ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿತಾ ಮ೦ಚಿ ಬರಹ: ‘ಹಣ್ಣೆಲೆ ಕಳಚಿ ಬಿದ್ದಾಗ ..

– ಅನಿತಾ ಮ೦ಚಿ

 

ಹಣ್ಣೆಲೆ ಕಳಚಿ ಬಿದ್ದಾಗ …

ಕೊಂಬೆ ಸಣ್ಣಗೆ ತೊನೆದಾಡಿತು

ಇಷ್ಟು ದಿನ ಇದ್ದ ಜೊತೆಗಾರನ… ವಿರಹಕ್ಕೋ ..

ಹೊತ್ತ ಭಾರವಿಳುಹಿ ಹಗುರಾದದ್ದಕ್ಕೋ ..

ಗಾಳಿಯು ತಣ್ಣನೆ ತೂಗಾಡಿತು

ತನ್ನ ಖಾಲಿತನದೊಳಗೆ ತುಂಬಿದ್ದಕ್ಕೋ..

ಮತ್ತೆತ್ತಲೋ ಬಿಸುಡುವ ತನ್ನ ಜಾಣತನಕ್ಕೋ..

ಭೂಮಿ ನಕ್ಕು ತೋಳ್ತೆರೆದು ತಬ್ಬಿತು

ಬಂದೇ ಬರುವುದೆಂಬ ಅರಿವಿದ್ದದ್ದಕ್ಕೋ ..

ಬೇಕಿದ್ದೋ ಬೇಡದಿದ್ದೋ ಒಪ್ಪಿಕೊಂಡ ಕರ್ತವ್ಯಕ್ಕೋ

‍ಲೇಖಕರು G

17 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading