ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹನಿಗಳ ಸರಣಿ… ತೇಜಸ್ವಿ 84 ಪೂಜ್ಯಂತೇ…

ಕುಶ್ವಂತ್ ಕೋಳಿಬೈಲು

೧.
ಬಂತು..
ಹೋಯಿತು,
ಮತ್ತೊಂದು ಇಸವಿ …
ಆ ಲೋಕದಲ್ಲೂ
ಕಾಡು ಸುತ್ತುತ್ತಿರಬಹುದು ತೇಜಸ್ವಿ !!!!

೨.
ಓ ಬಿರಿಯಾನಿ
ಕರಿಯಪ್ಪ..
ತೇಜಸ್ವಿಯವರೊಮ್ಮೆ
ಕರಿಯಪ್ಪ !!

೩.
ಬದುಕಿಗಿಂತ
ದೊಡ್ಡದು ಬರವಣಿಗೆಯಾಗಿರಲಿಲ್ಲ..
ಮೂಗಿಗಿಂತ
ದೊಡ್ಡ ಮೂಗುತಿಯಿರಲಿಲ್ಲ !!!

೪.
ಅದೇ ಗಾಯಗಳನ್ನು ಮತ್ತೆ ಮತ್ತೆ
ಕೆರೆದು ಕೊಂಡರೆ ನೀನು ಸಾಯುತಿ…
ಸರಕು ಕಾಲಿಯಾದ ತಕ್ಷಣ
ಕಾಡು ಸುತ್ತುತ್ತಿದ್ದರು ಆ ಸಾಹಿತಿ !!!

೫.
ಚಪ್ಪಾಳೆ
ಸನ್ಮಾನಗಳಿಂದ
ಮಾರು ದೂರ…
ಹೊಗಳಿಕೆಗಳಿಗೂ
ಅವರದ್ದು
“ನಿರುತ್ತರ” !!!

೬.
ಆಲದ ಮರದ
ಕೆಳಗೆ ಬೆಳೆದರೂ
ಹಣ್ಣು ಕೊಡಬಹುದು..
ಅಪ್ಪನ ಹೆಗಲಿಂದ
ಇಳಿದರಷ್ಟೆ
ಸ್ವಂತ ಬೇರು ಬಿಡಬಹುದು !!!!

೭.
ಪರಿಸರದ ಕಥೆಗಳನ್ನು
ಬೆಂಗಳೂರಿನಲ್ಲಿ
ಕುಳಿತು ಬರೆಯುಬಹುದು…
ಕಲಿಗಾಲವಿದು,
ಕರೆಸ್ಟಾಂಡೆನ್ಸಿನಲ್ಲೂ
ಈಜು ಕಲಿಯಬಹುದು!!!

೮.
ಸಾಹಿತ್ಯ,
ಸವಿಯೂಟದಲ್ಲಿ
ಉಪ್ಪಿನಿಕಾಯಿಯಂತಿರಬೇಕು..
ಪೆನ್ನಿಗಿಂತ
ಜಾಸ್ತಿ ಚಪ್ಪಲಿ ಸವೆಸಬೇಕು !!!!

೯.
ಕರ್ವಾಲೋ
ಕರೆದರೆ
ಅವರೀಗ ಬರಲೂಬಹುದು…
ಆ ಕಥೆಗಳು
ಬದುಕಿರುವಷ್ಟು ದಿನ
ತೇಜಸ್ವಿ ಬದುಕಿರಲೂಬಹುದು !!!!

‍ಲೇಖಕರು Admin

8 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading