ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಜಲಿ ರಾಮಣ್ಣ: ನನಗೆ ಅನುಕ್ಷಣವೂ ಈದ್ ಅದಕ್ಕೆ ನಿಮ್ಮೆಲ್ಲರಿಗೂ ಮುಬಾರಕ್ !

ನಿನ್ನೆ ಜಿ ಎನ್ ಮೋಹನ್ ಅವರು ಬರೆದಿದ್ದ ’ಈದ್ ಮಿಲಾದ್ ನೆಪದಲ್ಲಿ ಮಹಮ್ಮದ್ ಪೈಗಂಬರರಿಗೆ ಸಲಾಂ’ ಲೇಖನಕ್ಕೆ ಅಂಜಲಿ ರಾಮಣ್ಣ ಪ್ರತಿಕ್ರಯಿಸಿದ್ದು ಹೀಗೆ :

ನನಗೆ ಅನುಕ್ಷಣವೂ ಈದ್ ಅದಕ್ಕೆ ನಿಮ್ಮೆಲ್ಲರಿಗೂ ಮುಬಾರಕ್ !

ಎಲ್ಲಕ್ಕೂ ಹೆಣ್ಣಾಗಿ ಮಿಡಿಯುತ್ತೇನೆ. ಓದನ್ನು, ನಾಟಕವನ್ನು, ಸಿನೆಮಾವನ್ನು, ಕಾನೂನನ್ನು ಕಡೆಗೆ ಪ್ರಾಣಿಯನ್ನೂ ಹೆಣ್ಣಿನ ದೃಷ್ಟಿಕೋನದಲ್ಲಿಯೇ ನೋಡುತ್ತೇನೆ.
ಇದು ಹೆಣ್ಣು ಮಾಡಿದ, ಮಾಡುತ್ತಿರುವ ತಪ್ಪು ಅಂತ  ಖಡಾಖಂಡಿತವಾಗಿ ಹೇಳಿಬಿಟ್ಟು ಬೈಸಿಕೊಳ್ಳುವ ಹೊತ್ತಿನಲ್ಲೇ,ಒಂದು ಸಣ್ಣ ಪದವೂ ಅವಳ ಅಸ್ತಿತ್ವಕ್ಕೆ ನೋವು ತರುವಾಗ, ಥೇಟ್ ಶ್ರೀರಾಂಪುರದ ಅಂದರ್ ಬಾಹರ್ ಆಟಗಾರರ ಹಾಗೇ ರೊಚ್ಚಿಗೇಳುತ್ತೇನೆ!
ತಗ್ಗುತ್ತೇನೆ, ಬಗ್ಗುತ್ತೇನೆ, ಹೊಂದಿಕೊಳ್ಳುತ್ತೇನೆ, ನೊಂದ ನವಣೆಯಾಗುತ್ತೇನೆ….ಜೊತೆಗೇ ಎದ್ದು ನಿಲ್ಲುತ್ತೇನೆ, ಹಠವಾಗುತ್ತೇನೆ, ಮಾಡಿಮುಗಿಸಿ ಮೀಸೆ ತಿರುವುವ ಗಂಡಾಗುತ್ತೇನೆ !

ಹೆಣ್ಣು ಮಗುವಿದ್ದರೆ ಹೇಗಿರುತ್ತೆ ನನಗೆ ಗೊತ್ತಿಲ್ಲ ಆದರೆ ಹೆಣ್ಣು ಮಗಳಾಗಿ ಸ್ವರ್ಗಸುಖ ಉಂಡಿದ್ದೇನೆ….. ಯಾವ ಪಶ್ಚಾತ್ತಾಪಗಳಿಗೆಡೆಯಿಲ್ಲದ ಮನುಷ್ಯಳಾಗಿದ್ದೇನೆ…..ಅದಕ್ಕಾಗಿ ಮಾತ್ರವಲ್ಲ, ಪ್ರೀತಿಗಾಗಿ, ಕರ್ತವ್ಯವಾಗಿಯೂ ಹೆಣ್ಣುಭ್ರೂಣ ಹತ್ಯೆಯನ್ನು ಖಂಡಿಸುತ್ತೇನೆ
ಹಿಂದೊಮ್ಮೆ ಶ್ರೀ. ಜಿ.ಎನ್.ಮೋಹನ್ ಅವರ ಜೊತೆ ಆಡಿದ್ದ ಮಾತುಗಳನ್ನು ಅವರು ಹಂಚಿಕೊಂಡಿದ್ದಾರೆ.
ನನಗೆ ಅನುಕ್ಷಣವೂ ಈದ್ ಅದಕ್ಕೆ ನಿಮ್ಮೆಲ್ಲರಿಗೂ ಮುಬಾರಕ್ !
 

‍ಲೇಖಕರು G

15 January, 2014

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. Anil Talikoti

    Totally agree with your views Anjali
    -Anil

  2. Anjali Ramanna

    Avadhi has honoured all daughters….thank you!

  3. Vidyashankar Harapanahalli

    Mubarakh Ho!

  4. samyuktha

    Wah.. kya bath hai! Loved it Anjalee!! Kudos!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading