ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಪ್ರೇಮ ಪತ್ರ

ಡಾ. ಪ್ರೇಮಲತ ಬಿ

ಕೊನೆಗೂ ನಿರ್ಧರಿಸಿದೆ
ಈ ವರ್ಷವಾದರೂ ಕಳಿಸಬೇಕೆಂದು
ನನ್ನ ಪ್ರೇಮವ ನಿವೇದಿಸಿಬಿಡಬೇಕೆಂದು

ಅಹೋ ರಾತ್ರಿಗಳಲಿ ಅವಳಿಗೆಂದೇ ಬರೆದ
ಪ್ರೇಮಕಾವ್ಯಗಳನು ಬದಿಗಿಟ್ಟೆ
ಅಂತರ್ಜಾಲ, ಸ್ಮಾರ್ಟ್ ಫೋನ್ಗಳ ಇಂದ್ರಜಾಲ
ಕ್ಕೂ ಮುನ್ನ ಬೀಸಿದ ಅವಳ ಪ್ರೇಮಜಾಲ
-ದಿ ಬಯಸದೇ ಬಿದ್ದ ಮಿಕವಾಗಿ ಬರಿದೆ
ಪರಿತಪಿಸುವುದ ಬಿಟ್ಟು ಹೇಳಿಯೇ
ಬಿಡಬೇಕೆಂದು ಪಣ ತೊಟ್ಟೆ


ಗುಪ್ತಜಾಗದಲಿ ಬಚ್ಚಿಟ್ಟ ನನ್ನ ಪ್ರೇಮ ಪತ್ರ
ಅವಳ ಕೈ ಸೇರಿದಾಗ ತನ್ನ ಹೃದಯ
ತೆರೆದು ನನ್ನಾಶಯಗಳ ಅರುಹಲೆಂದು
ಪೋಸ್ಟಿನಲಿ ಕಳಿಸಿಯೇ ಬಿಟ್ಟೆ
ಅವಳದನ್ನು ಮುಚ್ಚಿಟ್ಟು ಏಕಾಂತದಲಿ ಓದಿ
ಹರಿದ ಹಾಳೆಯ ಮಗ್ಗಲುಗಳ ತೀಡಿ
ನಡುವೆ ಮೃದುವಾಗಿ ಮುತ್ತಿಡಲೆಂದು
ಬೇಕಾದಷ್ಟು ಜಾಗ ಖಾಲಿ ಬಿಟ್ಟೆ

ಪತ್ರವನು ತಿರು ತಿರುಗಿಸಿ ನೋಡಿ
ತುಟಿ ಸೆಟೆದು ಪ್ರಶ್ನಾರ್ಥಕ  ಮುಖವ ಮಾಡಿ
ಒಳಗೊಳಗೇ ಈಗಲೂ ಖುಷಿಪಟ್ಟು
ಯಾರದೆಂದು ಎಷ್ಟೇ ತಲೆಕೆಡಿಸಿಕೊಂಡರೂ
ಕಾಣದಿರಬಹುದು ಒಂದಕ್ಷರವೂ
ಬಿಳಿಯ ಖಾಲಿ ಹಾಳೆಯಂತೆಯೇ ನೋಡಿ


ಸ್ವಚ್ಛ, ಗರಿ ಗರಿ, ಅರುಹದಿರುವ ಪ್ರೀತಿ
ನಮ್ಮ ನಡುವೆ ಪ್ರಣಯ ಜರುಗದೇ ಹೋಗಿ
 ಬಿಕ್ಕೆಲ್ಲ ಮನಸ್ಸಿನಲ್ಲೇ ಉಳಿದ ರೀತಿ
ಕಾಲ ಮಗ್ಗುಲ ಹೊರಳಿಸಿ
 ನಮ್ಮ ರೂಪು ಬದಲಿಸಿದರು
ಕದಡದ ಸತ್ಯ ಚಿತ್ತದ  ಪಾಡಿದು
 ಬದಲಾಗದ ಅನನ್ಯ ಪ್ರೇಮವ ಹಾಡಿದು…

‍ಲೇಖಕರು Avadhi

15 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading