ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೇ ಮನೆಗೆ ಹೋದಾಗ..

 

 

 

 

 

 

ಕೃಷ್ಣ ಶ್ರೀಕಾಂತ ದೇವಾಂಗಮಠ

 

ಲ್ಯಾಪಟಾಪ್ ನ ಪಾಸವರ್ಡ್
ಮೊಬೈಲನ್ ಕವರ್ ಫೋಟೋ
ಡಿಪಿ ಜೊತೆಗಿನ ಸ್ಟೇಟಸ್
ನೇರವಾಗಿ ನಿನ್ನನ್ನೇ ಧರಿಸುತ್ತವೆ

ಹಾಲಿನ ಉದ್ದ ವಾಟಗೆ ಪ್ರೀತಿಯನ್ನು
ಸುರಿದುಕೊಂಡು ಮನಸ್ಸು ಹಗುರಾಗಿಸಿ
ಮಗ್ಧ ಮತ್ತು ಮುಕ್ತ ಸ್ಧಿತಿಗೆ ತಂದು
ಕೂರಿಸುತ್ತದೆ ಮತ್ತೆ ಮೊದಲಿನಂತೆ
ಮಗುವಾಗದಿರುತ್ತೇನೆಯೇ ?

ಹೃದಯ ತುಂಬಿಬಂದು
ಹೆಜ್ಜೆ ಹೆಜ್ಜೆಗಳು ಮೂಡಿ ಮಾಯವಾಗಿ
ನನ್ನ ಹೆಜ್ಜೆ ಗುರುತೇ ಉಳಿಸಿಕೊಳ್ಳುವುದಿಲ್ಲ
ನೀನು ಜೊತೆಗೆ ಹೆಜ್ಜೆ ಹಾಕಲೇಬೇಕು
ಕೈ ಹಿಡಿದು ಸಂತೆ ಸುತ್ತಿಸಿದಂತೆ

ನಿನ್ನ ಸೀರೆಗಳಿಗಿದ್ದ ಭಾರೀ ಸಾಧ್ಯತೆಗಳು
ನಮ್ಮ ಯಾವ ಬಟ್ಟೆಗಳಿಗೂ ಇಲ್ಲ
ಫ್ರಿಜ್ಜಿನ ತಂಪು, ಮಡಿಕೆಯ ಸುಖ
ಮರೆಸಲು ಸೋಲುತ್ತದಲ್ಲದೇ ಮತ್ತೇನು ?

ಹಾಲು ಕುಡಿದು ಹೆಪ್ಪಾದ ದೇಹಕ್ಕೆ
ಚಿಟಿಗೆ ಉಪ್ಪು ಹಾಕಿ ಮಜ್ಜಿಗೆ ಕಡಿ
ಗಾಜಿನ ಬಳೆಗಳ ಸದ್ದಿಗೆ ತೂಕಡಿಕೆ
ಮಂಪರು ಆವರಿಸಿದರೆ ನಿದ್ದೆಯ ಕತ್ತಲಲಿ
ಬೆಳದಿಂಗಳಾಗಿ ಆವರಿಸಿಕೊಂಡು ಬಿಡು

‍ಲೇಖಕರು avadhi

10 December, 2017

1 Comment

  1. ನೂತನ ದೋಶೆಟ್ಟಿ

    Freshness

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading