ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹನಿಗವಿತೆಗಳು…

ಡಾ ಪ್ರೀತಿ ಕೆ ಎ 

ಕಡಲಿನ ಬಣ್ಣ ನೀಲಿಯಾಗಲು
ಬೆಳಕಿನ ಚದುರುವಿಕೆ ಬೇಕು
ನನ್ನ ಕದಪುಗಳ ಬಣ್ಣ ಕೆಂಪಾಗಲು
ನಿನ್ನ ನೆನಪಿನ ನೇವರಿಕೆ ಸಾಕು..

ನಿನ್ನ ಒಲವ ಹನಿಗಳನ್ನು
ಕುಡಿದೇ ನನ್ನ ತುಟಿಗಳು
ರಂಗೇರಿದ್ದು !

ಎದೆಯೊಳಗೊಂದು ಕವಿತೆ
ಹುಟ್ಟುವುದೆಂದರೆ
ನಿನ್ನ ನೆನಪಿನ ಚೂರೊಂದು
ನನ್ನ ಗುಲಾಬಿ ಕೆನ್ನೆಯಲ್ಲಿ
ಗುಳಿ ಮೂಡಿಸಿದ ಹಾಗೆ..

ಅಂತರವನ್ನು ಅಳೆಯುವುದು
ಮೈಲುಗಳಲ್ಲಲ್ಲ ಹುಡುಗಾ..
ಬಿಟ್ಟ ನಿಟ್ಟುಸಿರುಗಳಲ್ಲಿ..

ಕಾಯುವಿಕೆಯೂ ಇಷ್ಟೊಂದು
ಸುಡುವುದೆಂದು ಗೊತ್ತಿರಲಿಲ್ಲ
ಸ್ವತಃ ಕಾದ ಲೋಹವಾಗುವವರೆಗೆ !

ನೀ ನಿನ್ನನ್ನೇ ಹುಡುಕಿಕೊಂಡು
ಹೋದ ಹಾದಿಯಲ್ಲಿ
ನಾನೆಲ್ಲಾದರೂ ಸಿಕ್ಕರೆ
ಮತ್ತೆ ಮುಗುಳ್ನಗಬೇಡ
ಸಿಕ್ಕಿದ್ದೂ ಕಳಕೊಳ್ಳುವ ಭೀತಿ ಬೇಡ !

‍ಲೇಖಕರು Admin

29 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading