ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಗಲಿಕೆಯ ಬಿಸಿಲಿನಲ್ಲಿ ಒಣಗಿಸುತ್ತಿದ್ದೇನೆ …..

-ಪ್ರಕಾಶ್ ಶ್ರೀನಿವಾಸ್

ದುಃಖಕರ!

ಕತ್ತಲೆಯಲ್ಲೂ ನಿನ್ನ ಕೈ ಹಿಡಿಯಲು

ಅರ್ಹತೆ ಇಲ್ಲವೆಂದೇನೋ…

ನನ್ನ ಕನಸು ಕೂಡ ಬೆಳಕಿನ ಬಾವಿಯಲ್ಲಿ

ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು!

ಬಿಸಿಲು!

ಅಂದು

ನಿನ್ನ ಪ್ರೀತಿಯ ಮಳೆಯಲ್ಲಿ

ನೆನೆದಿದ್ದ ನನ್ನ ಹೃದಯವನ್ನು

ಇಂದು

ಅಗಲಿಕೆಯ ಬಿಸಿಲಿನಲ್ಲಿ ಒಣಗಿಸುತ್ತಿದ್ದೇನೆ ..!

ನೆನೆಪಿರಲಿ!

ಬದುಕಿನ ತಕ್ಕಡಿಯಲ್ಲಿ

ನನ್ನ ಪ್ರೀತಿಯ ತೂಕ ಅಧಿಕವಾದುದರಿಂದಲೇ

ನೀ ನನಗೆ ಎಟುಕದಷ್ಟು ಎತ್ತರಕ್ಕೆ ಹೋಗಿದ್ದು!

ನನ್ನ ಪ್ರೀತಿಯ ಮೊಹರು!

ನಿನ್ನೆ ನೆನೆದು ಗೋಡೆಗೆ ಒರಗುವಾಗೆಲ್ಲ

ನಿನ್ನ ಬಿಂಬದೊಂದಿಗೆ ಬರುವ ಕಣ್ಣೀರು!

ಮಾಲಿ!

ನಿನ್ನ ‘ಅಂದ’ದ ಅರಮನೆಗೆ ರಾಜನಾಗದಿದ್ದರೂ

ನಿನ್ನ ‘ಮನ’ದ ಮಹಲಿಗೆ ಮಾಲಿಯಾಗಲೇ!

ನೆನೆಪು!

ಖರೀದಿಸಲಾಗದ ಸಂಬಂಧಗಳು

ಕೊಟ್ಟ ಎಂದೂ ಕಳೆದೋಗದ ರಸೀದಿ!

ವಿಚಿತ್ರ!

ನಾನು ಬಿಟ್ಟು ಬಿಡು

ಎಂದು ಬೇಡಿಕೊಂಡ ನೆನೆಪುಗಳೆಲ್ಲವೂ

ಮನಸ್ಸನ್ನೇ ಬೀಡು ಮಾಡಿಕೊಂಡಿವೆ!

ವರದಿ!

ಕತ್ತಲೆಯ ದೋಣಿಯಲ್ಲಿ ಸಾಗುತ್ತಿದ ರಾತ್ರಿ!

ಬೆಳಕಿನ ನೀರಿನಲ್ಲಿ ಮಗುಚಿ

ಹಲವರು ಕನಸುಗಳ ಕಣ್ಮರೆ!

ಮೌನ!

ತುಟಿಯ ಬಾಗಿಲು

ಮುಚ್ಚಿದರಿಂದ ಮನದೊಳಗಿದ್ದ

ಅಷ್ಟೂ ಮಾತುಗಳು ಉಸಿರು ಕಟ್ಟಿ ಸತ್ತವು!

‍ಲೇಖಕರು G

13 November, 2012

4 Comments

  1. Divya

    Agalikeya Bisilinalli neevu actually AraLutiddiri.

  2. Yashaswini Nagaraj

    ಸಂತೋಷವಾಗುತ್ತೆ ಗೆಳೆಯ ನಿಮ್ಮ ಬೆಳವಣಿಗೆ ನೋಡಲು. ಯಶಸ್ಸಿನ ಹಾದಿಯು ನಿಮ್ಮದಾಗಲಿ ಎಂದು ಹಾರೈಸುತ್ತೇನೆ

  3. manjunatha dasanapura

    manada matugalu andigu tannagaguvudilla.

  4. sunil

    channagide prakash…
    nimma grahike sulabhavaagi vyaktavaagide 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading