‘ಸುಟ್ಟ ಭಾವದೊಡಲ ಉಸಿರು……’
-ರಮೇಶ್ ನೆಲ್ಲಿಸರ
ಅಗರಬತ್ತಿಯು ಉರಿಯುತ್ತಲೇ ಇದೆ
ಭಾವನೆಗಳನು ನಮಗೆ ಅನುಭವಿಸಲು ಬಿಟ್ಟು.
ಕಡ್ಡಿಯ ಎದೆಗೆ ಬತ್ತಿಯ ಹೊಸೆದವರು
ಬದುಕಿಗಾ? ಅಥವಾ ಸಾವಿಗಾ? ಎಂದು
ಯೋಚಿಸುತ್ತ ಕುಳಿತಿಲ್ಲ
ಕೊಂಡವನಿಗೂ ಇದರ ಪೂರ್ವಾಪರ
ತಿಳಿಯುವ ಉಮೇದಿಲ್ಲ
ಭಾವನೆಗಳನು ಪೋಷಿಸುವ ಅಥವಾ ಸುಡುವ ಧಾವಂತ ಅಷ್ಟೆ…
ಗೋರಿಯ ಮೇಲೆ ಅರ್ಧಸುಟ್ಟ
ಅಗರಬತ್ತಿಯ ಕೆಳಗೆ
ಹಲ್ಲಿಯ ಮರಿಯೊಂದು ಈಗ ತಾನೆ
ಮೊಟ್ಟೆಯೊಡೆದು ಹೊರಜಿಗಿದು
ಆಹ್ಲಾದಕರ ಸುವಾಸನೆಯಲಿ ಕಣ್ಣುಬಿಟ್ಟಿದೆ
ಸಾವಿಗೆ ಕೊಂಡದ್ದು ಬದುಕಿಗೂ
ಉಪಯೋಗವಾಗುವುದೆಂಬ ಸತ್ಯವನು ನಿರೂಪಿಸುತ್ತ
ಅಗರಬತ್ತಿಯು ಪೂರ್ತಿ ಉರಿಯುವ ತನಕ ಕಾಯುವ ಪುರಸೊತ್ತು
ಯಾರಿಗೂ ಇದ್ದಂತಿಲ್ಲ
ಬಂದವರೊಂದಿಗೆ ಹೊಗೆಯೂ ಅದೃಶ್ಯವಾಗಿ
ಹಲ್ಲಿಮರಿಯೂ ಹೊರನಡೆದಿದೆ
ಭಾವನೆಗಳನು ನಮಗೆ ಅನುಭವಿಸಲು ಬಿಟ್ಟು……







chenagide!
nice one..
chennagide
very nice
hosa bageya intha hosa dhani galige sadaa haathoreyuttene..kavite enellaa arthakke chaachikondidhe!..hosabarige bhuumikeyaada avadhige krutajnate
ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಎಲ್ಲರಿಗೂ ಹಾಗೂ ಪ್ರೋತ್ಸಾಹದ ಮಾತುಗಳನ್ನು ತಿಳಿಸಿರುವ ವಾಸುದೇವ್ ನಾಡಿಗ್ ಸರ್ ರವರಿಗೆ ನನ್ನ ಧನ್ಯವಾದಗಳು.
ಧನ್ಯವಾದಗಳು ‘ಅವಧಿ’
ರಮೇಶ್ ನೆಲ್ಲಿಸರ