ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹುಚ್ಚು ಹುಡುಗನ ಮೊದಲ ಪ್ರೇಮ ಪತ್ರ..

ಶ್ರೀನಿವಾಸ  ಎಂ


1
ಅಕ್ಷರದ ಹಂಗು ಬೇಕಿಲ್ಲ!.
ಈ ದೇಹದೊಂದಿಗೆ ಬೂದಿಯಾಗಿ,
ಗಾಳಿ, ನೀರಿನೊಂದಿಗೆ ಬೆರೆತು,
ಮಾಯವಾದರೂ ಚಿಂತಿಲ್ಲ..
ನಿನ್ನ ನೆನಪುಗಳನ್ನು ಹಿಡಿದಿಡಲಾರೆ.
2
ಆಲೋಚನೆಗಳಿಗೆ ಬೇಲಿಯಿಲ್ಲ!
ದಿನವಿಡೀ ಹುಚ್ಚು ಹುಚ್ಚು ಯೋಚನೆಗಳು.
ಕನಸು-ನನಸುಗಳೆರಡೂ ಇಲ್ಲಿ ರಕ್ತಸಂಬಂಧಿಗಳು.
ಕೋಡಿ ಬಿದ್ದ ಭಾವನೆಗಳು.
ನೀನೇ ಎಲ್ಲದರಲ್ಲೂ ಅಂತರ್ಗಾಮಿ.
3.
ದಿಕ್ಕಿಲ್ಲದ, ಆದರೆ ಗುರಿಯೆಡೆಗಿನ ಪಯಣ!
ಮನದ ಮೂಲೆಯಲ್ಲಿ ಕಾಣದ ಸ್ಥಳಡೆಡೆಗಿನ ತುಡಿತ.
ನಡೆದಷ್ಟೂ ಮುಗಿಯದ ದಾರಿ.
ಹಸಿವು-ನೀರಡಿಕೆಗಲೇ ಸಂಗಾತಿ.
ನಿನ್ನ ಒಲವಿನ ಶಕ್ತಿಯೊಂದೇ ದಾರಿ ದೀಪ
4
ನಿನ್ನ ಕನಸುಗಳಿವೆ, ನೂರು ನೆನಪುಗಳಿವೆ
ನಿತ್ಯ ನಿನ್ನ ಕಣ್ಣಂಚಿನಲ್ಲಿ ಪದವ ಹುಡುಕುವ ಹುಡುಗ ನಾನು.
ನೆನಪುಗಳ ಹಂಗು ಬೇಕಿಲ್ಲ…ಕನಸುಗಳ ಕೋಟಲೆ ನನಗಿಲ್ಲ.
ನನಸಿನೊಂದಿಗೆ ದಿನಾ ಹೊಸ ಬದುಕು
ನಿನ್ನ ಪ್ರೇಮಕೆ ನಾನು ಋಣಿ!
 

‍ಲೇಖಕರು avadhi

28 April, 2014

2 Comments

  1. mmshaik

    chenda ide..

  2. satish javaregowda

    Hoccha hosa samvedenegala uttama hanigalu shrinivas.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading