ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾ ಸೂಗೂರೇಶ ಹಿರೇಮಠ ಕವಿತೆ- ಅಪ್ಪ..

ಉಮಾ ಸೂಗೂರೇಶ ಹಿರೇಮಠ

ಅಪ್ಪ ಆಗಸ
ಅಷ್ಟೆ ಅಂತರ್ಮುಖಿ.. ಪಾತಾಳಕ್ಕಿಂತಲೂ..
ಅಪ್ಪ ಸಾಲಗಾರನೆಂದು ಅವ್ವ ಬೈಯುತ್ತಿದ್ದಳು
ಆದರೂ ಅವನೊಬ್ಬ ದೊಡ್ಡ ಸಾಹುಕಾರ.

ಬರಗಾಲ ಬಂದು ಭೂತಾಯಿ ಬಿರುಕು ಬಿಟ್ಟಂತೆಯೇ
ಕೈ ಕಾಲುಗಳು ಸೀಳಿ ಹೋಗಿದ್ದವು
ಕೊಡಲಿ ಸಲಿಕೆಯ ಹಿಡಿದು..
ನನ್ನ ಪುಟ್ಟ ಕೈಯಿಂದ
ಅವನ ಅಂಗೈ ಮುಟ್ಟಿ ಸವರಿದರೆ ಮುಳ್ಳು ಚುಚ್ಚಿದಂತೆ
ಅವನು ಬಾಚಿ ತಬ್ಬಿದರೆ ಹೂವಿನಂತೆ

ಅಪ್ಪ ಪಡುವ ಕಷ್ಟ ಅಷ್ಟಿಷ್ಟಲ್ಲ
ಕೆಲಸ ಸಿಗದ ಹೊತ್ತಲ್ಲಿ ಸಾಲ ಮಾಡಿ
ಹೊಟ್ಟೆ -ಬಟ್ಟೆಗೆನು ಕಡಿಮೆ ಮಾಡಿಲ್ಲ
ಎಲ್ಲಿಂದ ಬಂತೆಂದು ಅವ್ವ ಕೇಳಿದರ
ನಿನಗ್ಯಾಕದೆಲ್ಲಾ.. ಎಂದು ಅದನ್ನೆ ಮರೆಸಿಬಿಡುವವ..

ಅಪ್ಪ‌ ನೋವ ನುಂಗಿ
ಯಾರಿಗೂ ಕಾಣದಂತೆ ಒಳಗೊಳಗೆ ಅತ್ತವ
ಎಲ್ಲರ ಮುಂದೆ ನಗುವವ
ಧೈರ್ಯ, ಸ್ಥೈರ್ಯಕೆ ಮೊದಲು ನೆನಪಾಗುವವನಿವ
ಸರಿಕರೆದುರು ಎದೆಯುಬ್ಬಿಸಿ ನಡೆಯುವವ..

ಅಪ್ಪ ಎಂದರೆ.. ಎಲ್ಲವೂ ಇವ..
ಅವ್ವನಿಗೂ ತಾಯಂತವ..

‍ಲೇಖಕರು Admin

19 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading