ಶಿವಮೊಗ್ಗದ ಕರ್ನಾಟಕ ಸಂಘ ೨೦೧೮ನೇ ಸಾಲಿನ ಪುಸ್ತಕ ಪ್ರಶಸ್ತಿಗಳನ್ನು ಘೋಷಿಸಿದ್ದು ಪ್ರಸಾದ್ ನಾಯ್ಕ್ ಅವರ ‘ಹಾಯ್ ಅಂಗೋಲಾ’ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ
‘ಬಹುರೂಪಿ’ಯ ಪ್ರಕಟಣೆಯಾದ ಈ ವಿಶಿಷ್ಠ ಪ್ರವಾಸ ಕಥನ ‘ಅವಧಿ’ಯಲ್ಲಿ ಅಂಕಣವಾಗಿ ೩೦ ವಾರಗಳ ಕಾಲ ಪ್ರಕಟವಾಗಿತ್ತು
ಈ ಕೃತಿ ಹಾಗೂ ಅಂಕಣಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಪುಸ್ತಕ ಬಹುಮಾನವನ್ನು ಇದೇ ೨೯ ರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಅವರು ಪ್ರದಾನ ಮಾಡಲಿದ್ದಾರೆ
ಪ್ರಶಸ್ತಿ ೧೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.
ಈ ಕೃತಿಯನ್ನು ಕೊಳ್ಳಲು-
ಇಲ್ಲಿ ಕ್ಲಿಕ್ಕಿಸಿ
ಕೆ ಟಿ ಗಟ್ಟಿ ಇನ್ನಿಲ್ಲ: ಶಮ ನಂದಿಬೆಟ್ಟ ಕಂಡ ಕೆ ಟಿ ಗಟ್ಟಿ..
ಕೆ ಟಿ ಗಟ್ಟಿ ಇನ್ನಿಲ್ಲ ಈ ಹಿಂದೆ ಗಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅವರನ್ನು ಹತ್ತಿರದಿಂದ ಕಂಡ ಶಮ ನಂದಿಬೆಟ್ಟ ಕಟ್ಟಿಕೊಟ್ಟ...
0 ಪ್ರತಿಕ್ರಿಯೆಗಳು