ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣಾ ಚೆನ್ನಣ್ಣಾ..

ಲಾಲ್ ಸಲಾಮ್ ಅಣ್ಣಾ

ವೇಣು ಜಾಲಿಬೆಂಚಿ / ರಾಯಚೂರು

 

ಅಣ್ಣಾ ಚೆನ್ನಣ್ಣಾ

ಬಂಡಾಯದ ನಿಗಿ ನಿಗಿ ಕೆಂಡ ನೀನಣ್ಣಾ….

ನೀ ಹಾಕಿದ ಮಾರ್ಗದಲಿ

ಬಂಡಾಯದ ಹೂ ಅರಳಿತ್ತು ಅಣ್ಣಾ…..

 

ದೀನ ದಲಿತರ ಪಾಡು ಕಂಡು

ಮರ ಮರ ಕೊರಗಿದ ಹೃದಯ

ನಿನ್ನದಣ್ಣಾ…..

 

ಬ್ಯಾನಿ ತಿಂದು

ಬ್ಯಾನಿ ಬಗ್ಗೆ ಪದ ಹಾಡಿದೆ ಅಣ್ಣಾ….

ನೀ ದಲಿತರಿಗೆ ಹೆಗಲು ಕೊಟ್ಟ

ಹಿರಿಯಣ್ಣನಣ್ಣಾ…..

 

ನಿನ್ನ ಮಾತು ಪದವಾಗಿ

ಬಂಡಾಯದ ನಗಾರಿ ಬಾರಿಸಿತ್ತು

ನೋಡಣ್ಣಾ…..

 

ಅಣ್ಣಾ…. ನೀನಮ್ಮ ಕೇರಿಯ ಕರಿಸಿಧ್ಧನ

ಜೀತದ ಬದುಕು ಕಂಡು ಕಣ್ಣೀರಿಟ್ಟೆಯಣ್ಣಾ…..

ಕುತ್ತದಲಿ ಕುದ್ದವರೆಂದು ಕರಿತೆಲಿ ಮಾನವನ ಜೀಪದ ಬರೆದು ಕಣ್ಣು ತೇವ ಮಾಡಿದೆಯಣ್ಣಾ…..

 

ಊರಿಂದೂರಿಗೆ ದಲಿತ ಜ್ಯೋತಿ

ಬೆಳಗಿಸಿ ದಲಿತ ಪ್ರಜ್ಞೆ ಜಾಗೃತಿ ಮಾಡಿದೆ ಅಣ್ಣಾ….

ದಲಿತ ಬಲಿತ ಎಂದವರಿಗೆ ನಿಜಾರ್ಥ ತಿಳಿಸಿ

ಅಲಕ್ಷಿತ ದನಿಗಳಿಗೆ ಬೆಲೆ ತಂದು ಕೊಟ್ಟೆಯಣ್ಣಾ….

 

ಜೀವಮಾನದುದ್ದಕೂ ಸಾಹಿತ್ಯ ರಥ

ತಳ್ಳಿಕೊಂಡು ಬಂದೆಯಣ್ಣಾ..

ಜೀವನದ ತೇರು ಗದ್ದಿಗೆಗೆ ಬಂದು

ನಿಂತಿತಣ್ಣಾ…ನೀ ನಮ್ಮ ದಲಿತರೆದೆಯೆದೆಯಲ್ಲಿ

ಅಮರನಣ್ಣಾ…ನಿನಗಿದೋ ನಮ್ಮೆಲ್ಲರ

ಲಾಲ್ ಸಲಾಮ್ ಅಣ್ಣಾ….

ಲಾಲ್ ಸಲಾಮ್ ಅಣ್ಣಾ…..

 

‍ಲೇಖಕರು avadhi

26 November, 2019

1 Comment

  1. T S SHRAVANA KUMARI

    ನನ್ನದೂ ಒಂದು ಸಲಾಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading