ನಮ್ಮ ಅಬ್ದುಲ್ ಪಿಂಜಾರ ಅವರಿಗೆ ಪ್ರಶಸ್ತಿ…

ಇನ್ಸಾಫ್ ಪಿಂಜಾರ್

ಅಬ್ದುಲ್ ಮಾಮ ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಮ್ಮದೇ ಕುಟುಂಬದ ಸದಸ್ಯರ ಒಳಗೊಂಡಂತೆ ಒಂದು ತಂಡವನ್ನ ಕಟ್ಟಿ ಹಲವಾರು ಸುತ್ತಮುತ್ತಲಿನ ಸ್ಲಂ ನಲ್ಲಿರುವ ಮಕ್ಕಳನ್ನ ಒಗ್ಗೂಡಿಸಿ ನಿರಂತರವಾಗಿ ಬೀದಿ ನಾಟಕಗಳ ಮುಖ್ಯೇನಾ ಒಂದು ಕಾಲದಲ್ಲಿ ಅಲೆಗಳನ್ನ ಎಬ್ಬಿಸಿದ ಅಪರೂಪದ ವ್ಯಕ್ತಿತ್ವದ ವ್ಯಕ್ತಿ ನಮ್ ಮಾಮ. ನಂತರದಲ್ಲಿ ಈ ತಂಡಕ್ಕೆ ಒಂದು ಹೆಸರನ್ನು ಸೂಚಿಸಬೇಕು ಎಂಬ ನಿಟ್ಟಿನಲ್ಲಿ ಭಾವೈಕ್ಯತೆ ವೇದಿಕೆ ಎಂಬ ಹೆಸರನ್ನ 1992 ರಲ್ಲಿ ನಾಮಕರಣ ಮಾಡಿದರು. ನಂತರ ನಿರಂತರವಾಗಿ ಬೀದಿ ನಾಟಕಗಳ ಮುಖೇನ ಹಾಗೆ ಮಕ್ಕಳ ರಂಗಭೂಮಿಯಲ್ಲಿ ವಿಶೇಷವಾದ ತಿರುವನ್ನ ನೀಡುವಲ್ಲಿ ನಮ್ ಮಾಮನ ಪಾತ್ರ ಮುಖ್ಯವಾದದ್ದು ಹಾಗೆಯೇ ನಮ್ಮನ್ನು ನಮ್ಮ ದೊಡ್ಡಮ್ಮನ ಮಕ್ಕಳನ್ನು ಎಲ್ಲರನ್ನೂ ತಂದು ಸಾಕಿ ಉತ್ತಮ ಶಿಕ್ಷಣ ನೀಡುತ್ತಾ ನಮಗೆಲ್ಲ ಕಲೆ ಸಾಹಿತ್ಯ ಸಂಗೀತ ಈ ಆಯಾಮದ ದೃಷ್ಟಿಕೋನ ಹುಟ್ಟುವಲ್ಲಿ ನಮ್ಮ ಮಾಮನ ಪಾತ್ರ ಮುಖ್ಯವಾದದ್ದು.

ನಮ್ಮನೆಯಲ್ಲಿ ದೊಡ್ಡಮ್ಮನ ಮಗಳು ಸಹನಾ ಪಿಂಜಾರ್ ಇವರು ನೀನಾಸ ಮುಗಿಸಿ ನಂತರ ಎನ್. ಎಸ್. ಡಿ.ದೆಹಲಿ ಪದವಿಯನ್ನು ಮುಗಿಸಿ ಪ್ರಸ್ತುತ ವಿ.ಎಸ್.ಕೆ ಯು.ಬಳ್ಳಾರಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇನ್ನೋರ್ವ ನಮ್ಮ ದೊಡ್ಡಮ್ಮನ ಮಗ ತಾಜುದ್ದೀನ್ ಆಜಾದ್ ಇವರು ನೀನಾಸಂ ಪದವಿಯನ್ನು ಮುಗಿಸಿ ಫೋಟೋಗ್ರಾಫಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ಪ್ರಜಾವಾಣಿಯ ಹಿರಿಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ತಂಗಿ ಸಹರ ಇವರು ನೀನಾಸಂ ಪದವೀಧರರು ಸರ್ಕಾರಿ ನಾಟಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೆ ನಮ್ಮ ಅಕ್ಕ ಶಾಹಿರಾ ಕೂಡ ನೀನಸಂಪದವೀಧರೆ ಇನ್ನು ನಾನು ಸುತ್ತೂರಿನಲ್ಲಿ ಶಾಲಾ ದಿನಗಳನ್ನು ಕಳೆಯುತ್ತಿದ್ದಾಗ ಸಂಗೀತದ ಸ್ವರ ಬೀಜ ನನ್ನಲ್ಲಿ ಚಿಗುರತೊಡಗಿತು ನಂತರದಲ್ಲಿ ರಂಗಭೂಮಿಯ ಹಿನ್ನೆಲೆಯಿಂದ ಬಂದವನಾದ್ದರಿಂದ ನಾನು ಕೂಡ ನೀನಾಸಂಪದವಿಯನ್ನು ಮುಗಿಸಿ ಸಂಗೀತದಲ್ಲಿ ಹೆಚ್ಚಿನ ಆಸಕ್ತಿಯಿಂದ ಗಂಗೂಬಾಯಿ ಹಾನಗಲ್ ಗುರುಕುಲ ಹುಬ್ಬಳ್ಳಿಯಲ್ಲಿ ಪಂಡಿತ್ ಗಣಪತಿ ಭಟ್ ಹಾಸನಗಿ ಇವರ ಹತ್ತಿರ ಸತತ ನಾಲ್ಕು ವರ್ಷಗಳ ಕಾಲ ಹಿಂದುಸ್ತಾನಿ ಸಂಗೀತದ ಅಭ್ಯಾಸ ಮುಗಿಸುತ್ತಿದ್ದೇನೆ ನಂತರ ಹೊರಬಂದ ಮೇಲೆ ಸುಮಾರು ಸವಾಲುಗಳನ್ನು ಎದುರಿಸಲು ಸಿದ್ಧನಾಗಬೇಕಾಗಿದೆ.

ಹೀಗೆ ನಮ್ಮ ಜೊತೆಗೆ ಮೊಹಮ್ಮದ್ ಯುನೀಸ್ ಇವರು ಕೂಡ ಶಿವ ಸಂಚಾರ ಫಯಿನಾರ್ಟಿನಲ್ಲಿ ಎಂಫಿಲ್ ಮುಗಿಸಿದ್ದಾರೆ ಹೀಗೆ ಶೇಕ್ಷವಲಿ, ಗುರುರಾಜ್, ರವಿ, ವಾದಿರಾಜ್, ಇನ್ನು ಹಲವಾರು ತಂಡದಿಂದ ಹೊರ ಹೋದವರು ವರದಿಗಾರರಾಗಿ, ಶಿಕ್ಷಕರಾಗಿ, ಕಲಾವಿದರಾಗಿ, ಬದುಕು ಕಟ್ಟಿಕೊಂಡಿದ್ದಾರೆ ಈ ಎಲ್ಲಾ ವಿಷಯಗಳನ್ನು ಯಾಕೆ ಹೇಳುತ್ತಿದ್ದೇನೆ ಎಂದು ಕೇಳುವುದಾದರೆ ಈ ಎಲ್ಲವೂ ವೈಯಕ್ತಿಕವಾಗಿ ಅವರವರ ಸಾಧನೆ ಅನ್ನುವುದಕ್ಕಿಂತ ನಮ್ಮ ಮಾಮನ ಸಾಧನೆ ಅಂತ ಹೇಳುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಯಾಕೆ ಎಂದರೆ ಮಾಮನಿಗೆ ಒಬ್ಬ ಅಕ್ಕ ಅಣ್ಣ ಹಾಗೂ ಇಬ್ಬರು ತಂಗಿಯರು ಎಲ್ಲರನ್ನು ಹಳ್ಳಿಯ ಬೇರೆ ಬೇರೆ ಭಾಗದಲ್ಲಿ ಮದುವೆ ಮಾಡಿಕೊಟ್ಟಿದ್ದರು ಆದರೆ ನಂತರ ಮುಂದಿನ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾದಿತು ಎಂದು ನಮ್ಮನ್ನೆಲ್ಲರನ್ನೂ ಹೊಸಪೇಟೆಗೆ ಕರೆತಂದು ಸಾಕಿ ಸಲಹಿದರು ಈಗ ಎಲ್ಲರೂ ಬೇರೆಬೇರೆ ರೀತಿಯಾಗಿ ತಮ್ಮದೇ ಆದ ಕಲಾ ಚಟುವಟಿಕೆಯಲ್ಲಿ ತೊಡಗಿದ್ದಾರೆ ಈ ಎಲ್ಲದಕ್ಕೂ ಗಾಡ್ ಫಾದರ್ ನಮ್ ಮಾಮ.

