ʼಬಂಡಾರ ಪ್ರಕಾಶನʼದಲ್ಲಿ ‘ಹೆಣ್ಣುದೇವರು’ ವೆಬಿನಾರ್

ಎಲ್ಲಮ್ಮ ಮೊದಲಾಗಿ ಹಲವು ಹೆಣ್ಣುದೇವರುಗಳು ಕರ್ನಾಟಕದಾದ್ಯಂತ ಎಲ್ಲೆಡೆ ತುಂಬಿಕೊಂಡಿವೆ. ಇವು ಎಲ್ಲವನ್ನೂ ಪೊರೆವ ತಾಯಿಯಾಗಿ, ಎಲ್ಲವನ್ನೂ ತರಿವ ಶಕ್ತಿಯಾಗಿ ನೆಲೆಗೊಂಡಿವೆ. ಇವು ಹೆಚ್ಚಾಗಿ ಒಕ್ಕಲುತನ, ವಿವಿಧ ಕಸುಬು, ಶ್ರಮ ಸಂಸ್ಕೃತಿಗೆ ಸಂಬಂಧಿಸಿದವು. ಇವು ಹೆಚ್ಚಾಗಿ ರಚನೆಯನ್ನು ಹೊಂದಿರದ ಮತ್ತು ರಚನೆಯನ್ನು ತಿರಸ್ಕರಿಸುವಂತವೂ ಆಗಿವೆ. ಸಾವಿರಾರು ವರ್ಷಗಳಿಂದ ಈ ನೆಲದಲ್ಲಿ ಕಾಲಕ್ಕೆ ತಕ್ಕಂತೆ ಬೆಳೆಯುತ್ತಾ ಆಯಾಕಾಲದಲ್ಲಿ ಈ ನೆಲಕ್ಕೆ ಹೊರಗಿನಿಂದ ಬಂದ, ಈ ನೆಲದಲ್ಲಿಯೆಆನಂತರ ಬೆಳೆದ ಪಂತಗಳ ಜೊತೆ ಅನುಸಂದಾನ ನಡೆಸಿಕೊಂಡೆ ಬಂದಿವೆ.

ಹೆಣ್ಣುದೇವರಲ್ಲಿನ ನಂಬಿಕೆ, ಅದಕ್ಕೆ ಸಂಬಂಧಿಸಿದ ಆಚರಣೆ, ಸಂಪ್ರದಾಯ, ವಿಧಿ ನಿಶೇಧಗಳು ಮೊದಲಾದವನ್ನು ಅದ್ಯಯನ ಮಾಡಿದಾಗ ಇವು ಬೆಳೆದು ಬಂದ ಇತಿಹಾಸವನ್ನು, ಅಂದಂದಿನ ಸಾಮಾಜಿಕ ರಚನೆಯನ್ನು ಅರಿತುಕೊಳ್ಳುವುದಕ್ಕೆ ಸಾದ್ಯವಾಗಬಹುದು. ಇದು ಸಮಾಜ, ಸಮಾಜದ ಇತಿಹಾಸ-ಬೆಳವಣಿಗೆ ಇವನ್ನು ಅರಿಯಲು ಸಹಾಯಕವಾಗುತ್ತದೆ. ಹೆಣ್ಣು ದೇವರುಗಳು ಈ ನೆಲದ ಬಹುಸಂಖ್ಯಾತ ಮನುಶ್ಯರ ಮನೋಕೋಶ, ಭಾವಕೋಶ, ಸಮಾಜವನ್ನು ಇಂದಿಗೂ ಆವರಿಸಿಕೊಂಡಿವೆ. ಹಲವು ಹೆಣ್ಣುದೇವರು ಯಾವುದೆ ನಿರ್ದಿಷ್ಟ ಕುಲ-ಜಾತಿ ಕಟ್ಟಳೆಗಳಿಲ್ಲದೆ ಪ್ರದೇಶ-ಭಾಷೆ ನಿರ್ದಿಷ್ಟವಾಗಿಇವೆ.

ಹೆಣ್ಣುದೇವರ ಅಧ್ಯಯನ ಇಲ್ಲವೆನ್ನುವಷ್ಟು ಕಡಿಮೆ, ಆಗಿರುವ ಕೆಲವು ಅಧ್ಯಯನಗಳು ಹಲವು ಮಿತಿಗಳನ್ನು ಹೊಂದಿವೆ. ಹಾಗಾಗಿ ಹೆಣ್ಣುದೇವರ ಅಧ್ಯಯನ ಮಾಡುವುದು ಅತ್ಯವಶ್ಯ, ಅದ್ಯಯನವನ್ನ ಈಗ ಆರಂಭಿಸಬೇಕಿದೆ.

ಇಂತದೊಂದು ಪ್ರಯತ್ನವಾಗಿ ಹೆಣ್ಣುದೇವರ ಅಧ್ಯಯನ-ಪ್ರಕಟಣೆಯಲ್ಲಿ ಆಸಕ್ತಿ ಹೊಂದಿರುವ ಬಂಡಾರ ಪ್ರಕಾಶನ ಮಸ್ಕಿ ತನ್ನ ‘ಬಂಡಾರ ವೆಬಿನಾರ್ ಸರಣಿ’ಯ ಮೊದಲ ಸರಣಿಯಲ್ಲಿ ‘ಹೆಣ್ಣುದೇವರು’ ಎಂಬ ವಿಶಯವನ್ನುಎತ್ತಿಕೊಂಡಿದೆ, ಇದರಲ್ಲಿ ಕನ್ನಡದ ಮಹತ್ವದ ಸಂಶೋಧಕರು ಮಾತನಾಡುತ್ತಿದ್ದಾರೆ. ಈ ಬಾರಿಯ ದಸರಾ ಆಚರಣೆಯಾಗಿ ತಾರೀಕು ೦೭-೧೦-೨೦೨೧ರಿಂದ ೧೫-೧೦-೨೦೨೧ರವರೆಗೆ ಪ್ರತಿದಿನ ಸಂಜೆ ೭.೩೦-೮.೩೦ (ಕೊನೆ ಎರಡು ದಿವಸ ೩.೩೦-೪.೩೦) ಸಮಯದಲ್ಲಿ ಈ ಉಪನ್ಯಾಸಗಳು ನಡೆಯುತ್ತವೆ.

‍ಲೇಖಕರು Admin

October 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: