ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಣಾದಿ ಚರ್ಚೆ: ಅನುಭವ ಇಲ್ಲದಿದ್ದರೆ ಅಡುಗೂಲಜ್ಜಿಯ ಕಥೆಯಾಗುತ್ತದೆ

ಕಪಿಲ ಪಿ ಹುಮನಾಬಾದೆ ಅವರ ‘ಹಾಣಾದಿ’ ಕಾದಂಬರಿಯನ್ನು ಮತ್ತೊಬ್ಬ ಬರಹಗಾರ ನೂರುಲ್ಲಾ ತ್ಯಾಮಗೊಂಡ್ಲು ವಿಮರ್ಶಿಸಿದ್ದರು

ಅದು ಇಲ್ಲಿದೆ

ಇದಕ್ಕೆ ‘ಅನ್ವೇಷಣೆ’ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಆರ್ ಜಿ ಹಳ್ಳಿ ನಾಗರಾಜ್ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ  

ಸಚಿನ್‌ಕುಮಾರ ಬ.ಹಿರೇಮಠ ಅವರ ಪ್ರತಿಕ್ರಿಯೆ ಇಲ್ಲಿದೆ 

ನಿಮ್ಮ ಅಭಿಪ್ರಾಯಕ್ಕೂ ಸ್ವಾಗತ

avadhimag@gmail.comಗೆ ನಿಮ್ಮ ಅನಿಸಿಕೆ ಕಳಿಸಿ

ಅನುಭವಕ್ಕೆ ದಕ್ಕದ ಬರಹ ಬೂಸವೇ ಸರಿ 

ಬಿದಲೋಟಿ ರಂಗನಾಥ್

ಯಾವುದೇ ಕವಿ ಕಥೆಗಾರ ಕಾದಂಬರಿಕಾರನಿಗೆ ಅನುಭವ ಅತಿಮುಖ್ಯ. ಅನುಭವಕ್ಕೆ ದಕ್ಕದ ಬರಹ ಬೂಸವೆಂದು ನಾನು ಭಾವಿಸುತ್ತೇನೆ. ಯಾವುದೇ ಒಬ್ಬ ಯುವಬರಹಗಾರನಿಗೆ ಬೇಕಿಗಿರುವುದು ಬೆನ್ನುತಟ್ಟಿ ಅಟ್ಟಕೇರಿಸುವುದಲ್ಲ. ಇರುವ ತಪ್ಪುಒಪ್ಪುಗಳನ್ನು ತಿದ್ದಿ ಸರಿಯಾದ ದಾರಿಗೆ ತರುವುದು. ಇಲ್ಲದಿದ್ದಲ್ಲಿ ಬರಹಗಾರನ ಅವಸಾನ ಕಟ್ಟಿಟ್ಟ ಬುತ್ತಿ.

‘ಹಾಣಾದಿ’ ಕಾದಂಬರಿಯೂ ಆ ಲೆಕ್ಕದಲ್ಲಿ ಸೋತಿದೆ. ಲೇಖಕನ ಅವಸರದ ಬರವಣಿಗೆ. ವಾಕ್ಯರಚನೆಯಲ್ಲಿನ ತೊಡಕು, ಬೇಕಿಲ್ಲದ ಸಾಲುಗಳನ್ನು ತಂದು ತುರುಕಿರುವುದು ಕಾದಂಬರಿಯಲ್ಲಿ ಕಾಣಬಹುದು.

ಹಾಣಾದಿ ಕಾದಂಬರಿಯ ಬಗ್ಗೆ ವಿಮರ್ಶಕ ನರೇಂದ್ರ ಪೈ ಅವರು ಪೆದ್ರೊ ಪರಾಮೊ ಬ ಕೃತಿಯ ನೆರಳು ಇದೆ  ಎಂದು ಬರೆದಾಗಲೇ ಆ ಮೂಲಕೃತಿಯನ್ನು ತರಿಸಿಕೊಂಡು ಓದಲಾರಂಬಿಸಿದೆ. ಹೌದು ಆ ಕೃತಿಯ ವಸ್ತುವೇ ಬೇರೆ ‘ಹಾಣಾದಿ’ಯ ವಸ್ತುವೇ ಬೇರೆಯಾದರೂ ಅದರ ಛಾಯೆ ಹೊತ್ತೇ ನಡೆದಂತೆ ಕಾಣುತ್ತದೆ.

ಮೂಲ ಕಾದಂಬರಿಯಲ್ಲಿ ಬರುವ ಸನ್ನಿವೇಶ ಸಂದರ್ಭಗಳು ‘ಹಾಣಾದಿ’ಯಲ್ಲೂ ಗೋಚರಿಸುತ್ತವೆ. ಆದರೆ ಮೂಲ ಕಾದಂಬರಿಯಷ್ಟು ‘ಹಾಣಾದಿ’ ತನ್ನ ರೆಕ್ಕೆಗಳನ್ನು ಚಾಚಲು ಸಾಧ್ಯವಾಗಿಲ್ಲ. ಹಾಗೆ ಹಕ್ಕಿಯೊಂದು ರೆಕ್ಕೆ ಬೀಸಿದಾಗ ನೆಲದ ಮೇಲೆ ಕಾಣುವ ನೆರಳಂತೆ ಕಾಣುತ್ತದೆ.

 

ಗೆಳೆಯ ನೂರುಲ್ಲಾ ತ್ಯಾಮಗೊಂಡ್ಲುರವರು ‘ಹಾಣಾದಿ’ ಕಾದಂಬರಿ ಕುರಿತು ವಸ್ತುನಿಷ್ಠ, ಪ್ರಾಮಾಣಿಕ ವಿಮರ್ಶೆಯನ್ನೇ ಮಾಡಿದ್ದಾರೆ.

‘ಅನ್ವೇಷಣೆ’ ಪತ್ರಿಕೆ ಸಂಪಾದಕರಾದ ಆರ್ ಜಿ ಹಳ್ಳಿ ನಾಗರಾಜ ಸರ್ ಹೇಳಿರುವ ಅಷ್ಟೂ ಮಾತುಗಳು ಸತ್ಯ. ಅವರ ಮಾತಿಗೂ ನನ್ನ ಬೆಂಬಲವಿದೆ.

ಯಾವುದೇ ಕಾದಂಬರಿಕಾರನಿಗೆ ಯಾವುದೇ ವಸ್ತುವಿರಲಿ ಅದರಲ್ಲೇ ದಟ್ಟವಾದ ಅನುಭವ ಅತ್ಯಗತ್ಯ. ಇಲ್ಲವಾದರೆ ಅಡುಗೂಲಜ್ಜಿಯ ಕಥೆಯಾಗುತ್ತದೆ. ಭಾಷೆಯನ್ನು ಯಾವುದೇ ಕಾದಂಬರಿಕಾರ ದುಡಿಸಿಕೊಂಡು ಬರೆದಾಗ ಸಿಗುವ ಫಲಿತಾಂಶವೇ ಬೇರೆ. ‘ಹಾಣಾದಿ’ ಕಾದಂಬರಿಯಲ್ಲಿ  ಪೆದ್ರೊ ಪರಾಮೊ ಮೂಲ ಕೃತಿಯ ದಟ್ಟ ಪ್ರಭಾವವಂತೂ ಇದ್ದೇ ಇದೆ.

‍ಲೇಖಕರು avadhi

28 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading