ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡಬೇಡ ಸಂತನೇ ಏನೂ ಕೇಳಿಸುತಿಲ್ಲ..

ನಾಗಶ್ರೀ ಶ್ರೀರಕ್ಷಾ 

ನಾನು ಇರುವುದು ಸುಳ್ಳು ಎನಿಸುತ್ತಿದೆ
ನಿನ್ನ ಹಾಡುವ ಧ್ವನಿಗಳು
ನನ್ನನ್ನು ಇಲ್ಲವಾಗಿಸಿದೆ

longingಯಾವುದೋ ನೀರ ಆಳದಿಂದ,
ಆಕಾಶದ ಹೊಕ್ಕುಳಿಂದ ಮಿಂಚೊಂದು
ಸುಮ್ಮನೆ ಸುತ್ತ ಹರಡಿಕೊಂಡಿದೆ

ನಿನ್ನ ತರಾನಗಳು
ನನ್ನ ಸುಖದ ಕಣ್ಣೀರಲ್ಲಿ
ಹರಿಯುತಿದೆ

ಹಾಡಬೇಡ ಸಂತನೇ
ಏನೂ ಕೇಳಿಸುತಿಲ್ಲ
ಮಲಗಿರುವೆ ನಿನ್ನ ಮಾಯದ ಮಡಿಲಲ್ಲಿ

ಸಾಯುವ ಕಡೆಯ ಘಳಿಗೆಯ
ಸುಖದ ಕೊನೆಯಲ್ಲಾದರೂ
ನಿಲ್ಲಿಸಿಬಿಡು

ಹಾಡಬೇಡ ಗಂಧರ್ವನೇ
ಬೆಟ್ಟದ ಕೆಳಗೆ
ಯಾವುದೋ ನದಿಯ ಸುಳಿಯ ಒಳಹೊಕ್ಕಿರುವೆ

ನಿಲ್ಲಿಸು ಒಮ್ಮೆ
ದುಃಖದ ಕೊನೆಯ ತುಂಡೊಂದು
ಉಳಿದು ಹೋಗಿದೆ

ಮತ್ತೆ ಬೇಡ
ಬೇಡ ಈ ಲೋಕದ ಪ್ರೇಮದೆಳೆಗಳು
ಇಲ್ಲೇ ಮುಗಿದು ಬಿಡಲಿ ಎಲ್ಲವೂ

ಕರಗಿ ಹೋಗಿರುವೆ
ನಟ್ಟ ನಡುವೆ ಒಂದು ಕಡೆ
ಸಣ್ಣ ಬೆಳಕಾಗಿಸು
ನಾನು ಇರುವ ಭ್ರಮೆಯನ್ನೇ
ಕಳಚಿಬಿಡು

‍ಲೇಖಕರು Admin

20 May, 2016

2 Comments

  1. ಗಿರಿಧರ ಕಾರ್ಕಳ

    ಮನ ಮುಟ್ಟುವ ಸಾಲುಗಳು…

  2. ashok shettar

    ಚೆಂದದ ಕವಿತೆ. ನೀರ ಆಳ, ಆಕಾಶದ ಹೊಕ್ಕಳು, ಸುಖದ ಕಣ್ಣೀರು, ನದಿಯ ಸುಳಿ, ದು:ಖದ ಕೊನೆಯ ತುಂಡು, ಲೋಕದ ಪ್ರೇಮದೆಳೆಗಳು, ಸಣ್ಣ ಬೆಳಕು, ಇರುವಿಕೆಯ ಭ್ರಮೆ ಎಲ್ಲವೂ ಮಿಳಿತವಾದ ನಿಮ್ಮ ಕವಿತೆಯ ಮಾಯದ ಮಡಿಲು ಫ್ಯಂಟಾಸ್ಟಿಕ್, ನಾಗಶ್ರೀ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading