
ಕರ್ನಾಟಕದ ದಲಿತಲೋಕದ ಮೂರ್ನಾಲ್ಕು ದಶಕಗಳ ತಲ್ಲಣಗಳನ್ನು ಅಂಗೈಯಲ್ಲಿಟ್ಟುಕೊಂಡು ಪರಿತಪಿಸಿದವರು ಕೋಟಿಗಾನಹಳ್ಳಿ ರಾಮಯ್ಯ. ಈಚಿನ ನಾಲ್ಕು ವರ್ಷಗಳಿಂದ ಕೋಲಾರದ ಅಂತರಗಂಗೆ ಬೆಟ್ಟಕ್ಕೆ ತಮ್ಮ ‘ಆದಿಮ’ದ ಮೂಲಕ ಹೊಸ ಉಸಿರು ತುಂಬಲು ಹವಣಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯ ಕಲಾತಂಡಗಳು ಹಾಡುವ ಹಾಡುಗಳಿಗೆ ಬೆಳಕಿನ ಬಣ್ಣ ಬಳಿದ ರಾಮಯ್ಯ, ತಮ್ಮ ಅಕ್ಷರಗಳಲ್ಲಿ ಆರ್ದ್ರ ಭಾವನೆಗಳನ್ನು ಬಿಚ್ಚಿಟ್ಟವರು. ಆದಿಮದ ಕೆಲಸಗಳಲ್ಲಿ ಬರೆಯುವುದನ್ನು ಬಿಟ್ಟಿದ್ದ ಅವರು, ಕಳೆದ ಒಂದೆರಡು ತಿಂಗಳಿನಿಂದ ಹೊಸ ಪದ್ಯ ಬರೆಯುತ್ತಿದ್ದಾರೆಂದು ಗುರುಗಳಾದ ಡಾಮ್ನಿಕ್ ಹೇಳಿದಾಗ ‘ಬಯಲು ಗೆಳೆಯರೆಲ್ಲ’ ಖುಷಿ ಪಟ್ಟೆವು..
ನಮ್ಮ ಎರಡನೇ ಶನಿವಾರದ ‘ಬಯಲು’ ಸಭೆಗೆ ರಾಮಯ್ಯ ಬರಲು ಒಪ್ಪಿದ್ದಾರೆ.. ತಮ್ಮ ಹೊಸ ಪದ್ಯಗಳೊಂದಿಗೆ.. ನೀವೂ ಬನ್ನಿ..
ನಮ್ಮೊಂದಿಗೆ ಗುರುಗಳಾದ ಕೆ.ವೈ.ನಾರಾಯಣಸ್ವಾಮಿ, ಡಾಮ್ನಿಕ್, ಮಂಜುನಾಥ ಅದ್ದೆ.. ಇರುತ್ತಾರೆ.
08.01.2011 ಶನಿವಾರ ಮಧ್ಯಾನ್ಹ 4 ಗಂಟೆಗೆ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ..
-ಹುಲಿಕುಂಟೆ ಮೂರ್ತಿ
khushiyatu sir nimmanna nodi. Adimakke barsalu yavaga kaala koodi barutto gottilla.