ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕಾ, ನಿನ್ನ ಗೊರವ ಸಿಕ್ಕನೇನೆ?

sudha-adukula

ಸುಧಾ ಆಡುಕಳ

ಪ್ರೀತಿ ಪದಗಳ ಪಯಣ
ಕನಸು ಜಾರುವ ಹೊತ್ತು
ನಿನ್ನ ಕೈ ಹಿಡಿದೆ, ಪ್ರೀತಿಯ
ತುಂತುರು ಮಳೆ, ಹದವಾದ
ಹೊಂಬಿಸಿಲು, ಮನದಾಗಸದಲ್ಲಿ
ಏಳು ಬಣ್ಣದ ಕಾಮನಬಿಲ್ಲು!

ನಾವು ನಮ್ಮ ನಡುವೆ
ಒಂದು ಗೆರೆ ಎಳೆದೆವು
ಮತ್ತು ಅದನ್ನು ಪ್ರೀತಿಯಿಂದ
ಗೌರವಿಸಿದೆವು, ಆ ಗೆರೆ ಎಷ್ಟು
ತಣ್ಣಗೆ ಮಲಗಿತ್ತು ಮತ್ತು
ನಮ್ಮನ್ನು ಸದ್ದಿಲ್ಲದೇ ಕೊರೆಯಿತು!

pairನನ್ನನ್ನು ನಿನ್ನೊಳಗೆ ಇರಲು ಬಿಡು
ಚೂರೇ ಚೂರು ಜಾಗ ಸಾಕು
ನಿನ್ನ ಹೃದಯದಷ್ಟು!

ಪ್ರೀತಿಯ ಬೆಟ್ಟವೇರುವ ಮಾಯಾಕುದುರೆಯನ್ನು
ನಾನೆಲ್ಲಿಂದ ತರಲಿ?
ಅಕ್ಷರಗಳ ತೇರನ್ನೇರಿ ಹೊರಟಿರುವೆ
ನಿನ್ನ ಸೇರಬೇಕೆಂಬ ಹಠದಲ್ಲಿ
ಮುಟ್ಟಬೇಕೆಂದಿರುವೆ ನಿನ್ನ!

ಹಾಲು ಹೊಯ್ದಂತೆ ಬೆಳ್ಳಗೆ
ಶಾಂತವಾಗಿ ಕುಳಿತಿರುವ ಬುದ್ಧನೆಂದರೆ
ಮನತುಂಬಿ ಬರುವುದು
ಏನು ಮಾಡಲಿ ಹೇಳು?
ನಿನ್ನ ನೆನಪಾದರೆ
ಬುದ್ಧನ ಮೇಲೆಲ್ಲಾ ಬಣ್ಣದೋಕುಳಿ!

ಕನಸಲ್ಲಿ ಬಂದ ದೇವರಲ್ಲಿ
ಏನು ಬೇಡುವುದು?
ಜಗದ ಚೆಲುವನ್ನೊಂದು
ಬೊಗಸೆ ತುಂಬ ನೀಡೆಂದೆ
ಎಚ್ಚರವಾದಾಗ ಬೊಗಸೆಯಲ್ಲಿ
ನಿನ್ನ ಮೊಗವಿತ್ತು!

ಅಕ್ಕಾ, ನಿನ್ನ ಗೊರವ ಸಿಕ್ಕನೇನೆ?
ಎಂದು ಕೇಳಿದೆ
ವಿಷಾದದ ನಗೆ ನಕ್ಕ ಅಕ್ಕ
ನಿನ್ನ ಕೇಳೆಂದಳು!

‍ಲೇಖಕರು Admin

23 November, 2016

2 Comments

  1. HR.sujatha

    Fine sudha

    • Anonymous

      Thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading