-ಹರವು ಸ್ಫೂರ್ತಿಗೌಡ
ನಗು ಮುಖವಾಡದೊಂದಿಗೆ
ನನ್ನನೂ ಸುತ್ತವರಿದ ಸಮಾಜ
ನನಗಿನೂ ಪೂರ್ತಿ ಗೊತ್ತಿಲ್ಲ
ಪ್ರತಿ ದಿನವೂ ಹೊಸ ಪ್ರತಿ ದಿನ
ಮನ ಮನಗಳು ಜಾತ್ರೆ ಗಲಭೆ ಗೊಂದಲಗಳು

ಕೀಲುಗೊಂಬೆ ಆಡಿಸೋನು ಯಾರು
ಮರದಗಾಡಿ, ಕರಿ ಮೇಕೆ, ಕೆಂಪು-ಕಂದು ಹುಂಜ
ಮಾಸಲು ಪಂಚೆ, ಹಸಿರು ಕಾಂತ್ರಿ
ಬಯಲು ಸೀಮೆ ಧೋ ಮಳೆ
ಉಗಿದು ಬಾಯಿನೊಂದು ಸುಮ್ಮನಾದ ನಭ
ಧರಣಿ ಒಡಲೊಳಗಿಂದ ಗಡು ಬೇಸಿಗೆಯ ಕಾವು
ಮಳೆನಿಂತ ಮೇಲೆ; ಜನಮನದಲ್ಲೂ
ದ್ವೇಷದ ಕೆಟ್ಟಗಂಡಸಿನ ಕಾಮಕಣ್ಣಿನ
ರಪ್ಪೆಮುಚ್ಚಿದ ಬೂದಿಕೆಂಡ
ಮನೆ ಸೂರಿನ ಮೇಲೆ
ಸಣ್ಣದೊಂದು ಹೊಗೆ….
ಫ್ಯಾಕ್ಟರಿ ಗುಡುಗುಡು ಆರ್ಭಟ
ಕಲಿಯದೆ, ಅರಿಯದೆ, ತಿಳಿಯದೆ
14ಕ್ಕೆ ಹೊಗೆ ಕುಡಿಯಲು
ಹೊಂಟು ನಿಂತ ಹೈಕಳು
ತಿಪ್ಪೆ ಮೇಲೆ ಕುರಿ, ಕೋಳಿಯ ಕರುಳು
ಎಲ್ಲವೂ ಭುಗಿಲೆದ್ದು, ಬಿಗಿದುಕೊಂಡಾಗ
ಊರಾಚೆ ರಾಮದೇವ ದೇವಾಲಯ…
ನಮ್ಮಡಿಗೆ ಬೆಂಕಿಯಿಟ್ಟ ಹೊಟ್ಟೆ ಸುಟ್ಟಾವೂ
ಸುತ್ತ ದೇವರಕಾಡಿನ ಮರಗಿಡಗಳ ಕೇಕೆ
ಸೇಡು ತೀರಿಸಿಕೊಂಡ ಗರ್ಭ ಗುಡಿಯ ಸೂಪ್ತಿ
ಭವಿಷ್ಯ ತಿಳಿದು ಗೆದ್ದಲು ಹಿಡಿದು ಹೋದನಂತೆ
ಉತ್ಸವ ಗರುಡ ತೇರು..
ಉಳಿದ್ದಿದು ನಾನು; ಮುಂದಿನ ಗರುಡಗಂಬದಲ್ಲಿ
ನನ್ನಂತೇ ಏನು ಅರ್ಥವಾಗದೆ ನಗುವ ಹನುಮಂತ






ಕೀಲುಗೊಂಬೆ ಆಡಿಸೋನು ಯಾರು
ಮರದಗಾಡಿ, ಕರಿ ಮೇಕೆ, ಕೆಂಪು-ಕಂದು ಹುಂಜ
ಮಾಸಲು ಪಂಚೆ, ಹಸಿರು ಕಾಂತ್ರಿ…..
ಹೀಗೆ ಯಾಕೆ ಹೇಳಿದಿರೋ ಗೊತ್ತಿಲ್ಲ…ಆದರೆ ಮನದಲ್ಲಿ ನೆನಪುಗಳ ತೇರು.ಹಾಗೆಯೇ
ಮನೆ ಸೂರಿನ ಮೇಲೆ
ಸಣ್ಣದೊಂದು ಹೊಗೆ….ಈ ಸಾಲುಗಳು ತುಂಬಾ ಮಾರ್ಮಿಕವಾಗಿವೆ.ಧನ್ಯವಾದಗಳು.
ಉಳಿದ್ದಿದು ನಾನು; ಮುಂದಿನ ಗರುಡಗಂಬದಲ್ಲಿ
ನನ್ನಂತೇ ಏನು ಅರ್ಥವಾಗದೆ ನಗುವ ಹನುಮಂತ – ನನಗೆ ಪೂರ್ತಿ ಗೊತ್ತಿಲ್ಲವೆಂದುಕೊಂಡೇ ಮೌನವಾಗಿ ಎಲ್ಲಾ ಗದ್ದಲ ಗೋಜಲು ನೋಡಿಕೊಂಡು ಒಂದು ರೌಂಡು ಹೊಡೆದುಕೊಂಡು ಬಂದಂತಿದೆ ಕವಿತೆ. ಚೆನ್ನಾಗಿದೆ…
Thumba chennagide spoorthiyavare 🙂 🙂
kvite chennagide
’ಮನೆ ಸೂರಿನ ಮೇಲೆ ಸಣ್ಣದೊಂದು ಹೊಗೆ’ ಸಾಲು ನಾಟಿತು. ಚೆನ್ನಾಗಿದೆ.
ಕೀಲುಗೊಂಬೆ ಆಡಿಸೋನು ಯಾರು
ಮರದಗಾಡಿ, ಕರಿ ಮೇಕೆ, ಕೆಂಪು-ಕಂದು ಹುಂಜ
ಮಾಸಲು ಪಂಚೆ, ಹಸಿರು ಕಾಂತ್ರಿ,,tumbaa aptavaada bhaavanegalu….
ಊರಾಚೆ ರಾಮದೇವ ದೇವಾಲಯ…
ನಮ್ಮಡಿಗೆ ಬೆಂಕಿಯಿಟ್ಟ ಹೊಟ್ಟೆ ಸುಟ್ಟಾವೂ
ಸುತ್ತ ದೇವರಕಾಡಿನ ಮರಗಿಡಗಳ ಕೇಕೆ
ಸೇಡು ತೀರಿಸಿಕೊಂಡ ಗರ್ಭ ಗುಡಿಯ ಸೂಪ್ತಿ
ಭವಿಷ್ಯ ತಿಳಿದು ಗೆದ್ದಲು ಹಿಡಿದು ಹೋದನಂತೆ
ಉತ್ಸವ ಗರುಡ ತೇರು..
ಉಳಿದ್ದಿದು ನಾನು; ಮುಂದಿನ ಗರುಡಗಂಬದಲ್ಲಿ
ನನ್ನಂತೇ ಏನು ಅರ್ಥವಾಗದೆ ನಗುವ ಹನುಮಂತ