ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹನ್ನೊಂದು ಹೊಡೆದು ಇನ್ನೊಂದುಳಿದಿದ್ದರೂ..

ಇನ್ನೂ ಹೊತ್ತು ಮುಳುಗಿಲ್ಲ!

jayashree_deshapandeಜಯಶ್ರೀ ದೇಶಪಾಂಡೆ

click_aytu_kaviteಹನ್ನೊಂದು ಹೊಡದು ಇನ್ನೊಂದುಳದಿದ್ದರೂ ಬಿಟ್ಟು ಹೋಗಲಾರದ ಜೀವದ ಹಕ್ಕೀನ
ಎದಿಪಂಜರದೊಳಗ ಕಟ್ಟಿಟ್ಟು
ಕಾದು ಕೂತದ ಅನವರತ,
ತೊಂಬತ್ತರದೊಂದು ಧೋತರದ ಗೊಂಬಿ ಅಲ್ಲಿ ಮನಿಯೊಳಗ..
ಕಣ್ಣೊಳಗ ತುಂಬಿ ನಿನ್ನ ಭವಿಷ್ಯದ ಕನಸ.

ಹೊತ್ತು ಮುಳುಗಿಲ್ಲ ಇನ್ನೂ,
ಮೂರು ನಾಕರ ನಡುವೆ ಬರಕೊಳ್ಳಬೇಕು ಇಡೂ ಹೆಜ್ಜಿಗಳ
ಗುರುತು…
ಇಲ್ಲಾಂದ್ರ ಆಗಿಬಿಟ್ಟೀತು ಬದುಕು
ತೀನ್ ಚೌಕ್ ತೇರಾ ! ತಿಳಕೋ ಹುಡುಗಾ… ಕಾಯೂದಿಲ್ಲಂತ ಕಾಲ ಯಾರಿಗೂ.

ಬೆನ್ನೇರಿ ಕೂತ ಹೊತ್ತು
ಬೆನ್ನೇ ಹತ್ತಿದ್ದು ತಿಳಿ ಮದಲ, ಹೊತ್ತು ಹೊತ್ತಿಗೆ ತಪ್ಲಿಲ್ದೇ
ತೊಗೊಂಡೀತು ಇಟ್ಟಿಲ್ಲದ, ಇಟ್ಟ, ಇಡಬೇಕಾದ…ಇಡುವ ಹೆಜ್ಜಿಗಳ ಲೆಕ್ಕ !

ಹಾದಿ ಹುಡುಕಬೇಕಾದ್ರ ಹಿಂದಿನ ನೀರು, ಮುಂದಿನ ಬಯಲು ದಿಕ್ಕು ತಪ್ಪಿಸ್ಯಾವು ಒಮ್ಮೊಮ್ಮೆ,
ಅವರಿವರು ದಾಟಿದ ಕತ್ರಿ ಚೌಕದ ಹಿಂದೇನು ಮುಂದೇನು ತಿಳೀಬೇಕು
ಹುಡುಗಾ ನೀನು…
ಹಾದೀ ಹಿಡದು ಹೋಗೂದೇ ಹದಾ ತುಂಬೀತು ನಿನ್ನ ಎಳಿ ಜೀವದೆಸಳಿಗೆ !!

ಬೆಳ್ಳಂಬೆಳಗಿನ ಹೊತ್ತು
ಊರ ಅಗಸಿ ತೆರದು ಹೆಬ್ಬಾಗಲು
ಕರದು-ಕಳಿಸಿ ಮಾಡೂವಾಗ
ಎತ್ತಿ ಕಾಲಿನ ಗಾಡಿ,
ತಪ್ಪಲಾರ್ದೆ ಇಟ್ಟ ಒಂದೊಂದು ಹೆಜ್ಜಿಯೂ ಅಲ್ನೋಡು-
ಬರದು ಬಿಡ್ತದ ನಿನ್ನ ಬೆನ್ನಿನ ಪ್ರತಿಬಿಂಬದೊಳಗೇ ನಿನ್ನ ಬದುಕಿನ ಭಾಷ್ಯ !

‍ಲೇಖಕರು Admin

18 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading