ಹಸಿವಿನ ಕವಿತೆ ಬರೆಯುವುದೆಂದರೆ..
ಎಂ ಎಸ್ ಕೃಷ್ಣಮೂರ್ತಿ
ಕರುಳು ಸ್ವಾರ್ಥಿ
ಅದರಲ್ಲೂ ಖಾಲಿ
ಕರುಳು ಮಹಾಸ್ವಾರ್ಥಿ
ತುಂಬಿದ್ದಾಗ ಅಹಂಕಾರದಿಂದ ಮೆರೆಯುತ್ತದೆ
ಖಾಲಿ ಇದ್ದಾಗ ದೇಹದ ಶಕ್ತಿಯನ್ನೆಲ್ಲಾ ತಾನೆ
ತಿಂದು ಬಿಡುತ್ತದೆ
ತಾನೆ ನೆತ್ತರು ಮಾಡುವೆನೆಂಬ ಅಹಂಕಾರದಿಂದ…
ಖಾಲಿ ಇದ್ದ ಆಕ್ರೋಶದಿಂದ…

ಕೆಲವೊಮ್ಮೆ ರಕ್ತಪಾತಗಳನ್ನು ಮಾಡಿಬಿಡುವ ಆತಂಕವಿದೆ
ಹಸಿವಿನ ಕವಿತೆ ಬರೆಯುವುದೆಂದರೆ
ಧಗ ಧಗ ದಗಿಸುವ
ಚಿತಾಗ್ನಿ ದೇಹವನ್ನೇಲ್ಲಾ ವ್ಯಾಪಿಸಿ
ಚಟ್ಟ ಚಟ್ಟ ಚಟ್ಟನೆಂದು ಸಿಡಿಯುವ
ತಲೆಬುರುಡೆಯ ಮಾತಂತೆ….
ಖಾಲಿ ಕರುಳಿನ ಕವಿತೆ ಬರೆಯುವುದೆಂದರೆ…….!!






nice..