-ರಮೇಶ ಅರೋಲಿ
ಮುಸುಕಿದ ಮಬ್ಬಲ್ಲಿ ಹಬ್ಬಿದ ಬೆಳಕೆ
ಮಿಂಚಿನ ಹುಳುವಾಗಿ ಬಂದಿದ್ದೆ ನೆಲಕೆ
ಸಾಹೇಬ ಮತ್ತೊಮ್ಮೆ ಬಾರೊ ಈ ಜಗಕೆ
ಕಣ್ತುಂಬ ನೋಡೊದು ನಮ್ಮಯ ಬಯಕೆ
ಎಳೆದು ತಂದೆ ನೀನು ಎತ್ತಿನ ಬಂಡಿ
ಗೆದ್ದಲು ಬಿದ್ದದ್ದು ಮುದ್ದಾಮು ಕಂಡಿ
ಹರಗಿದ್ದು ತಿರುಗಿ ನೀ ಓದಿಕೊಂಡಿ
ಗುಲಾಮರೆದೆಯ ಕಳಚಿದ ಕೊಂಡಿ

ಪುಣ್ಯ-ಪುರುಷರ ತೊಡೆಗೆ ಮೆದುಳಿಲೆ ಹೊಡೆದೆ
ಬಂಡೆಯ ಮೇಲೊಂದು ಮನುಷ್ಯನ ಕಡೆದೆ
ಪುರಾಣ ಪುಂಗಿಯ ನಡೆಯಲು ಬಿಡದೆ
ಕತ್ತಲು ಮನೆಗೆ ಕಂದೀಲು ಹಿಡಿದೆ
ಬೆವರಿಗೆ ಭಾಷಣ ನಡೆಯದು ಎಂದಿ
ಕೆರೆ ನೀರು ಪಾಲಿಗೆ ಶಾಸನ ತಂದಿ
ಅಂಗಿ ಹಾಕಲು ಒಮ್ಮೆ ಅಂಜಿದ ಮಂದಿ
ನೆನೆದರೆ ಸೂಟಾಗಿ ಅಂಗಳಕೆ ಬಂದಿ
ಹಸಿರಿನ ಆಲದ ಕಬ್ಬಿಣ ಬಿಳಲು
ಕಂಡಿದ್ದು ಕಾಣದ್ದು ಮುಟ್ಟಿ ನೋಡೆನಲು
ಬಿಟ್ಟ ಬಂಡಿಯ ಎಳೆದೆ ಕಾಣದೆ ಇರುಳು
ಎಲ್ಲೆಂದು ನಡೆಯಲಿ ಎಷ್ಟೊಂದು ಕವಲು
ಹಿಂದೆ ಮುಂದೆ ನಡುವೆ ಎಡವಾಗಿ ಬಲವಾಗಿ
ಕಳಚಿ ಬಿಟ್ಟವು ಕೈಯಿ ಹೋಳಾಗಿ
ನೆಟ್ಟ ಮರದ ನೆರಳು ನಡುವಲ್ಲೆ ಬೋಳಾಗಿ
ಇದ್ದ ಗುಬ್ಬಿಯ ಕೊರಳು ಹಾಳಾಗಿ






tumba chennaagide!
ಬೆವರಿಗೆ ಭಾಷಣ ನಡೆಯದು ಎಂದಿ
ಕೆರೆ ನೀರು ಪಾಲಿಗೆ ಶಾಸನ ತಂದಿ
ಅಂಗಿ ಹಾಕಲು ಒಮ್ಮೆ ಅಂಜಿದ ಮಂದಿ
ನೆನೆದರೆ ಸೂಟಾಗಿ ಅಂಗಳಕೆ ಬಂದಿ
Really nice and true lines. Keep it up.
Hi sir., Ambedkar avara mele barida kavite.. tumba channagi ede. entaha halavu kavanagalu nim enda barali anta kayutta ertivi.
prasadinda kudida kvite tumba chennagide…