ಇಂದು ಕರ್ನಾಟಕ ಸರ್ಕಾರವು ರಂಗಭೂಮಿಯಲ್ಲಿ ಸೇವೆಯನ್ನು ಪರಿಗಣಿಸಿ ಬಿ. ವಿ. ಕಾರಂತ ಪ್ರಶಸ್ತಿಯನ್ನು ನಮ್ಮ ಅಬ್ದುಲ್ ಮಾಮನಿಗೆ ನೀಡಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷದ ವಿಷಯ ಇನ್ನೊಂದು ವಿಷಯವನ್ನ ನಿಮ್ಮ ಮುಂದೆ ತಿಳಿಸಲು ಬಯಸುತ್ತೇನೆ ಏನೆಂದರೆ ಮನೆಯ ಪ್ರತಿಯೊಬ್ಬ ಸದಸ್ಯರು ದುಡಿದ ಹಣವನ್ನ ಕೂಡಿಸಿ ನಿರಂತರವಾದ ಸುಮಾರು 30 ವರ್ಷಗಳ ಪರಿಶ್ರಮದ ನಂತರ ನಮ್ಮದೇ ಆದ ಸ್ವಂತಜಾಗವಾದ ಭಾವೈಕ್ಯತೆ ವೇದಿಕೆಯ ಕನಸಿನ ಕೂಸಾಗಿ ಸಂತ ಶಿಶುನಾಳ ಶರೀಫ ರಂಗಮಂದಿರ ತಲೆಯೆತ್ತಿದೆ ಇವೆಲ್ಲವೂ ನಮ್ಮ ಮಾಮನ ಸಾಧನೆ ಹೇಳುತ್ತಾ ಹೋದರೆ ಯಾವ ವಿಷಯ ಪ್ರಸ್ತಾಪ ಮಾಡಲಿ ಬಿಡಲಿ ಎಂದು ತಿಳಿಯುವುದೇ ಇಲ್ಲ ಆದರೆ ನಮ್ಮ ಮಾವನದು ಅಪರೂಪದ ವ್ಯಕ್ತಿತ್ವಗಳಲ್ಲಿ ಒಂದು ನಮ್ಮ ಕುಟುಂಬದ ಎಲ್ಲಾ ಸದಸ್ಯರ ಪರವಾಗಿ ನಮ್ಮ ತಂಡದಲ್ಲಿ ಕಲಿತು ಹೋದ ಕಲಾವಿದರ ಪರವಾಗಿ ನಮ್ಮ ಅಬ್ದುಲ್ ಮಾಮನಿಗೆ ಹೃತ್ಪೂರ್ವಕ ಅಭಿನಂದನೆಗಳನ್ನ ತಿಳಿಸುತ್ತೇನೆ ಮಾಮನ 45 ವರ್ಷದ ಸುದೀರ್ಘ ರಂಗ ಚಟುವಟಿಕೆಯನ್ನು ಗುರುತಿಸಿ ನೀಡಿದ ಅತ್ಯುನ್ನತ ಪ್ರಶಸ್ತಿ ಈ ಬಿ.ವಿ.ಕಾರಂತ ಪ್ರಶಸ್ತಿ ಇದು ಐದು ಲಕ್ಷ ನಗದು ಜೊತೆಗೆ ನಾಮಫಲಕವನ್ನು ಒಳಗೊಂಡಿದೆ.
ಅಭಿನಂದನೆಗಳು ಮಾಮಜಿ….

‍ಲೇಖಕರು avadhi

March 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಡಿ ಎಂ ನದಾಫ್

    ಸರ್
    ಮೊನ್ನೆ ತಾನೇ ಕಲಬುರ್ಗಿಯ ಅಂದಾನಿ ಸರ್ ಕಲಾ ಕಾಲೇಜಿನಲ್ಲಿ ಅಬ್ದುಲ್ ಪಿಂಜಾರ ಸರ್ ತಂಡ ಅದ್ಭುತವಾದ ಕಲಾಶಿಬಿರವನ್ನು ನಡೆಸಿ ಕೊಟ್ಟಿತು.
    ಅಬ್ದುಲ್ ಮಾಮಾ ತಮ್ಮ ಕಲಾ ತಪಸ್ಸಿಗೆ ಸಂದ ಈ ಮನ್ನಣೆಗಾಗಿ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: