’ಅನಭಿಜ್ಞ ಶಾಕುಂತಲ’ – ೨೬ನೇ ಪ್ರದರ್ಶನ ನಡೆಯುತ್ತಿರುವ ಸಮಯದಲ್ಲಿ…

ಪ್ರಸಂಗ

ಪ್ರಸಂಗ ಹಲವು ಹೊಸ ಆಲೋಚನೆಗಳನ್ನು ಹೊತ್ತು ವೇದಿಕೆಗೆ ಅಣಿ ಇಟ್ಟಿರುವ ತಂಡ. ಇದು ನಾಟಕ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಜಗತ್ತಿನ ವೈವಿಧ್ಯಮಯ ಪ್ರಸಂಗಗಳಿಂದ ಜನತೆಯ ಮುಂದೆ ಅನಾವರಣಗೊಳ್ಳುವುದು ಇದರ ಮೂಲ ಉದ್ದೇಶ. ಕಲಾಪ್ರಜ್ಞೆಯ ಆರೋಗ್ಯಕರ ದೃಷ್ಟಿ, ಪ್ರೀತಿ ಮತ್ತು ಎಚ್ಚರದೊಂದಿಗೆ ಸಮನ್ವಯ ಸಾಧಿಸುವ ಆಶಯ ಕೂಡಾ ಇವತ್ತು ಮುಖ್ಯವೆಂದು `ಪ್ರಸಂಗ’ ಭಾವಿಸಿದೆ. ಕಲೆಯ ಬಗ್ಗೆ ಅಪಾರ ಕಾಳಜಿ, ಭಿನ್ನವಾಗಿ ಯೋಚಿಸುವ ಗೆಳೆಯರ ಬಳಗವೇ ಈ ತಂಡ. ಇಲ್ಲಿ ಕಲಾವಿದರು, ನಟರು, ಗಾಯಕರು, ಸಾಹಿತಿಗಳು ಈ ತಂಡಕ್ಕೆ ಸ್ಪೂರ್ತಿಯ ಸೆಲೆಯಾಗಿ ತೊಡಗಿಕೊಂಡಿದ್ದಾರೆ. ಮೊದಲ ಹೆಜ್ಜೆಯಾಗಿ ಮಹಾತ್ವಾಂಕ್ಷೆಯ `ಅನಭಿಜ್ಞ ಶಾಕುಂತಲ’ ನಾಟಕದ ಮೂಲಕ ತನ್ನ ಇರುವನ್ನ ಸಾಬೀತುಗೊಳಿಸಿದೆ. ಪ್ರದರ್ಶನಗೊಂಡ ವರ್ಷದಲ್ಲಿ ದೇಶದ ರಂಗ ಉತ್ಸವಗಳಾದ ಅಭಿನಯ ನ್ಯಾಷನಲ್ ಫೆಸ್ಟಿವಲ್(ಹೈದ್ರಾಬಾದ್ ಮತ್ತು ತಿರುಪತಿ), ರಂಗಾಯಣ ನಾಟಕೋತ್ಸವ(ಶಿವಮೊಗ್ಗ), ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2013, ಮುಂತಾದ ಕಡೆಗಳಲ್ಲಿ ಪ್ರದರ್ಶನಗೊಂಡು ರಂಗ ರಸಿಕರ ಪ್ರೀತಿಗೆ ಪಾತ್ರವಾಗಿದೆ.

`ಅನಭಿಜ್ಞ ಶಾಕುಂತಲ’

ಭಾರತದ ದೇಸಿಜ್ಞಾನ ಪರಂಪರೆಗಳು ನಿರಂತರವಾಗಿ ನಂಬಿಕೊಂಡು ಬಂದಿರುವ ನೆನಪಿನ ಕಥನದ ದೃಶ್ಯರೂಪಕ. ಭಾರತೀಯ ಎನ್ನುವ ಮರೆವಿನ ಚಿಂತನೆಗಳು ನಿರೂಪಿಸುತ್ತಿರುವ ಪುರುಷ `ವಿಸ್ಮೃತಿ’ಗಳ ಹುಸಿತನವನ್ನು ಈ ನಾಟಕ ಬಯಲುಗೊಳಿಸಲು ಪ್ರಯತ್ನಿಸುವುದು ಮಹತ್ವದ ಸಂಗತಿ. ಇದು ಕನ್ನಡ ರಂಗಭೂಮಿ ಇಂದು ಶೋಧಿಸುತ್ತಿರುವ ಹೊಸ ರೂಪಕಕ್ಕೆ ಸಾಕ್ಷಿ.

ನಾಟಕಕಾರರು ಕೆ.ವೈ. ನಾರಾಯಣಸ್ವಾಮಿ

ಪಂಪಭಾರತದ ಕೆ.ವೈ. ನಾರಾಯಣಸ್ವಾಮಿ ಎಂದೇ ಕರೆಯಲ್ಪಡುವ ಇವರ ಕಾರ್ಯಕ್ಷೇತ್ರ ಕಾವ್ಯ, ವಿಮರ್ಶೆ, ನಾಟಕ, ಸಿನಿಮಾಗಳಲ್ಲಿ ವಿಸ್ತಾರವಾಗಿದೆ. ಇವರ `ನೀರದೀವಿಗೆ’ ಸಂಶೋಧನಾ ಕೃತಿ ಸಾಹಿತ್ಯ ಪ್ರಮುಖರ ಮನ್ನಣೆ ಗಳಿಸಿ ಭಿನ್ನ ಆಲೋಚನಾ ಕ್ರಮವೊಂದನ್ನು ರೂಪಿಸಿಕೊಟ್ಟದೆ. ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು ರಂಗಕೃತಿ ಇವರ ಪ್ರತಿಭೆಗೆ ಸಾಕ್ಷಿಯಂತಿದೆ. ಕಳವು ಹುಲಿಸೀರೆ ಮುಂತಾದ ನಾಟಕಗಳನ್ನು ಬರೆದಿರುವ ನಾರಾಯಣಸ್ವಾಮಿ ಈಗ ನಮ್ಮ ತಂಡಕ್ಕೆ ಬರೆದಿರುವ `ಅನಭಿಜ್ಞ ಶಾಕುಂತಲ’ ಭಾರತೀಯ ಪ್ರೇಮ ಪುರಾಣದ ತವಕ ತಲ್ಲಣಗಳ ಚೇತೋಹಾರಿ ಚಿತ್ರಣದ ಭಿತ್ತಿಗಳನ್ನ ಎಳೆ ಎಳೆಯಾಗಿ ಬಿಡಿಸಿರುವ ಕೃತಿ.

ನಿರ್ದೇಶಕರುಪ್ರಕಾಶ್. ಪಿ ಶೆಟ್ಟಿ

ರಂಗನಂಟಿಗೆ ಬಂದ ದಿನಗಳಿಂದಲು ಪ್ರಕಾಶ್.ಪಿ ಶೆಟ್ಟಿ ನಾಟಕದ ವಿವಿಧ ಆಯಾಮಗಳಲ್ಲಿ ತಮ್ಮನ್ನು ಒರೆಗೆ ಹಚ್ಚಿಕೊಂಡವರು. ವೃತ್ತಿ-ಪ್ರವೃತ್ತಿಗಳ ಪ್ರಭೇದಗಳ ಹಂಗಿಲ್ಲದ ಇವರು ನಟ, ಗಾಯಕ, ನೇಪಥ್ಯ, ಕಲಾನಿರ್ದೇಶಕ, ಸಂಘಟಕನಾಗಿ ರೂಪುಗೊಂಡ ಬಗೆ ಹಲವು ಅಚ್ಚರಿಗಳನ್ನು ಮೂಡಿಸಿದೆ. ಇವರ ನಿಷ್ಠೆ-ಬದ್ದತೆ ಪ್ರಶ್ನಾತೀಥವಾದದ್ದು. ಇತ್ತೀಚಿಗೆ ನೇಪಥ್ಯದ ಗೆಳೆಯರೊಡಗೂಡಿ ಕಟ್ಟಿದ `ರಂಗಮಂಟಪ’ ಇಂದು ರಂಗಭೂಮಿಯಲ್ಲೊಂದು ಹೊಸ ಸಂಚಾರಕ್ಕೆ ಸಾಕ್ಷಿಯಾಗಿದೆ. `ಗಾಂಧಿಬಂದ’ ನಾಟಕದ ನಿರ್ಮಾಣ ರಂಗಭೂಮಿಗೆ ಹೊಸ ಚೈತನ್ಯವನ್ನು ನೀಡಿದೆ.

`ಪ್ರಸಂಗ’ ತಂಡದ ಹೊಸ ಕನಸಿಗೆ ಕೆ.ವೈ. ನಾರಾಯಣಸ್ವಾಮಿ ಅವರ `ಅನಭಿಜ್ಞ ಶಾಕುಂತಲ’ ವನ್ನು ನಿರ್ದೇಶಿಸಿರುವ ಪ್ರಕಾಶ್ ಶೆಟ್ಟಿ ಶಾಕುಂತಲೆಯ ಹೊಸ ಪ್ರಸಂಗವನ್ನು ರಂಗಕ್ಕೆ ನೀಡಿದ್ದಾರೆ.

 

ನಿರ್ದೇಶಕರ ಮಾತು

ಈ ನಾಟಕವು ಚರಿತ್ರೆಯನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸುವ ರೀತಿ ಹಾಗೂ ಹಲವು ತಿರುವುಗಳುಳ್ಳ ವಿಲಕ್ಷಣ ನಿರೂಪಣಾ ಕ್ರಮ ನನ್ನನ್ನು ಮೋದಲಿಗೆ ಆಕರ್ಷಿಸಿದ ಸಂಗತಿಗಳು.

ಕಾಳಿದಾಸನ ಕೃತಿಗಳೊಂದಿಗೆ ಕನ್ನಡದಲೋಕ ಸರಿ ಸುಮಾರು ನೂರುವರ್ಷಗಳಿಂದಲೂ ಅತ್ಯಂತ ಉತ್ಸಾಹದಿಂದ ಮತ್ತೆ ಮತ್ತೆ ಸಂವಾದಕ್ಕೆ ಮರುಸಂವಾದಕ್ಕೆ ತೊಡಗಿದೆ. ಆದರೆ ಈ ಸಂವಾದಗಳು `ಪುರುಷ’ ವ್ಯಾಖ್ಯಾನಗಳನ್ನು ದಾಟಲಿಲ್ಲ. ಆದರೆ ಈ ನಾಟಕ ಹೆಣ್ಣಿನ ನೋಟದ ಮೂಲಕ ಕಾಳಿದಾಸನನ್ನು ಕಟ್ಟಿಕೊಡುವ ಪ್ರಯತ್ನವಾಗಿದೆ.

`ಅನಭಿಜ್ಞ ಶಾಕುಂತಲ’ ಸದ್ಯ ಪ್ರಚಲಿತದಲ್ಲಿರುವ ಸಾಮಾಜಿಕ ಸಾಂಸ್ಕೃತಿಕ ವಾದಗಳೊಂದಿಗೆ ತಕರಾರನ್ನು ಮಂಡಿಸುವುದು ನನ್ನನ್ನು ಕಾಡಿಸಿದ ಮತ್ತೊಂದು ಸಂಗತಿ. ಈ ನಾಟಕ ಕಾಳಿದಾಸನ ಕುರಿತಾದ ಈವರೆಗಿನ ತಿಳುವಳಿಕೆಯನ್ನು ಅಳಿಸಲು ಪ್ರಯತ್ನಿಸುವುದಲ್ಲದೆ ಹೆಣ್ಣು ನೋಟಕ್ರಮವನ್ನು ರಂಗಭಾಷೆಯಲ್ಲಿ ಕಟ್ಟಿಕೊಡುವ ಸವಾಲನ್ನು ನನ್ನ ಮುಂದೆ ಇರಿಸಿತ್ತು.

ಈ ನಾಟಕ ಪಠ್ಯ ರಂಗಪಠ್ಯ ವಾಗುವಲ್ಲಿ ಸಂಗೀತ, ನೃತ್ಯ, ಕಲೆ, ರಂಗಪರಿಕರ, ಬೆಳಕು, ವಸ್ತ್ರವಿನ್ಯಾಸ ಹೀಗೆ ರಂಗದ ಎಲ್ಲಾ ವಿಭಾಗಗಳನ್ನು ಸಮರ್ಥವೂ ಅರ್ಥಪೂರ್ಣವೂ ಆಗಿ ರಂಗದ ಮೇಲೆ ತರುವುದರ ಮೂಲಕ ಮಾಯಾ ಕನ್ನಡಿಯಂಥ ಪರಿಣಾಮವನ್ನು ಪ್ರೇಕ್ಷಕರಿಗೆ ವರ್ಗಾಯಿಸುವ ಹೊಣೆಗಾರಿಯನ್ನು ಈ ನಾಟಕ ನಿರ್ದೇಶನದ ಮೂಲಕ ನಿಭಾಯಿಸಲು ಪ್ರಯತ್ನಿಸಿದ್ದೇನೆ..

 

ಇಂದು ಸಂಜೆ ೬ ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕದ ೨೬ ನೆಯ ಪ್ರದರ್ಶನ

‍ಲೇಖಕರು avadhi

April 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: