ಸ್ನೇಹಭಾವ
ನಾ ದಿವಾಕರ್

ಕಾರ್ಮೋಡದ ಚುಕ್ಕೆ
ಅಗೋಚರ
ಶ್ವೇತಾಂಬರದ ಚುಕ್ಕೆ
ಅಜರಾಮರ ;
ಮನ ಮಂಥನದ ನಡುವೆ
ಹೊಯ್ದಾಡುವ ಚಂಚಲತೆಗಳ
ಬಿತ್ತ ಎತ್ತ ಹೊರಳಿದರೇನು
ನೋವು ನಿರಂತರ !
ಎಲ್ಲೋ ಚಿಮ್ಮಿದ ಬುಗ್ಗೆ
ಮನವ ಪಲ್ಲವಿಸಿದಾಗ ನೆನಪು
ಮಸುಕಾಗುವುದು ಮಾತು
ಮರೆಯಾಗುವುದು ;
ಅಂತರಂಗದ ಭಾವದಳಲು
ಒಡಲನಪ್ಪಿರುವಾಗ
ಸಾವೆಲ್ಲಿಯದು ನೋವೆಲ್ಲಿಯದು !
ಆಗಸದ ಹನಿಗಳು
ಕನ್ನಡಿಯಾಗಿ ಕಣ್ಣಡಿಯ
ಹನಿ ಪಟಪಟಿಸಿದಾಗ
ಭಾವ ಉಕ್ಕುವುದು
ನಿರ್ಜನತೆಯ ಸೀಳಿ ;
ಮಡುಗಟ್ಟಿದ
ಹೃದಯ ಮೀಟುವುದು
ನಿರ್ಬ್ಭರ್ಾವದ ತಂತುಗಳ !
ನನಸಾಗಲಿ ಬಿಡು ಕನಸುಗಳು
ರಂಗಿಲ್ಲದ ಬದುಕಿಗೆ
ಹಂಗಿನರಮನೆಯೇಕೆ ;
ರೆಕ್ಕೆ ಬಡಿವ ಮುನ್ನ
ರೆಪ್ಪೆಗಳು ತೆರೆದಿರಲಿ
ಸುತ್ತಲಿನ ಕವಲುಗಳು
ಚಿತ್ತದಲಿರಲಿ !





chennaagide..sir.
Good one sir!!
nice one
Thanks to all complements