ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಗಜ಼ಲ್…

ನವೀನ್ ಮಧುಗಿರಿ


ನೀನು ನನಗೆ ಯಾರೋ ಏನೋ ನನಗೆ ಗೊತ್ತಿಲ್ಲ
ನಾನು ನಿನ್ನನು ಕಾಮಿಸಿದೆನೋ ಪ್ರೇಮಿಸಿದೆನೋ ನನಗೆ ಗೊತ್ತಿಲ್ಲ
 
ನಾನು ದುಂಬಿಯಾದಾಗ ನೀನು ಹೂವಾದೆಯಾ ನನಗೆ ಗೊತ್ತಿಲ್ಲ
ಮಕರಂದ ನಿನ್ನಲ್ಲಿ ನಾನು ಬೇಡಿದೆನೋ ಪಡೆದೆನೋ ನನಗೆ ಗೊತ್ತಿಲ್ಲ
 
ನೂರು ಮುಳ್ಳುಗಳ ನಡುವೆ ಮೆದುವ ಹುಡುಕಿದೆನ ನನಗೆ ಗೊತ್ತಿಲ್ಲ
ಬೆನ್ನಮೇಲೆ ಚುಂಬಿಸುವಾಗ ನೀನು ನಾಚಿದೆಯಾ ನನಗೆ ಗೊತ್ತಿಲ್ಲ
 
ಬೆವರ ಘಮವನು ಮನಸು ಹೀರಿತೆ ನನಗೆ ಗೊತ್ತಿಲ್ಲ
ಆ ಗಳಿಗೆ ಆತ್ಮವಾಡಿದ ಮಾತು ಕೇಳಿತೆ ನನಗೆ ಗೊತ್ತಿಲ್ಲ
 
ಹೇಳು ರಾಧೇ ನಮ್ಮ ಬಂಧಕೆ ಹೆಸರು ಏತಕೆ ನನಗೆ ಗೊತ್ತಿಲ್ಲ
ಜಗದ ಮಾತಿಗೆ ಕಿವಿಗಳೇತಕೆ ನನಗೆ ಗೊತ್ತಿಲ್ಲ
 

‍ಲೇಖಕರು G

5 March, 2015

4 Comments

  1. ಲಕ್ಷ್ಮೀಕಾಂತ ಇಟ್ನಾಳ

    ನವೀನ್ ಜಿ, ಗಜಲ್ ಚನ್ನಾಗಿದೆ.

  2. mmshaik

    good one keep it up……

  3. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ , ಗಜಲ್.

  4. Rohini Satya

    Benneyalli daaravelida haage mrudu,melu,madhura!
    Ghazal chennagide!

Trackbacks/Pingbacks

  1. ಗಜ಼ಲ್ | ನವೀನ ವಾಣಿ - […] http://avadhimag.online/2015/03/05/%e0%b2%b9%e0%b3%80%e0%b2%97%e0%b3%8a%e0%b2%82%e0%b2%a6%e0%b3%81-%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading