ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇ…ರಾಮ್

ಗಾಂಧಿ

ಸವಿತಾ ನಾಗಭೂಷಣ

 

ಇಲ್ಲವೆಂದರೂ
ಇಲ್ಲವಾಗುವುದೇ?

ನೆನಪು-
ಹುಲ್ಲು ಗರಿಕೆಯಂತೆ
ಹಸಿರಾಗಿದೆ

ಆ ಚಿತ್ರ ಅವನದೇ
ಮಳೆಬಿಲ್ಲಿನಂತೆ
ಭರತ ಖಂಡದ ಮೇಲೆ ಬಾಗಿದೆ
ತಂಗಾಳಿ ಅದನು ತೂಗಿದೆ

ಕಣ್ಣೊಳಗಿನ ಮಿಂಚು
ಭೂಮಂಡಲವ ಬೆಳಗಿದೆ
ನಿಸ್ವಾರ್ಥ ನಗೆ
ಮೂಲೆ ಮೂಲೆಯನೂ ತಾಕಿದೆ

ಸರಕು ಸಂತೆಯಲಿ
ಗೌಜು ಗದ್ದಲದಲಿ
ತುಸು ನೂಲ
ತಾನೇ ನೂಲುತಿದೆ ಚರಕ
‘ಅರಿವೆ’ ಅರಿವೆಂಬ ರೂಪಕ
ಅಳಿಸಲಾಗದು ಅಚ್ಚೊತ್ತಿದಂತಿದೆ

ಅಷ್ಟು ಸುಲಭವಾಗಿ
ಆರದು
ಅವನು ಹಚ್ಚಿದ ದೀವಿಗೆ

‍ಲೇಖಕರು admin

30 January, 2017

2 Comments

  1. ರಘುನಾಥ

    ದೀವಿಗೆಯನ್ನುಆರಿಸಲುಸನ್ನಾಹಗಳುನಡೆಯುತ್ತಿರುವುದುನಿಜ

  2. ಅಕ್ಕಿಮಂಗಲ ಮಂಜುನಾಥ

    ದೀವಿಗೆಯನ್ನು ಆರಿಸಿದ ಮೇಲೆ ಕತ್ತಲಲ್ಲಿ ಕುರುಡರಾಗುವವರು ನಾವೇ ಎಂದು ನಮಗಿನ್ನೂ ಅರ್ಥವಾಗಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading