ಗೀತಾ ಜಿ ಹೆಗಡೆ
ನೀ ಕಾಣದಷ್ಟು ದೂರ ಇದ್ದರೂ ಇಂದು ನಿನ್ನೆಯ ವ್ಯತ್ಯಾಸವಿಲ್ಲ ನನಗೆ.
ನೀ ತೊರೆದು ಹೋಗಬಹುದು ನಿನ್ನೆ ಮೊನ್ನೆಗಳ ಮರೆತು ಆದರೂ ಮಾಸುವುದಿಲ್ಲ ನೆನಪು ನನಗೆ.
ನೀ ನಾನಾಗಿ ಅಗಲಿದರೂ ನಿನ್ನಯ ಅಮಲಲಿ ಸದಾ ಉನ್ಮಾದ ನನಗೆ.
ನೀ ನನ್ನೊಳ ಮನದಾಳದಿ ಬೆರೆತು ಒಂದಾದ ಆ ಗಳಿಗೆ ಮರೆಯಾಗುವುದಿಲ್ಲ ನನಗೆ.
ನೀ ಅಳಿಸಿ ತುಟಿಯ ಮೇಲಿನ ನಗುವ ಧಿಕ್ಕರಿಸಿ ನಡೆದಾಗ ಬಲು ಮೋಜು ನನಗೆ.
ನೀ ಆಡುವ ಮಾತು ಮೋಡಿ ಈಗಲೂ ದಿಲ್ ಖುಷಿ ನನಗೆ.
ನೀ ನಡೆದ ವೈಖರಿಗೆ ಮನಸು ಮುದುಡಿ ಜೀವ ಒದ್ದಾಟ ಒಳಗೊಳಗೆ ನನಗೆ.
ನೀ ಬರುವ ಜರೂರತ್ ಶರಾ ಕಳಿಸಿದ ‘ಗೀತೆ’ ಓದಿ ಹೃದಯ ತಕಧಿಮಿ ತೋಂ ಆಯಿತಲ್ಲ ನನಗೆ.
*************

ನಿನಗಾಗಿ ಗಜಲ್ ಬರೆಯುತ್ತೇನೆ ಹೃದಯ ತುಂಬ ಮೋಹ ತುಂಬಿ ಸಖ.
ನಿನಗಾಗಿ ಮರು ಜನುಮ ಬಯಸಿ ಬದುಕು ಕಟ್ಟುತ್ತೇನೆ ಸಖ.
ನಿನಗಾಗಿ ಸವಿ ನೆನಪಲ್ಲಿ ಹೆಣೆಯುತ್ತೇನೆ ನೂರೆಂಟು ಮೊಹಬ್ಬತ್ ಸಾಲುಗಳ ಸಖ.
ಆದರೆ ನೀ ತಿಳಿಯದಿರು ಎಂದೆಂದೂ ಇದು ಹಸಿ ಹಸಿ ನೆಲದ ಸುಖವೆಂದು ಸಖ.
ನಿನ್ನೊಲುಮೆಯ ಕಿರು ನಗೆಯಲಿ ಅರಳುವವು ನನ್ನೊಳಗೆ ಸಖ.
ಆದರೆ ನೀ ಮರೆಯದಿರು ಎಂದೆಂದೂ ನನ್ನ ಬರಹಕೆ ನೀನೇ ಕಾರಣವೆಂದು ಸಖ.
ನಿನ್ನ ಭರವಸೆಯ ಉಯಿಲಿನಲಿ ನನ್ನ ಮನ ಸದಾ ನರ್ತಿಸುತಿಹುದು ಸಖ.
ನೀ ಒಂದು ಕ್ಷಣ ತೊರೆದರೆ ಎಂದೆಂದೂ “ಗೀತೆ”ಯ ನೆರಳು ಸಾಗದು ಸಖ.






ಕವಿತೆ ಸ್ವಲ್ಪ ತೆಳು ಎನಿಸಿತು
ಇದು ಗಜಲ್ ಬರೆಯುವ ಉದ್ದೇಶದಿಂದ ಬರೆದೆ. ನನ್ನ ಮೊದಲ ಪ್ರಯತ್ನ. ಸ್ವಲ್ಪ ವ್ಯತ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವೆ.
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್.