ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಬ್ಬ ಪ್ರಜಾ ನಾಯಕ

ಪ್ರಜಾ ನಾಯಕ

ಜಯರಾಜು ವಿ ಕದರನಹಳ್ಳಿ


ಊರಿಗೆಲ್ಲ ನಾಯಕನಿವನು
ನ್ಯಾಯ ಹೇಳುವವನು
ಪ್ರಜಾಪಾಲನಾ ಗುಣ ಧರ್ಮದವನು
ತೋರಿಕೆಗೆ ಮಾತ್ರ
ಮನದ ಒಳಗೆ ಕೋಟಿ ಕೋಟಿ
ಲೂಟಿ ಮಾಡಿ ಕೃಷ್ಣನ
ಜನ್ಮಸ್ಥಳ ಕಂಡು ಬಂದವನು
 
ತುತ್ತು ಅನ್ನಕ್ಕಾಗಿ ಕದ್ದ ಬಡವನ
ಹಿಡಿದು ಊರ ಮುಂದಲ
ದೇವಾಲಯದ ಕಂಬಕ್ಕೆ ಕಟ್ಟಿ
ಕೈಯ ಬಿಗಿದು ಬೆತ್ತದ ರುಚಿ ತೋರಿ
ಪಾಳೆಗಾರನಾಗಿ ಮೆರೆವ ಆದರ್ಶ ವ್ಯಕ್ತಿ
ಹೆಂಡತಿ ಮಕ್ಕಳ ಗೋಳು ಕೇಳದ
ತಪ್ಪಿನ ಅರಿವಿಲ್ಲದ ಪ್ರಜಾಪಾಲಕನಿವನು.
 
ಭಕುತಿಯಲಿ ದೇವರ ಮುಂದೆ
ಆಣೆ ಪ್ರಮಾಣ ಮಾಡಿ
ದೇವರ ಹೆಸರೇಳಿ ಊರ ಜನರ
ಸಂಪತ್ತು ಲೂಟಿ ಮಾಡುವ ಚೋರನಿವನು
ಜನತೆಯ ತೊತ್ತಿನ ಹಣದಿ
ಸಕಲ ಭೋಗ ಜೀವನ ಮಾಡುವ
ತನ್ನೆಂಡತಿ ಮಕ್ಕಳ ಸಂಸಾರದ
ಹಂಗು ಬಿಡದೆ ಬಾಳುವ
ಪ್ರಜಾಪಾಲಕನು ಇವನು
ಊರಿಗೆಲ್ಲ ನಾಯಕನಿವನು
ನ್ಯಾಯ ಹೇಳುವವನೂ ಇವನೆ.
 

‍ಲೇಖಕರು G

9 February, 2015

5 Comments

  1. ತಿರುಪತಿ ಭಂಗಿ

    ಕಾವ್ಯ ಚೆನ್ನಾಗಿದೆ

  2. Anonymous

    kaviteya ashaya chennagide

  3. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ; ಪದ್ಯ.

    • aranakatteranganatha

      Thank u

  4. mmshaik

    innuu aaLa bEkittu,,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading