ಅನಂತ ಮೆಟ್ಟಿಲುಗಳು

ಲಕ್ಷ್ಮೀದೇವಿ ಪತ್ತಾರ

ಕನಸ ಕಣ್ಣ ಪರದೆ ತುಂಬಾ ಬರೆ ಮೆಟ್ಟಿಲೇ ಮೆಟ್ಟಿಲು
ಆದಿ ಅಂತ್ಯವಿಲ್ಲದ ಮೆಟ್ಟಿಲು
ಮೇಲೆ ನೋಡಿದರೂ ಕೊನೆ ಕಾಣದ ಮೆಟ್ಟಿಲು
ಕೆಳಗೆ ಬಗ್ಗಿದರೆ ಭಯಗೊಳಿಸುವ ತಳವಿಲ್ಲದ
ಪಾತಾಳಯಕ್ಕಿಳಿಯುವ ಮೆಟ್ಟಿಲು
ಮತ್ತೆ ಇಕ್ಕೆಲಗಳಲ್ಲಿ ಅವೆ ಮೆಟ್ಟಿಲು

ನನ್ನ ಮೇಲೆ ಬಹಳ ಎತ್ತರದಲ್ಲಿ ಏರುತ್ತಲೇ ಇದ್ದರು ಹಲವರು
ಅವರಲ್ಲಿ ಕೆಲವರು ಹಿಂದೆ ನೋಡದೆ ಹತ್ತುತ್ತಲೆ ಇದ್ದರು ಮೆಟ್ಟಿಲು
ಕೆಲವರು ಹಿಂದೆ ನೋಡಿ ನನ್ನನು ಬಾ ಎಂದು ಕರೆಯುತ್ತಿದ್ದರು

ಮುಂದಿನವರನ್ನು ನೋಡಿ ಹುಮ್ಮಸ್ಸಿನಿಂದ ಮೇಲೇರುತ್ತಿದ್ದರೆ
ಕೆಳಗೆ ಕಾಲು ಹಿಡಿದು ಎಳೆಯುತ್ತಿದ್ದರು ಕೆಳಗಿದ್ದವರು
ಅಬ್ಬಾ ಪುಣ್ಯಕ್ಕೆ ಜೊತೆಗಿದ್ದ ಒಬ್ಬಿಬ್ಬರು ಕೆಳಗೆ ಬೀಳದಂತೆ
ಕೈಹಿಡಿದು ನಡೆಸುತ್ತಿದ್ದರು ದೇವರಂತವರು

ದೇವರೇ ಬರೆ ಮೆಟ್ಟಿಲೇರಿಳಿಯುವುದೆ ಜೀವನವೇ ಎನ್ನುವಂತೆ
ಕಣ್ಣು ಹಾಯಿಸಿದಲ್ಲೆಲ್ಲ ಬರೇ ಮೆಟ್ಟಿಲು ಮೆಟ್ಟಿಲು
ಏರಿ, ಏರಿ ಏರುತ್ತಲೇ ಇದ್ದೆ ಮುಗಿಲಾರದ ಮೆಟ್ಟಿಲು
ದಣಿವಾಯಿತು ಬಿದ್ದರೆ ಹೇಗೆ ಎಂಬ ಯೋಚನೆ ಬಂತು
ಬಿದ್ದರೆ ಅಂತ್ಯ ಕಾಣದ ಪ್ರಪಾತ ಅಂತಿಮ ವಿದಾಯ ಬಾಳಿಗೆ
ಭಯದಿಂದ ಗಾಬರಿಗೊಂಡು ಕಣ್ಣು ಬಿಟ್ಟು ನೋಡಿದರೆ ಅದು ಕನಸೆ?

‍ಲೇಖಕರು Avadhi

December 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: