
ಗಿರಿಯಪ್ಪ ಅಸಾಂಗಿ
ಹೆಜ್ಜೆ-1
ಅನಾದಿ ಕಾಲದ ಗಾಯಗಳ ಕಣ್ಣೀರಲಿ
ಪುರಾತನ ಗವಿಯಿಂದ ಬಂಡೆಗಳಾಗಿ ಸಿಡಿದು
ಕನಸುಗಳ ನೇಯುತ
ಕಾಲಗರ್ಭದ ಯೋನಿಯಿಂದ ಎದೆಯೆತ್ತಿ ನಿಂತವು ಹೆಜ್ಜೆಗಳು
ಒಂದೊಂದೇ ಹೆಜ್ಜೆಗಳು ಸಹಸ್ರ ಕನಸಿನ ನದಿಯಾಗಿ
ಎಣಿಕೆಗೆ ನಿಲುಕದ ಗರಿಗಳಾಗಿ
ಉರುಳುತ
ಕಡಲ ಹಕ್ಕಿಯ ಬೆಳಕಿನ ಚಿಟ್ಟೆಗಳಾಗಿದವು
ಸಾಗರೋಪಾದಿಯಾಗಿ ಸ್ವಚ್ಛಂದ ವಿಹಾರದ
ನೆನಪುಗಳ ನಕ್ಷತ್ರಗಳಾಗಿ
ನೆಲದ ಬೇರೊಳಗೂ ಇಳಿದು
ಭೂಮಿ ತುಂಬೆಲ್ಲಾ ಚಾಚಿಕೊಂಡವು
ಶಾರ್ಕು ತಿಮಿಂಗಿಲುಗಳ ಕರಿನೆರಳ ಕೊರಳ
ತಿವಿಯುತ
ಕಡಲೊಳಗೆ ದಿಟ್ಟ ಹೆಜ್ಜೆಯೂರುತ
ಮುತ್ತುಗಳಾಗಿ ಬೆಸೆದುಕೊಂಡವು

ಹೆಜ್ಜೆ-2
ಅಲೆಮಾರಿಯ ಜೋಳಿಗೆಯೊಳಗೆ
ಕಲ್ಲು ಕಟೆವ ಕೈಗಳೊಳಗೆ
ಮಣ್ಣು ಹೊರುವ ರಟ್ಟೆಗಳೊಳಗೆ
ಹೊಗೆಯ ಹೊದಿಸಿಕೊಂಡ ಗುಡಿಸಲುಗಳ ತಳದೊಳಗೆ
ಒಡಲ ತಂಬೂರಿ ನುಡಿದವು ಹೆಜ್ಜೆಗಳು
ಉರಿವ ರಸ್ತೆಗಳ ಬಾಯಿಗೆ
ಸಾಲುದೀಪದ ಮರಗಳಾಗಿ
ಬೆವರ ತೆನೆಯ ಮುತ್ತುಗಳಾಗಿ
ಕರಿನೆಲದ ಕಳ್ಳುಬಳ್ಳಿಗಳ ಇರುಕುಗಳಲಿ
ಕರುಳು ಗುಟುಕಿನ ನಾಡಿಗಳಾದವು
ಕೋಟೆಗಳಾದವು ಹೆಜ್ಜೆಗಳು
ಬೆದೆಗೆ ಬಿದ್ದ ಅರಸನ ನೆತ್ತಿಗೆ
ಯಲು ದೀಪದ ಕುಡಿಗಳಾಗಿ
ಉರಿ ಚಿಟ್ಟೆಯ ಕಣ್ಣಾಗಿಯೂ
ಗೋಡೆಗಳ ಮ್ಯಾಲೆ ರಕ್ತದ ಓಲೆಗಳಾಗಿ
ನಿಶ್ಯಬ್ದ ಜಾಣಪದದ ಗುಂಗಾದವು

ಹೆಜ್ಜೆ-3
ಹೊಟ್ಟೆಯೊಳಗ ಆವರಿಸಿಕೊಂಡ
ಕಾಲದ ಶಾಪ ಸಮಾಪ್ತಿ ಗೈಯ್ಯಲು
ಮಣ್ಣ ದನಿಯಾಗಿ
ಕೂರಿಗೆ ಕುಂಟೆ ಮಡಿಕೆಗಳ ಶಾಶ್ವತ ಸಂಗಾತಿಗಳಾಗಲು
ಬೀಜಗಳಾಗಿ ನೆಲದೊಳಗೆ ಅಚ್ಚಾದವು ಹೆಜ್ಜೆಗಳು
ಇರುಳ ಉಂಡವರ ನೆರಳಾಗಿ
ಎದೆಯ ಶಕ್ತಿ ಕುದಿಸಿ
ಒಂಟಿ ಕಡ್ಡಿಯ ಬೇರಾಗಿಯೂ
ವಸಂತ ಗಾಯನ ನುಡಿದವು ಹೆಜ್ಜೆಗಳು

ಹೆಜ್ಜೆ-4
ಗುಲಗಂಜಿ ಕಣ್ಣಿನ ಹೆಜ್ಜೆಗಳೇ ಹಾಗೆ!
ಎದೆಯುರಿಯನು ಬೆಳಕ ಮೂಗಿಗೆ ಒತ್ತಿ
ಹೆಜ್ಜೆಗಂಟಿದ ಜಾಡ್ಯ ತೊಳೆದು
ಋತುಗಾನದ ಚಿಗುರುಗಳಾಗಿ
ಅನುಭವ ಮಂಟಪದ ಬೇರುಗಳಾಗಿ
ಬೋಧಿವೃಕ್ಷವಾಗಿ ಅಚ್ಚಾದವು ಹೆಜ್ಜೆಗಳು
ಈ ಹೆಜ್ಜೆಗಳ ಒಡಲಿಗೆ ಮನುಷ್ಯತ್ವ ಬೆಸೆವ ಕಣ್ಣುಗಳಿವೆ
ಅಗಾಧ ಗುರುತಿನ ಪರಂಪರೆ ನೆಲೆಗಟ್ಟಿದ ಹೆಜ್ಜೆಗಳು
ವರ್ಣ ಬೇಲಿಗಳ ದಾಟಿ
ಜಾತಿ ಗೊಡವೆಗಳ ಮುರಿದು
ಅನಿಷ್ಟಗಳ ದಿಕ್ಕರಿಸಿ
ಮಾನವೀಯ ಅಂತಃಕರಣದ ನೆಲೆಗಳಾಗಿ
ಸಾಗಿವೆ ಸಾಗುತ್ತಿವೆ
ಜನ ಜಾಥಾದ ನುಡಿಗಳಾ





0 Comments