ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಗಾದರೂ ಕಟ್ಟಬಹುದು ಮಹಲುಗಳನು..

 

 

ವಿನಯಚಂದ್ರ

 

 

 

ಮನೆ ಕಟ್ಟಬೇಕೆಂದರೆ
ಬೇಕಲ್ಲವೆ ಸ್ತಂಭಗಳ ಬಲ
ಸ್ತಂಭಗಳು ಧೃಢವಾಗಬೇಕೆಂದರೆ
ಬೇಕಲ್ಲವೆ ಭದ್ರವಾದ ಬುನಾದಿ
ಗಟ್ಟಿ ಕಲ್ಲುಗಳದೊಂದು ಸ್ತರ
ಮೇಲೆ ಕಬ್ಬಿಣದ ಹಂದರ
ಜೊತೆಗೆ ಮರಳು ಜಲ್ಲಿ ಸಿಮೆಂಟಿನ
ಹದವಾದ ಮಿಶ್ರಣ
ಆಮೇಲೆ ಹೇಗಾದರೂ ಕಟ್ಟಬಹುದು
ಮಹಲುಗಳನು ಸುಂದರ ಸ್ಥಿರ

ಬೀಜ ಮೊಳಕೆಯೊಡೆದಾದ ಮೇಲೆ
ಮೇಲೇರುವುದಿಲ್ಲ ಸುಮ್ಮನೆ
ಹರಡುವುದು ತಳದಲ್ಲೆ ಬೇರುಗಳ ಜಾಲ
ಅರಸುವುದು ಜೀವಜಲದ ಸೆಲೆ
ಆಮೇಲದರ ಊರ್ಧ್ವ ಚಲನ
ಹೇಗಾದರೂ ಬೆಳೆಯಬಹುದು
ಟಿಸಿಲೊಡೆಯಬಹುದು ರೆಂಬೆ ಕೊಂಬೆ

ಮನೆಕಟ್ಟಿಯಾದ ಮೇಲೆ ಬೇರೆ ಏನಿದೆ
ತೃಪ್ತವಾಗಿ ಬದುಕಬೇಕು ಅಷ್ಟೆ
ನಿನ್ನ ನಂಬಿಕೆ ಬಲವಾದ ಮೇಲೆ ಏನಿದೆ
ಪ್ರೇಮಿಸುತ್ತಾ ಹೋಗಬೇಕು ಅಷ್ಟೆ

‍ಲೇಖಕರು Avadhi GK

29 January, 2018

2 Comments

  1. Phani kumar

    ಅಭಿನಂದನೆಗಳು ವಿನಯ್ ರವರೇ. ಚೆನ್ನಾಗಿದೆ

    • ವಿನಯಚಂದ್ರ

      ಧನ್ಯವಾದ ಫಣಿಕುಮಾರ್ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading