ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹ್ಯಾಪಿ ಹುಟ್ಟುಹಬ್ಬ ‘ಕನ್ನಡ ಪುಸ್ತಕದಂಗಡಿ’

“ಕನ್ನಡ ಪುಸ್ತಕದಂಗಡಿ”ಗೆ ಇವತ್ತಿಗೆ ಒಂದು ವರ್ಷದ ಸಂಭ್ರಮ.

ದೀಪಾ ಡಿ 

ರಾಜಣ್ಣನ ಕನಸು ನನಸಾಗಿ ಇವತ್ತಿಗೆ ಒಂದು ವರ್ಷ ಆಯ್ತೂ..

ನಾನು ಇಲ್ಲಿಗೆ ಮತ್ತೆ ಬರೋಕೆ ಕಾರಣ ಕನ್ನಡ ಪುಸ್ತಕದಂಗಡಿಯ ಆ ಕಾರ್ಯಕ್ರಮದ ನೆನಪುಗಳು ಒಂದು ವರ್ಷ ಆದ್ರೂ ಅಚ್ಚಳಿಯದೆ ಹಾಗೇ ಇವೆ. ಆ ದಿನವನ್ನ ಯಾವತ್ತಿಗೂ ಮರಿಯೋಕೆ ಸಾಧ್ಯವಿಲ್ಲ. ಆ ದಿನನೆ ಪ್ರಕಾಶ ಅಣ್ಣನ ಬರ್ತಡೇ ಇತ್ತು.. ಆ ಸಂಭ್ರಮದ ಜೊತೆ ಇನ್ನೊಂದು ಸಂಭ್ರಮ ಖುಷಿಗೆ ಪಾರವೆ ಇರಲಿಲ್ಲ. ರಾಜಣ್ಣನ ಏನೇ ಕಾರ್ಯಕ್ರಮ ಏರ್ಪಡಿಸಿದರೂ ತಪ್ಪದೆ ನಾ ಹಾಜರು, ಯಾಕಂದ್ರೆ ರಾಜಣ್ಣನ ಭೇಟಿ ಮಾಡೋಕೆ ಸಾಧ್ಯ ಅಂತ.. ದಿನ ಭೇಟಿ ಆದ್ರೆ ಎಲ್ಲಿ ಪ್ರೀತಿ ಕಮ್ಮಿ ಆಗುತ್ತೆ ಅಂತ ಇಲ್ಲೆ ಇದ್ರೂ ನಾ ಭೇಟಿ ಮಾಡೋದ ಅತಿ ವಿರಳ..

ಅವತ್ತಿನ ದಿನ ಸುಮಾ ವೈನಿಯ ಆತ್ಮೀಯ ಮಾತುಗಳು.. ಅವರ ಪ್ರೀತಿನ ಎಷ್ಟು ಹೊಗಳಿದರು ಕಮ್ಮಿನೆ ನಾನು ಸಹ ಅವರ ಕುಟುಂಬದವಳು ಅನ್ನೋ ತರ ಇವತ್ತಿಗೆ ಅದು ಹಾಗೇ ಉಳಿದಿದೆ..

ಪಂಚು ಅಣ್ಣ, ಶಶಿ ಅಣ್ಣ, ಸೋಮು ಅಣ್ಣ, ಅನಿಲ್ ಅಣ್ಣ, ಸುಗೂ ಅಣ್ಣ, ಸುರೇಶ ಅಣ್ಣ, ಪ್ರಕಾಶಣ್ಣ, ಮೌನೇಶ, ಅನಿಲಣ್ಣ, ಸುಮಾ, ಮಧು ಅಕ್ಕ, ವಿಜಯ ಅಕ್ಕ,ರೂಪಕ್ಕ ಹೀಗೆ ಎಲ್ಲರನ್ನೂ ಒಟ್ಟಿಗೆ ಭೇಟಿ ಆಗೋ ಅವಕಾಶ ನನ್ನ ಪಾಲಿಗೆ ಸಿಕ್ತು… ಎಲ್ಲರನ್ನು ಒಂದೆ ಕಡೆ ಭೇಟಿ ಆಗೋ ಖುಷಿ ಎಷ್ಟೆ ಅಕ್ಷರಗಳಲ್ಲಿ ವರ್ಣಿಸಿದರು ಕಮ್ಮಿನೆ..

ಪ್ರತಿ ಸಲ ಪುಸ್ತಕದಂಗಡಿಗೆ ಹೋದ್ರೂ ರಾಜಣ್ಣನ ಅಂತಃಕರಣ ನಮ್ಮನ್ನ ಬೇಗ ಸೆಳಿಯುತ್ತೆ..

ಹ್ಯಾಪಿ ಹುಟ್ಟುಹಬ್ಬ “ಕನ್ನಡ ಪುಸ್ತಕದಂಗಡಿ”

 

 

‍ಲೇಖಕರು avadhi

9 February, 2020

1 Comment

  1. Kotresh

    ಕನ್ನಡ ಪುಸ್ತಕ ಅಂಗಡಿ ಬೆಳೆಯಲಿ.
    ಒಳ್ಳೆಯದಾಗಲಿ ರಾಜಕುಮಾರ್ ಮಡಿವಾಳರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading