ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೊಂದು ಸಂಜೆ ಮಳೆ

ಕೇಶವ ಕುಲಕರ್ಣಿ

ಕಲಸುಮೇಲೋಗರ

ಮೀಸೆ ಮೂಡುವ ವಯಸ್ಸಲ್ಲಿ ಗೊತ್ತುಗುರಿಯಿಲ್ಲದೇ ಬೀದಿ ಬೀದಿ ಸುತ್ತುತ್ತಿದ್ದೆ, ರಸ್ತೆ ಬದಿಯ ಗಟಾರ ಎಲ್ಲಿಯವರೆಗೆ ಹೋಗುತ್ತೆ, ಆ ಪುಟ್ಟ ನಾಯಿಮರಿ ಎಲ್ಲಿಯವರೆಗೆ ನನ್ನನ್ನು ಹಿಂಬಾಲಿಸುತ್ತೆ?   ರಸ್ತೆ ಮುಗಿದು ಕಾಲಿಗೆ ಕಲ್ಲು ಚುಚ್ಚುತ್ತಿದ್ದವು

ಚಿತ್ರ: ವೆಂಕಟ್ರಮಣ ಭಟ್

ರಸ್ತೆ ಬದಿಯ ಬಿಲ್‍ಬೋರ್ಡಿನ ಸುಂದರಿ ವರುಷಗಳ ಬಿಸಿಲು ಮಳೆಗೆ ಘಾಸಿಗೊಂಡರೂ ಹುಸಿಮುನಿಸಿನಿಂದ ನನ್ನನ್ನೇ ನೋಡುತ್ತಿರುವಂತೆ   ಮುಗ್ಧತೆಯನ್ನು ನಾನು ಮೆಟ್ಟಿಯಾಗಿತ್ತು ನದಿಯ ಒಳಗೆ ಗಟ್ಟಿ ಮುಳುಗಿಯಾಗಿತ್ತು   ’ಬರಬೇಡ ಇನ್ನೊಂದು ಹೆಜ್ಜೆ’ ಅಲ್ಲೊಂದು ಗುಣುಗುಣು ನನಗೆ ಶ್ಲೋಕವೇ ಆಗಿಹೋಯಿತು ಅದಕ್ಕೆಂದೇ ನಿಂತಲ್ಲೇ ನಿಂತೆ, ಇಲ್ಲ, ಹಿಂದೆ ಸರಿದೆ ನಂಗೊತ್ತಿತ್ತು: ನಂಬಿಕೆ ಒಡೆಯಬಾರದು ಅಳಬಾರದು ತುಂದರೆಯಾಗಬಾರದು   ಮನೆಗೋಡಿ ಬಂದೆ   ಅರೆತೆರೆದ ಬಾಗಿಲಿನಿಂದ ಪಟಪಟ ಹೊಡೆದುಕೊಳ್ಳುತ್ತಿರುವ ಗಾಳಿ ಜೋಮುಹಿಡಿದ ಕಾಲಿಗೆ ಚುಚುತ್ತಿರುವ ನೂರಾರು ಸೂಜಿ ಅಟ್ಟದ ಮೇಲೆ ನನಗಿಂತ ಕೆಟ್ಟದಾಗಿ ಹಾಡುತ್ತಿರುವ ಕಾಗೆ   ಮಳೆಯಲ್ಲಿ ತೊಯ್ದ ತೊಪ್ಪೆಯಾದ ಸುಟ್ಟ ಸಿಗರೇಟು ನಂದಿದ ಗಬ್ಬು ವಾಸನೆ ಮೈತುಂಬ ಮನತುಂಬ ಮನೆತುಂಬ   ಬಾಗಿಲು ಹಾಕಿಕೊಂಡೆ (ಇತ್ತೀಚೆ ನೋಡಿದ ಒಂದು ಸಿನೆಮಾದ ಗುಂಗಿನಲ್ಲಿ ಬರೆದದ್ದು)  ]]>

‍ಲೇಖಕರು G

21 April, 2012

2 Comments

  1. ಅರ್ಕ

    nice write up..!!!

  2. keshav kulkarni

    ಅವಧಿಗೆ, ಚಂದದ ಚಿತ್ರ ಬರೆದ ಭಟ್ರಿಗೆ ವಂದನೆಗಳು. ಪ್ರತಿಕ್ರಿಯಿಸಿದ ಅರ್ಕರಿಗೂ! ಓದಿದ ಎಲ್ಲರಿಗೂ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading