“ರಾಗಿ ರೊಟ್ಟಿ” ಕಾಲಂ
ಗಲ್ಲಿ ಕ್ರಿಕೆಟ್-
ಯಾವುದೇ ಗಲ್ಲಿಯಲ್ಲಿ ಕ್ರಿಕೆಟ್ ಆಡಿದರೂ ಅದರ ಫೂಟೇಜ್ ನಮಗೆ ಕಳಿಸಿಕೊಡಿ, ಪ್ರಸಾರ ಮಾಡುತ್ತೇವೆ.
ಇಎಸ್ ಪಿಎನ್ ಸ್ಪೋರ್ಟ್ಸ್ ಚಾನಲ್ ನ ಗುಂಡಿ ಒತ್ತಿದಾಗ ಕಾಣಿಸಿದ ಮನವಿ ಇದು.
ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್. ಹೊಲಗಳಲ್ಲಿ ಬೆಳೆ ಕಟಾವಾದ ನಂತರ ನಡೆಯುವ ಮೊದಲ ಹಬ್ಬವೇ ಕ್ರಿಕೆಟಿನದ್ದು. ಕ್ಯಾಂಟೀನ್ ನಲ್ಲಿ ಮುರಿದು ಬಿದ್ದ ಖುರ್ಚಿಗಳನ್ನೇ ವಿಕೆಟ್ ಆಗಿಸಿಕೊಂಡು ಇದ್ದ ಒಂದಿಷ್ಟು ಜಾಗವನ್ನೇ ಕ್ರೀಡಾಂಗಣವಾಗಿಸಿಕೊಂಡು ಕಾಫಿ, ಟೀ ಸಪ್ಲೈ ಮಾಡುತ್ತಲೇ ಬೌಂಡರಿ ಎತ್ತಿದವರೂ ಇದ್ದಾರೆ. ಬಂದ್ ಆಗಿ ರಸ್ತೆ ಒಂದಿಷ್ಟು ಬಿಕೋ ಎಂದರೆ ಸಾಕು ಮೂರು ಇಟ್ಟಿಗೆ ಬ್ಯಾಟು ಬಾಲು ಡಾಂಬರು ರಸ್ತೆಗಿಳಿಯಿತು ಎಂದೇ ಅರ್ಥ. ರಸ್ತೆಯ ಮೇಲೆ ವಾಕಿಂಗ್ ಮಾಡುತ್ತಿದ್ದರೂ ಎದುರಿಗೆ ಬ್ಯಾಟ್ಸ್ ಮನ್ ಕಲ್ಪಿಸಿಕೊಂಡು ಬೌಲ್ ಮಾಡುತ್ತಾ ಓಡುವವರೂ ಇದ್ದಾರೆ. ಜಗತ್ತಿನ ಯಾವುದೆಂದರೆ ಯಾವ ವಸ್ತುವನ್ನೂ ಕ್ರಿಕೆಟ್ ಬ್ಯಾಟ್ ಆಗಿ, ಬಾಲಾಗಿ, ವಿಕೆಟ್ ಆಗಿ ರೂಪಿಸುವ ಮ್ಯಾಜಿಕ್ ನಡೆಯುವುದು ಗಲ್ಲಿಗಳಲ್ಲಿ ಮಾತ್ರ
ಸಾಧ್ಯ.
ನನಗೂ ಒಂದು ಆಸೆ ಇತ್ತು.
ನನ್ನ ಬಳಿ ಒಂದು ಬ್ಯಾಟ್ ಇರಬೇಕು, ಸಂಜೆಯಾದರೆ ಸಾಕು ಅದರೊಂದಿಗೇ ರೋಡಿಗಿಳಿಯಬೇಕು ಅಂತ. ಸುನೀತಾ ವಿಲಿಯಮ್ಸ್ ಕಂಡ ಅಂತರೀಕ್ಷದ ಕನಸಿಗಿಂತಲೂ ಅದು ದೊಡ್ಡದಾಗಿತ್ತು. ಎಂದೂ ಕಾಸು ಚೆಲ್ಲುವ ಕನಸುಗಳನ್ನು ಬೆನ್ನತ್ತಿಯೇ ಗೊತ್ತಿಲ್ಲದ ನಾನೂ ಸಹ ಬ್ಯಾಟ್ ಗೆ ಮಾರು ಹೋಗಿದ್ದೆ. ಅಂಗಡಿಯ ದಿವಿನಾದ ಬ್ಯಾಟ್ ಅಲ್ಲದಿದ್ದರೇನು, ಯಾವುದೇ ಬ್ಯಾಟ್ ಆಕಾರಕ್ಕೆ ಹತ್ತಿರವಿರುವ ಮರದ ತುಂಡಾದರೂ ಆಯಿತು ಎಂಬ ಲೆಕ್ಕ ನನ್ನದು.
ಇದಕ್ಕಾಗಿಯೇ ಅಣ್ಣನ ಬಳಿ ಗೋಗರೆದದ್ದು. ಮೆಜೆಸ್ಟಿಕ್ ನ ಸಂತೆಯಲ್ಲಿ ಬಿಡದೇ ಕಾಡಿದ್ದು ಇನ್ನೂ ನೆನಪಿದೆ. ಆಗ ತಾನೆ ಕೆಲಸಕ್ಕೆ ಸೇರಿದ್ದ ಅಣ್ಣನ ಸಂಬಳ ಎಲ್ಲಾ ಅಪ್ಪನಿಂದ ಹೈಜಾಕ್ ಆಗುತ್ತಿದ್ದರೂ ಇದ್ದ ಚಿಲ್ಲರೆ ಕಾಸಲ್ಲೇ ನನಗೊಂದು ಬ್ಯಾಟ್ ಹುಟ್ಟಲಿ ಎಂಬ ಆಸೆ ನನ್ನದು.
ಅಣ್ಣನ ಬಳಿ ತಥಾಸ್ತು ಎನಿಸಿಕೊಳ್ಳುವುದು ಎಂದೂ ಕಷ್ಟದ ಕೆಲಸವಾಗಿರಲಿಲ್ಲ. ಬ್ಯಾಟ್ ಮನೆಗೆ ಬಂತು. ಕಪ್ಪು ರಬ್ಬರ್ ಹೊದಿಕೆಯ ಹಿಡಿ, ಖಡಕ್ಕಾದ ಬಾಡಿ ಹೊಂದಿದ್ದ ಬ್ಯಾಟ್ ಕೈ ಸೇರಿದಾಗ ಅದೇ ಮಾಯದಂಡ ಎನ್ನುವಂತಾಗಿತ್ತು. ಅದನ್ನು ಬೀಸಿದರೆ ಸಾಕು ಬೇಕಾದ್ದೆಲ್ಲಾ ಸಿಕ್ಕುತ್ತದೆ ಎಂಬಂತಾಗಿತ್ತು.
ಬ್ಯಾಟನ್ನು ಜೋಪಾನವಾಗಿಟ್ಟು, ಹತ್ತು ಬಾರಿ ಮೈದಡವಿ ಶಾಲೆಗೆ ಓಡಿದೆ. ಅಕ್ಷರಗಳ ಮಧ್ಯೆ ಎದ್ದು ನಿಲ್ಲುತ್ತಿದ್ದುದು ಬ್ಯಾಟ್ ಮಾತ್ರ. ಗಂಟೆ ಬಾರಿಸಿದ್ದೇ ಹಾರಿ ಮನೆ ಸೇರಿದೆ. ಅಮ್ಮನ ಕಣ್ಣಲ್ಲಿ ಧಾರಾಕಾರ ನೀರು. ಕೈಗೆ ದೊಡ್ಡ ಬ್ಯಾಂಡೇಜ್. ಮೂಳೆ ಮುರಿದಿದೆ. ಆಗ ತಾನೇ ಆಸ್ಪತ್ರೆಯಿಂದ ಮನೆಗೆ ಬಂದ ಅಮ್ಮನಿಗೆ ಯಮಯಾತನೆ.
ಕೇಳಿದೆ- ಯಾಕಮ್ಮಾ
ಪುಸ್ತಕ ಜೋಡಿಸಲು ಹೋಗಿ ಜಾರಿ ಬಿದ್ದೆ ಎಂದರು. ಕಣ್ಣು ಏನು ಹೇಳುತ್ತಿತ್ತು ಗೊತ್ತಾಗಲಿಲ್ಲ. ಅಮ್ಮನ ಬಳಿಯೇ ನೋವಾಗಿ ನಿಂತವನು ಬ್ಯಾಟ್ ನತ್ತ ಹಾರಿ ಹೋದೆ.
ಬ್ಯಾಟ್ ಅಲ್ಲಿರಲಿಲ್ಲ. ಅಲ್ಲಿ ಇಲ್ಲಿ ಎಲ್ಲೆಲ್ಲೂ ಹುಡುಕಿದೆ. ಬ್ಯಾಟ್ ಎರಡು ತುಂಡಾಗಿ ಮೂಲೆಯಲ್ಲಿ ಬಿದ್ದಿತ್ತು. ಅಷ್ಟು ಖಡಕ್ಕಾದ ಬ್ಯಾಟ್?
ಅಪ್ಪ ಆಫೀಸಿಗೆ ಹೋಗಿರಲಿಲ್ಲ.





eradu mooru varshagalinda
hasida namage eega
bharjari blaagoota
-ramesh dk
ondu bat hinde ashtella kathegaliruttava…
’ಅವಧಿ’ ಕನ್ನಡ ಬ್ಲಾಗಿಂಗ್‍ನ ಸಾಧ್ಯತೆಗಳ ಪರಮಾವಧಿಯಾಗಲಿ ಎಂಬ ನಿಸ್ಪೃಹ ಹಾರೈಕೆ ನನ್ನ ಮನದಾಳದಿಂದ!
-ಶ್ರೀವತ್ಸ ಜೋಶಿ
Hi,
Saw your blog/portal. so far so good. looking forward to see some valuable contents from your end.
Keep up the high spirits. All the best!!.
Luv & Luck,
Vikram Hathwar,
sadyakke: New Jersey.
omme hige kannadiside.innomme idiyagi odabeku annisithu.avadhi deerghavadhiyagali.abhinandanegalu.
-dundiraj