ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಣ್ಣಿನ ಕಣ್ಣೀರಿನಿರತಕ್ಕೆ ಸೋತರೂ ಎದ್ದು ನಿಂತಿದ್ದೇನೆ..

ಗಜಲ್

ನಾಗರಾಜ್ ಕಾಂಬಳೆ

ನಿನ್ನ ಮೋಹಕ ಪ್ರೀತಿಯಲ್ಲಿ ಒದ್ದಾಡಿ ಸೋಲೊಪ್ಪಿಕೊಳ್ಳುವ ಇಚ್ಛೇ ನನಗಿಲ್ಲ
ಜಗತ್ತನ್ನು ಗೆಲ್ಲಬೇಕಿದೆ, ನಡುದಾರಿಯಲ್ಲಿ ನಿರಾಯುಧನಾಗಿ ನಿಲ್ಲುವ ಮನಸ್ಸು ನನಗಿಲ್ಲ
 
ಉಪ್ಪು ನೀರು ಗಂಟಲೊಳಗಿಳಿದರೂ ಬೋರ್ಗರೆವ ಕಡಲನ್ನು ಈಜಬೇಕಿದೆ
ರಟ್ಟೆಗೆ ಛಲವನ್ನು ಕಲಿಸಿದ್ದೇನೆ, ಕೈ ಸೋತು ಮದ್ಯೆ ಮುಳುಗುವ ಭಯ ನನಗಿಲ್ಲ
 
ಯಾವುದೇ ತಪ್ಪು ಮಾಡದಿದ್ದರೂ ತಿಪ್ಪೆಯ ಕಸ ಮೈಮೇಲೆ ಚೆಲ್ಲಿದೆ
ಮೈತೊಳೆದುಕೊಳ್ಳುತ್ತೇನೆ ಶುಭ್ರ ತೊರೆಯಿಂದ ಕೊಳಕಂಟುವ ಚಿಂತೆ ನನಗಿಲ್ಲ

ನಿನ್ನ ಅಡ್ಡಾದಿಡ್ಡಿ ಅವಕಾಶವಾದಿ ಸೊಲ್ಲುಗಳು ನನ್ನಿರವನ್ನು ಕದಲಿಸುವುದಿಲ್ಲ
ನಿನ್ನ ಹಳಸಿದ ಮುತ್ತುಗಳ ಪಡೆದು ಪುಳಕಗೊಳ್ಳುವ ಹುಚ್ಚು ಕಾಮನೆ ನನಗಿಲ್ಲ
 
ಪಾಪಿಯೊಬ್ಬ ಹೆಣೆದ ಬಲೆಯೊಳಗೆ ತಾನೇ ಇಳಿದು ಸಾಯುವ ಜೇಡನಂತೆ
ನಿನಗಂಟಿದ ದುರ್ವರ್ತನೆಯ ಜಾಲದೊಳಗಿಳಿದು ನಿರುಪಾಯನಾಗುವ ಇಂಗಿತ ನನಗಿಲ್ಲ
 
ಇಂದಿಲ್ಲ ನಾಳೆ ನನ್ನ ನಂಬಿಕೆಗೆ ಬಲ ಸಿಗುತ್ತದೆ, ಹಸಿರೊಡೆದು ಹಕ್ಕಿ ಉಲಿಯುತ್ತದೆ
ವಂಚಿಸುವ ನಿನ್ನ ಕುಟಿಲತೆಗೆ ಹೊಸದೊಂದು ಬಲಿಯಾಗುವ ಅಸಹಾಯಕತೆ ನನಗಿಲ್ಲ
 
ಹೆಣ್ಣಿನ ಕಣ್ಣೀರಿನಿರತಕ್ಕೆ ಸೋತರೂ ಎದ್ದು ನಿಂತಿದ್ದೇನೆ ಬದ್ದತೆಯುಳಿಸಿಕೊಂಡಿದ್ದೇನೆ
‘ನಾಯಕ’ ಬದಲಾಗಿದ್ದಾನೆ ಬದುಕಿಗಂಜಿ ಗಂಜಿ ನುಂಗಿ ಕೊರಗುವ ಹೃದಯ ನನಗಿಲ್ಲ
 

‍ಲೇಖಕರು G

6 September, 2014

4 Comments

  1. suresh rajamane

    ನಿನ್ನ ಅಡ್ಡಾದಿಡ್ಡಿ ಅವಕಾಶವಾದಿ ಸೊಲ್ಲುಗಳು ನನ್ನಿರವನ್ನು ಕದಲಿಸುವುದಿಲ್ಲ
    ನಿನ್ನ ಹಳಸಿದ ಮುತ್ತುಗಳ ಪಡೆದು ಪುಳಕಗೊಳ್ಳುವ ಹುಚ್ಚು ಕಾಮನೆ ನನಗಿಲ್ಲ
    ಸೂಪರ್ ದೋಸ್ತ.

  2. Anonymous

    chennagide ..

  3. Nagaraj kamble

    Thanku dosth.. thanku

  4. lalithasiddabasavaiah

    ಅಲ್ಲ ಮಾರಾಯ, ಮೋಹಕ ಪ್ರೀತಿ ಒಪ್ಪಿಕೊಂಡರೆ ಜಗತ್ತನ್ನು ಗೆಲ್ಲುವ ಕ್ರಿಯೆಗೆ ಅಪಾಯ, ಆಯುಧ ಕೈ ತಪ್ಪುತ್ತವೆ, ಕಡಲನ್ನು ಈಜುವಾಗ ಡುಬಕ್ಕೆಂದು ಬಿಡುತ್ತೇವೆ ಇತ್ಯಾದಿಗಳೆಲ್ಲ ಯಾಕನ್ನಿಸಿತು ನಿಮಗೆ? ಇಲ್ಲ ನಾಗರಾಜ್ ಮೋಹಕ ಪ್ರೀತಿಯ ಕಣ್ಣೀರಿನಿರಿತವೇ ಇವಕ್ಕೆಲ್ಲ ಅನುಕೂಲವಾಗುವುದೂ ಉಂಟು, ನೋಡುತ್ತಿರಿ ಇನ್ನೆರಡು ವರ್ಷಗಳಲ್ಲಿ ಅಂಥದ್ದೊಂದು ಪದ್ಯ ನೀವೇ ಬರೆದರೂ ಬರೆದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading