ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಬ್ಬಾ! ಹೋಳಿ ಶಾಂತವಾಗಿತ್ತು!’ – ಲಕ್ಷ್ಮಿಕಾಂತ್ ಇಟ್ನಾಳ್

ಹೋಳಿ ಹಬ್ಬ

ಲಕ್ಷ್ಮಿಕಾಂತ್ ಇಟ್ನಾಳ್


ಇಂದು ಹೋಳಿ ಹಬ್ಬ, ಎಲ್ಲೆಲ್ಲೂ ಬಣ್ಣ ಎರಚಾಟ
ಮುಖಗಳಿಗೆಲ್ಲ ಚೆಹರೆ ಮರೆಯಾಗಿಸಿದ ಬಣ್ಣ,
ನೆಲಮೊಗಕ್ಕೂ ಬಣ್ಣದೋಕುಳಿಯ ಬಣ್ಣ
ಮುಗಿಲಿಗೆ ನೀಲಿ ಬಣ್ಣವಾದರೆ, ಬನಸಿರಿಗೆ ಹಸಿರುಡುಗೆಯ ಬಣ್ಣ
ಹೂಗಿಡಗಳಲ್ಲಿ ತರಹೇವಾರು ಬಣ್ಣ
ಬಣ್ಣವಿಲ್ಲದ ಬದುಕು ಊಹೆಗೂ ನಿಲುಕದಣ್ಣ
 
ನವಿಲು ಬಣ್ಣಗಳ ಯುವಕ -ಯುವತಿಯರು
ಖುಷಿಯಲ್ಲಿ ಮಿಂದ ಕಣ್ಣುಗಳಲ್ಲಿ
ರಸ್ತೆಯಂಗಳದಲ್ಲಿ ಹಾಕಿದ ಕಾರಂಜಿ ಸೆಟ್ಟುಗಳಲ್ಲಿ
ಸಾವಿರ ಸಾವಿರ ಸಂಖ್ಯೆಗಳಲ್ಲಿ,
ಕೈ ಮೇಲೆತ್ತಿ ಸಂಗೀತದ ಬೀಟ್ಸ್ ಗೆ ತಕ್ಕಂತೆ
ರೇನ್ ಡ್ಯಾನ್ಸ್ಸ್ ಗೆ ಕುಣಿದಿದ್ದೇ ಕುಣಿದಿದ್ದು
ಆ ಲಯದ ಕುಣಿತಗಳಿಗೆ ಎದೆಯಲ್ಲಿ ಪುಟಿದ ಊಟೆಗಳಿಗೆ ಲೆಕ್ಕವಿಡಲಿಲ್ಲ!
 
ಒಂದು ವೃತ್ತದಲ್ಲಿ ಅದೆಷ್ಟೋ ‘ಬೀಟ್ಸ’ಗಳ ಸದ್ದು,
ಇನ್ನೊಂದೆಡೆ ಇನ್ನೆಷ್ಟೋ ಗಿಜಿಗಿಡುವ ಸದ್ದು
ಅಗೋ ಅಲ್ಲಿ, ಮಾತೇ ಕೇಳಿಸದಂತಹ ಸದ್ದು,
ಎಲ್ಲೆಲ್ಲೂ ಗಡಚಿಕ್ಕುವ ಸದ್ದು,
ಸದ್ದು, ಸದ್ದು, ಸದ್ದು,
 
ಸಂಜೆ ಹೇಳಿದರೆಲ್ಲ,
ಅಬ್ಬಾ! ಹೋಳಿ ಶಾಂತವಾಗಿತ್ತು!
 

‍ಲೇಖಕರು G

7 March, 2015

4 Comments

  1. ಡಾ.ಶಿವಾನಂದ ಕುಬಸದ

    ಹೌದು.ಇತ್ತೀಚಿಗೆ ಹೋಳಿ ಬಲು ಶಾಂತ….!!
    ಸುಂದರ ಕವನ.

  2. Vithal Katti

    ಲಕ್ಷ್ಮಿಕಾಂತರ ಬರಹಗಳನ್ನು ಕವನಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದೇನೆ.ಅವರತ್ತ ಪ್ರಿಂಟ್ ಮಾಧ್ಯಮದ ಗಮನ ಹರಿದಿಲ್ಲ.ಸಹೃದಯದವರು ಮಾತ್ರ ಇಷ್ಟು ಸುಂದರವಾಗಿ ಬರೆಯಬಲ್ಲರು.

  3. mmshaik

    holi..shanta!!!!..edakke adesto dhvanigaLu..

  4. sambhaji

    ಲಕ್ಷ್ಮಿಕಾಂತರ ಸುಂದರ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading