ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಸಂವಾದ…

-ಧನಂಜಯ ಕುಲಕರ್ಣಿ ನೆನ್ನೆಯ ದಿನ ನಾನು ಬೆಂಗಳೂರಿನಿಂದ ಹೊಸಪೇಟೆಗೆ ಬಸ್ಸಿನಲ್ಲಿ ಬರುತ್ತಿದ್ದಾಗ ನನ್ನ ಪಕ್ಕದಲ್ಲಿ ಕುಳಿತ ಪ್ರಯಾಣಿಕ ಇನ್ನೊಬ್ಬರೊಂದಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತದ್ದ. ಅದೂ ಸ್ಪೀಕರ್ ಫೋನ್ ಆನ್ ಮಾಡಿ !!! ಅವರಿಬ್ಬರ ನಡುವೆ ನಡೆದ ಸಂಭಾಷಣೆ ತುಂಬಾ ಖುಷಿ ಕೊಟ್ಟಿತು.

ಇವನು: ಈರೇಷಿ ಎಲ್ಲದೀ? ಈರೇಷಿ: ನಾನೆಲ್ಲೋಗ್ಲಣ್ಣ..ಇಲ್ಲೆ ಬೆಂಗಳೂರಿನ್ಯಾಗದೀನಿ..ದುಡಕಂಬ್ ತಿನ್ನೋ ಜೀವ..ನೀನೆಲ್ಲದೀ? ಇವನು: ನಾನು ಬೆಂಗಳೂರಿಗೆ ಬಂದಿದ್ದೆ..ಈಗ ಮತ್ತ ಹೊಸಪೇಟಿಗೆ ಹೊಂಟೀನಿ… ಈರೇಷಿ: ಏ..ಅದೇನಣ್ಣ ಹೀಂಗ..ಬಂದು ಒಂದು ಫೋನ್ ಹಾಕಬಾರ್ದೇನ್? ಹೆಂಗ ಬಂದಿ..ಬಸ್ಸಾ, ಟ್ರೇನಾ? ಇವನು: ಐ..ಅದು ಬಿಡು ಈರೇಷಿ..ಆಲ್ ಆಫ್ ಎ ಸಡನ್..(ಇನ್ನೇನೋ ಹೇಳುವವನಿದ್ದ..ಅಷ್ಟರಲ್ಲಿ) ಇರೇಷಿ: ಏ ಅದ್ಯಾವುದಣ್ಣ…ಆಲ್ ಆಫ್ ಎ ಸಡನ್…..ಹೊಸ ಬಸ್ಸಾ?????]]>

‍ಲೇಖಕರು G

13 December, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading