದೂ ತೀರಿಸುವುದು ನನ್ನಿಂದ ಅಸಾಧ್ಯ. ಈ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಾಂಕೇತಿಕವಾಗಿ ನಾನು ಈ ಮೂಲಕ ಅಭಿನವ ಪ್ರಕಾಶನಕ್ಕೆ ಅರ್ಪಿಸಲು ಬಯಸುತ್ತೇನೆ.
    ಕೆ.ವಿ.ತಿರುಮಲೇಶ್

    ಪ್ರತಿಕ್ರಿಯೆ
  4. ಅಭಿನವ ರವಿಕುಮಾರ್

    ಪ್ರೀತಿಯ ರಾಮಚಂದ್ರನ್ ಅವರ ಅಭಿಪ್ರಾಯ ಓದಿದೆ. ಕನ್ನಡವನ್ನು ಕಟ್ಟಿದ ದೊಡ್ಡ ಪರಂಪರೆಯೇ ನಮ್ಮ ಬೆನ್ನಿಗಿದೆ. ನಾವಿನ್ನೂ ಮಾಡಬೇಕಿರುವ ಕೆಲಸ ಅಗಾಧವಾಗಿದೆ.

    ಅಭಿನವವನ್ನು ಬೆಳೆಸಿದ ಕೀರ್ತಿ ಕನ್ನಡ ಓದುಗರು ಮತ್ತು ವಿದ್ವ್ ತ್ ವಯಲಕ್ಕೆ ಸೇರಬೇಕು. ಅದೆಷ್ಟು ಜನ ಲೇಖಕರು, ಓದುಗರು, ಅಭಿಮಾನಿಗಳು ನಮ್ಮ ಕೆಲಸದಲ್ಲಿ ಕೈ ಜೋಡಿಸಿದ್ದಾರೆ. . . ಚಿ. ಶ್ರೀನಿವಾಸ ರಾಜು, ಎಚ್. ಎಸ್. ರಾಘವೇಂದ್ರರಾವ್, ಕೆ. ವಿ ನಾರಾಯಣ, ಪ್ರಭುಶಂಕರ್, ಅನಂತಮೂರ್ತಿ, ದೇವನೂರ ಮಹಾದೇವ, ವಿಜಯಮ್ಮ, ಕೆ. ಸತನಾರಾಯಣ, ಎಸ್. ಜಿ. ಸಿದ್ಧರಾಮಯ್ಯ, ಕೆ. ವಿ ಸುಬ್ಬಣ್ಣ
    ಷ. ಶೆಟ್ಟರ್, ಶಿವಪ್ರಕಾಶ್, ನಾಗ ಐತಾಳ್, ಜಿ. ರಾಜಶೇಖರ, ಫಣಿರಾಜ್, ರವಿಬೆಳಗೆರೆ, ಜಿ. ಎನ್. ಮೋಹನ್, ವಿವೇಕರೈ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ..
    ತಿರುಮಲೇಶ್ ಅಭಿನವದ ಮೇಲಿಟ್ಟಿರುವ ವಿಶ್ವಾಸದಿಂದ ಅವರ ಬಹುಪಾಲು ಕೃತಿಗಳು ನಮ್ಮಲ್ಲಿ ಪ್ರಕಟವಾಗುತ್ತಿವೆ. ಒಬ್ಬ ಲೇಖಕರು ಪ್ರಕಾಶನದ ಮೇಲಿಟ್ಟಿರುವ ಅಭಿಮಾನ, ವಿಶ್ವಾಸ ದೊಡ್ಡದು. ಅವರ ಅರಬ್ಬಿ ಕವನ ಸಂಕಲನ ಅಚ್ಚಿನಲ್ಲಿದೆ. ಮುಂದಿನವಾರ ಹೊರಬರಲಿದೆ..
    ಸದ್ದುಗದ್ದಲವಿಲ್ಲದೆ ತಮ್ಮ ಕನ್ನಡದ ಕೆಲಸವನ್ನು ಯಾರ ಹಂಗೂ ಇಲ್ಲದೆ ತಮ್ಮ ಪಾಡಿಗೆ ತಾವು ಮಾಡುತ್ತಿರುವ ತಿರುಮಲೇಶರಿಗೆ ಸಂದ ಪ್ರಶಸ್ತಿ ನಿಜವಾಗಿಯೂ ನಮ್ಮ ವ್ಯವಸ್ಥೆಯ ಬಗೆಗೆ, ಸಮಾಜದ ಬಗೆಗೆ , ಪ್ರಜಾಪ್ರಭುತ್ವದ ಬಗೆಗೆ ವಿಶ್ವಾಸವನ್ನು, ನಂಬಿಕೆಯನ್ನು ಹೆಚ್ಚಿಸಿದೆ. . .ಅದು ಪ್ರಾಮಾನಿಕ ಕೆಲ್ಸಸಕ್ಕೆ ಸಂದ ಮತ್ತೊಂದು ಗೌರವ. ಎಂದಿನಂತೆ ಅವಧಿಗೂ ಧನ್ಯವಾದಗಳು
    ರವಿ

    ಪ್ರತಿಕ್ರಿಯೆ
  5. ಸುಧಾ ಚಿದಾನಂದಗೌಡ

    ಹಾರ್ದಿಕ ಅಭಿನಂದನೆಗಳು,
    ಕೆ.ವಿ. ತಿರುಮಲೇಶ್ ಅವರಿಗೆ,
    ಅಭಿನವದ ರವಿಕುಮಾರ್-ಚಂದ್ರಿಕಾ ಅವರಿಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: