ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ


ಶ್ರೀದೇವಿ ದಡ ದಢ ಹೆಜ್ಜೆ ಹಾಕುತ್ತಾ ನನ್ನ ಕ್ಯಾಬಿನ್ ನತ್ತ ಬರುತ್ತಿರುವುದನ್ನು ನೋಡಿದಾಗಲೇ ನನಗೆ ಗೊತ್ತಾಯ್ತು. ಇವತ್ತೇನೋ ಗ್ರಹಚಾರ ಕಾದಿದೆ ಅಂತ. ಕ್ಯಾಬಿನ್ ಒಳಗೆ ಬಂದವಳೇ  ‘ಪ್ರೋಮೋದಲ್ಲಿರುವ ಆ ಲೈನ್ ತೆಗೀಲೇ ಬೇಕು’ ಅಂದಳು. ನಾನು ಯಾವ ಪ್ರೋಮೋ ಎಂದು ಏನೂ ಗೊತ್ತಿಲ್ಲದವನಂತೆ ಕೇಳಿದೆ. ಅದೇ ನ್ಯೂಸ್ ರೀಡರ್ ಗಳು ಬೇಕು ಅಂತ ಬರ್ತಾ ಇದೆಯಲ್ಲ ಆ ಪ್ರೋಮೋ..’ನೋಡೋದಿಕ್ಕೆ ಚಂದ ಇರ್ಬೇಕು ಅಂದರೇನು ಸಾರ್. ಚಂದ ಇಲ್ದೆ ಇದ್ರೂ ನ್ಯೂಸ್ ಗೊತ್ತಿದ್ದರೆ ಸಾಕಾಗಲ್ವಾ. ನೀವೂ ಹೀಗೆ ಯೋಚನೆ ಮಾಡ್ತೀರಾ ಅಂದುಕೊಂಡಿರಲಿಲ್ಲ’ ಅಂತ ಒಂದೊಂದೇ ಬುಲೆಟ್ ಅನ್ನ ಎದೆಗೆ ಅಪ್ಪಳಿಸುತ್ತಾ ಹೋದಳು. ಲೈಫ್ ಜ್ಯಾಕೆಟ್ ಧರಿಸದೇ ಇವತ್ತು ಯಾವ್ ನ್ಯೂಸ್ ಪೇಪರ್, ಚಾನಲ್ ನ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ!!. ನಾನು ಕೆಲಸ ಮಾಡುತ್ತಿದ್ದುದು ಈ ಟಿ ವಿ ಗರಡಿಯಲ್ಲಿ. ಮುಂಬೈ ಪೊಲೀಸ್ ಇಲಾಖೆಯಲ್ಲಲ್ಲ. ಹಾಗಾಗಿ ಓಬೀರಾಯನ ಕಾಲದ ಲೈಫ್ ಜ್ಯಾಕೆಟ್ ಹಾಕಿಕೊಂಡು ಸಾವನ್ನಪ್ಪುವ ಪ್ರಮೇಯ ಇರಲಿಲ್ಲ. ಆದ್ದರಿಂದ ನಾನು ಶ್ರೀದೇವಿ ಹೇಳಿದ ಕಾರಣಕ್ಕೆ ಬುದ್ದಿ ಬಂತೇನೋ ಎಂಬಂತೆ ‘ಹೋಗ್ಲಿ ಬಿಡು, ಸರಿ ಮಾಡೋಣ’ ಅಂದೆ.
ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

11 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading