ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೌದು.. ಕೋರೋನಾ ಒಳ್ಳೆಯದೇ

ಶೋಭಾ ದಿನೇಶ್ 

ಹಳಿಯ ಮೇಲಿನ ರೈಲಿನಂತೆ ಅಕ್ಕ ಪಕ್ಕ ನೋಡದೆ ಚಲಿಸುತ್ತಿದ್ದ ಬದುಕಿಗೆ
ಗಕ್ಕನೇ ಬ್ರೇಕ್ ಬಿದ್ದಿದೆ
ಇತಿಹಾಸದ ಯಾವುದೋ ಕ್ಷಣದಲ್ಲಿ, ತಿರುವಿ ಹಾಕದ ಯಾವುದೋ ಪುಟದಂತೆ
ಇಲ್ಲಿ ಸಮಯ ಸ್ಥಬ್ಧ, ಕಾಲನಿಂತುಹೋಗಿದೆ

ಎಲ್ಲರೂ ತಮ್ಮ ತಮ್ಮ ಹುದ್ದೆ, ಪದವಿ, ಕಿರೀಟಗಳನ್ನು ಕಳಚಿಟ್ಟಿದ್ದಾರೆ
ನಟಿಸುವುದನ್ನೂ ನಿಲ್ಲಿಸಿದ್ದಾರೆ.
ವೇಗದ ನಶೆ ಇಳಿದಿದೆ, ಇಲ್ಲೀಗ ಓಟವಿಲ್ಲ, ಏದುರುಸಿಲ್ಲ, ಆಯಾಸವಿಲ್ಲ.
ಎದೆಯಲ್ಲಿ ಇಟ್ಟುಕೊಂಡು ತಿರುಗುತ್ತಿದ್ದ ಹಗೆ, ಬೆಂಕಿ ಕರಗಹತ್ತಿದೆ

ಹೆಪ್ಪುಗಟ್ಟಿದ್ದ ಮೌನಗಳು ಮುರಿಯುತ್ತಿವೆ, ಮಾತಾಗಿ ಹರಿದು ಸಂವಾದಗಳಾಗುತ್ತಿವೆ
ಸಂಬಂಧದ ಕೊಂಡಿಗಳು ಮೆಲ್ಲನೆ ಕೂಡಿಕೊಳ್ಳುತ್ತಿವೆ
ಮನುಷ್ಯ ಮನುಷ್ಯನ ನಡುವೆ, ಜಾತಿ ಜಾತಿಯ ನಡುವೆ,
ಧರ‍್ಮ ಧರ‍್ಮದ ನಡುವೆ ಮಸೆಯುತ್ತಿದ್ದ ಬಿಗುಮಾನದ ಕತ್ತಿ,
ಬಂದೂಕುಗಳು ತಣ್ಣಗಾಗಿವೆ, ಬಾಂಬುಗಳು ಮೂಲೆಗುಂಪಾಗಿವೆ

ಈ ಬಾರಿ ಬದುಕು ಅನಂತ ಅವಕಾಶ ನೀಡಿದೆ
ಬದುಕಲು ಪುರುಸೊತ್ತಿಲ್ಲದ ಬದುಕಿನಲ್ಲೀಗ ಸಾವಕಾಶ ಸಮಯವಿದೆ
ಬದುಕದೆ ಬಿಟ್ಟ ಕ್ಷಣಗಳು ನೆನಪಾಗುತ್ತಿವೆ
ಪ್ರಕ್ಷುಬ್ದ ಮನಸ್ಸುಗಳು ಶಾಂತವಾಗುತ್ತಿವೆ, ಕಳೆ ಕಿತ್ತು, ಕೊಳೆ ತೊಳೆದ ನಿಚ್ಚಳವಾದ ಭಾವ
ನಿಧಾನವಾಗಿ ಹಿಂದಿರುಗುತ್ತಿದ್ದೇವೆ, ಬಿಟ್ಟು ಬಂದ ಸಹಜ ಬದುಕಿನತ್ತ

ಹೌದು.. ಕೋರೋನಾ ಒಳ್ಳೆಯದೇ

‍ಲೇಖಕರು avadhi

3 April, 2020

1 Comment

  1. N b kajjari

    ತುಂಬಾ ಚನ್ನಾಗಿ ಮೂಡಿ ಬಂದಿದೆ. ವ್ಯಕ್ತಿ, ಸಾಮುದಾಯಿಕ ಭಾವನೆಗಳನ್ನು ಎತ್ತಿ ತೋರಿಸಿರುವಿರಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading