ಅರ್ಜುನ ಸನ್ಯಾಸಿ
-ಅಕ್ಷಯಕಾಂತ ಬೈಲು
ಕಳ್ಳರು ಕಾಕರು ನುಗ್ಗಿಹರು
ನಿಚ್ಚಳ ಧೈರ್ಯವ ಮಾಡಿ
ಆಯುಧತರಲು ಬೀಗಿ ಓಡಿ
ಕೂಡಿ ಮಲಗಿಪ ಧರ್ಮದಧಿಪತಿ,
ದ್ರೌಪದಿಯ ಶಯ್ಯನದೊಳು
ಬರಿಯಾಗಿ ನೋಡಿದ ಕಣ್ಣೊಳು
ಮಾಡಿದತಪ್ಪಿಗೆ ಪಾಪವು ನೆಟ್ಟಿದೆ
ದ್ವಾರಕೆ ಹಾದಿಯ ತುಳಿದೆ
ಕುರು ಕುಲದೀಪ ಕೌರವನಲ್ಲದೆ
ಇನ್ನಾರು ಸುಭದ್ರೆಯ ಜೊತೆಗೆ
ಯೋಚನಾತೀರದಿ ಬಲರಾಮ
ಕೃಷ್ಣನು ಚತುರನು ತಿರುಗುತ
ನೆಲ್ಲವ ಬಲ್ಲವ ಸರ್ವವ
ಹೇಳದೆ ಮನದೊಳಗೆ
ಯತಿ ಧಿರಿಸಲಿ ಅಜರ್ುನನು
ಪ್ರೀತಿಯ ಹನಿಯು
ದ್ವಾರಕೆ ತಲುಪಿಸಿ
ಸುಭದ್ರೆಯ ಹೊಂದುತಾ
ಪಾಲಕ ವನದವ ತಪದ ಕಪಟವ
ತಿಳಿಯದೆ, ಅರಿಯದೆ ಪ್ರೀತಿಯಕಾಣ್ಗೆಯ
ಸನ್ಯಾಸಿಯ ಪೊಡಮಡುತಾ, ಕರೆತರುತಾ
ಬಲರಾಮ ಬಹುವಾಗಿ ನಮಸ್ಕರಿಸಿ, ಸತ್ಕರಿಸಿ
ತೋಟದ ಶುಭಶೃಂಗಾರದಲಿ ಕುಳ್ಳಿರಿಸಿ
ಸೇವಕರಿಂದ ಮಡಿಯು ತಪ್ಪಿತು
ತಂಗಿಯ ಸೇವೆಗೆ ನೇಮಿಸಿ
ಮೋಹದ ಸೆಲೆಯಆಟದಜಾಲದಿ
ಅಜರ್ುನನ ಮನ ಕುಣಿಕುಣಿದು
ಸೇವೆಯು ಏರಿತು ಜೋರಾಗಿ
ಅರಿತಳು ಕಪಟದ ಸಲುವಾಗಿ
ಧೀರ, ವೀರ ಅಜರ್ುನನೊಡೆ
ಪ್ರೀತಿ ಉಕ್ಕಿತು ಬಲವಾಗಿ
ಯಾರಿಗೂ ಹೇಳದೆ ಕೈಯು
ಸೇರಿತು ಬಿಗಿಯಾಗಿ
ಓಡೋಡಿ ಹೋದರು ಜೋರಾಗಿ,
ಬಹು ಜೋರಾಗಿ
ಸತ್ಯವರಿತ ಬಲರಾಮ
ಬಲದಲಿ ಕೊಲ್ಲಲುಅಜರ್ುನನ
ಚತುರ ಕೃಷ್ಣನ ಆಗಮನ
ಶಾಂತಿಯ ಪೊರೆಯೆ, ಪ್ರೀತಿಯ
ಶೂರಅಜರ್ುನನಗುಣಗಾನ, ಸಮಾಧಾನ






chennaagide akshay