ಹೃದಯಶಿವ
ಸಂಜೆಯಾಗುತ್ತಲೇ ಸಾಕಿಯನು ಕಂಡಾಗ ಮನಸು ಎಷ್ಟು ಹಗುರ
ಮಧುಶಾಲೆ ಸೂರಿನಡಿ ತಲೆಬಾಗಿ ನಡೆವಾಗ ಮನಸು ಎಷ್ಟು ಹಗುರ
ಈಗ ಬರುವೆನು ಎಂದು ಹೋದವಳ ನೆನೆನೆನೆದು ಘಾಸಿಗೊಳುವ ಘಳಿಗೆ
ಹೀರಿ ಸುರೆಯೌಷಧವ ಮರುಹುಟ್ಟು ಪಡೆವಾಗ ಮನಸು ಎಷ್ಟು ಹಗುರ
ಉರಿವ ದೀಪದ ಸುತ್ತ ಉರಿದ ನನ್ನಂಥವರ ಗಜಲು ಶಾಯರಿ ಬೆಳಗೆ
ಕೆಂಡಗೆನ್ನೆಯ ಹೆಣ್ಣ ಮರೆಯಲೆತ್ನಿಸುವಾಗ ಮನಸು ಎಷ್ಟು ಹಗುರ
ಮಡಿದ ಕನಸುಗಳೆಲ್ಲ ಗಿರಕಿ ಹೊಡೆಯಲು ಸುತ್ತ ಸುಯ್ದು ಸಂತಾಪದಿ
ಮದಿರೆಗಣ್ಣಿಗೆ ಚಿತ್ರ ಅಸ್ಪಷ್ಟವೆನುವಾಗ ಮನಸು ಎಷ್ಟು ಹಗುರ
ಹೇ ‘ಹೃದಯ’ ನಿನ್ನೊಳಗೆ ನೆನಪ ಭೂತಗಳೆಲ್ಲ ಹಸಿವಿನಿಂದ ಕುಣಿಯೆ
ಅವುಗಳ ನಾಲಿಗೆಗೂ ಒಂದಿಷ್ಟು ಬಸಿವಾಗ ಮನಸು ಎಷ್ಟು ಹಗುರ







PADAGALLA BASIDU POREDA E BITHARAVE HAGURA……
SIR SUPER
nice good one..
nice gazal sir