ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೂಬಳ್ಳಿಯಾಗಿ ಹುಟ್ಟುವ…

ಕು ಸ ಮಧುಸೂದನ ರಂಗೇನಹಳ್ಳಿ

ಹಗಲು
ರೆಕ್ಕೆ ಬಿಚ್ಚಲು
ಕದಲಲಾಗದೆ ಕೂತಲ್ಲೇ ಬೇರುಬಿಟ್ಟ ಬೆಟ್ಟ

ಕನಸೇನಲ್ಲ ಕಣ್ಣ ಮುಂದಿನ ನೋಟ
ಉಕ್ಕುವ ಯೌವನದ ಬೆಂಕಿ ಕಾವು
ಸರಿದ ಇರುಳುಗಳ ನೆರಳುಗಳ
ನಟ್ಟ ನಡುವೆ ಸರಳುಗಳ ಸರಸದಾಟ

ಎದೆಯುಬ್ಬಿಸಿ ನಿಂತ ದ್ವಾರಪಾಲಕರ ಭರ್ಜಿಗಳ
ಚೂಪಿಗೆ ಎದೆಯೊಡ್ಡಿ ನಿಂತ ಹರಯದ ಹುರುಪು
ಹೊಸಿಲನೊಡೆದು ಹೆಜ್ಜೆಯಿಟ್ಟವಳುರಿಸಿದ
ಹರಯದ ಜ್ವಾಲೆ

ಸತ್ತುಹೋದವರ ಊರೊಳೆಗೆ ಉಳಿದು
ಹೋಳಿಗೆಯೂಟ ಸವಿದು ತೇಗಿದವರ
ಕತ್ತುಗಳ ಕತ್ತರಿಸುವ ಅಗೋಚರ ಆಯುಧದ ಹರಿತಕ್ಕೆ
ಬೆಚ್ಚಿದ ಮೂಲೋಕ!

ಬಾ ತಂದೆ ಬೀಜ ಬಿತ್ತಿದ ತಪ್ಪಿಗೆ
ಬಾ ತಾಯೇ ಹಡೆದ ತಪ್ಪಿಗೆ
ಬನ್ನಿ ಸೋದರ ಸೋದರಿಯರೆ ನನ್ನ ಜೊತೆ ಹುಟ್ಟಿದ ತಪ್ಪಿಗೀಗ
ನೇಣುಗಂಬವನೇರುವ.

ಮತ್ತೆಂದಾದರೂ
ಕಟುಕರಿರದ ನಾಡಲ್ಲಿ
ಗರಗಸಗಳಿರದ ಕಾಡಲ್ಲಿ
ಹೂಬಳ್ಳಿಯಾಗಿ ಹುಟ್ಟುವ.

‍ಲೇಖಕರು Admin

11 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading