ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹ್ಯಾಪ್ಪಿ ಬರ್ತ್ ಡೆ ಅಪ್ಪ!

ಬಂಡಾಯದ ಕಾವ್ಯ

ಪ್ರವರ ಕೊಟ್ಟೂರ್

ಬಿಸಿಲ ನುಂಗುವ

ಬಯಲು,

ಚದುರಿದ್ದ ಮೋಡಗಳಿಗೆ

ಕಾವಿಡುತಿದ್ದ ಬಿಸಿಯು,

ಅಲ್ಲೆಲ್ಲೊ ಮರಳು

ಸರಿಯುತಲಿದ್ದ ಸದ್ದು,

ಮೊಬ್ಬು ಚಿತ್ರಗಳ

ಸಾಲು,

ಗಂಟಲು ಹರಿದು

ಕೂಗಿದರೂ ಕೇಳಲೊಲ್ಲದ

ಕಿವಿಯು,

ಸುರಿದಾವಿಯಾದ

ಮೈಯ ಬೆವರು,

ಎಲ್ಲವೂ ನಿತ್ರಾಣ,

ಆದರೂ ಅಲ್ಲೊಂದು

ಗಹನವಾದ ರೇಖೆ,

ರೂಪಾಂತರವಾಗೆ

ಕಲ್ಲಿನೆದೆಯಂಥ

ಬಂಡಾಯ ಕಾವ್ಯವಾಯ್ತು.

(ಅಪ್ಪ, ಹುಟ್ಟು ಹಬ್ಬದ ಶುಭಾಷಯಗಳು)

‍ಲೇಖಕರು G

3 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading